ಶ್ರೀ ಥಾವರ್‌ ಚಂದ್‌ ಗೆಹ್ಲೋಟ್
ಘನತೆವೆತ್ತ ರಾಜ್ಯಪಾಲರು

Back
ರಾಜ್ಯಪಾಲರ ಸಾಂವಿಧಾನಿಕ ಪಾತ್ರ

ರಾಜ್ಯಪಾಲರ ಸಂವಿಧಾನಿಕ ಪಾತ್ರ

 

161ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

162ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

163ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

165ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

213ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

ರಾಜ್ಯ ವಿಧಾನಮಂಡಲ

174ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

192ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

200ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

213ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

ಒಕ್ಕೂಟ ಮತ್ತು ರಾಜ್ಯಗಳ ಅಡಿಯಲ್ಲಿನ ಸೇವೆಗಳು

316ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

317ನೇ ಅನುಚ್ಛೇದದ ಮೇಲೆ ಟಿಪ್ಪಣಿಗಳು

 

ಮಾಹಿತಿ ಹಕ್ಕು ಅಧಿನಿಯಮ, 2005ರ ಅಡಿಯಲ್ಲಿ ರಾಜ್ಯಪಾಲರ ಪಾತ್ರ

ಅನುಚ್ಛೇದ -153. ರಾಜ್ಯಗಳ ರಾಜ್ಯಪಾಲರು

ಪ್ರತಿಯೊಂದು ರಾಜ್ಯಕ್ಕೂ ಒಬ್ಬ ರಾಜ್ಯಪಾಲನಿರತಕ್ಕದ್ದು

ಪರಂತು, ಈ ಅನುಚ್ಫೇದದಲ್ಲಿ ಇರುವುದು ಯಾವುದೂ, ಒಬ್ಬನೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ರಾಜ್ಯಪಾಲನನ್ನಾಗಿ ನೇಮಿಸುವುದನ್ನು ಪ್ರತಿಬಂಧಿಸತಕ್ಕದ್ದಲ್ಲ.

ಅನುಚ್ಛೇದ -154. ರಾಜ್ಯದ ಕಾರ್ಯಾಂಗ ಅಧಿಕಾರ

(1) ರಾಜ್ಯದ ಕಾರ್ಯಾಂಗ ಅಧಿಕಾರವು ರಾಜ್ಯಪಾಲನಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅವನು ಅದನ್ನು ನೇರವಾಗಿ ಅಥವಾ ತನಗೆ ಅಧೀನರಾದ ಅಧಿಕಾರಿಗಳ ಮೂಲಕ ಈ ಸಂವಿಧಾನಕ್ಕನುಸಾರವಾಗಿ ಚಲಾಯಿಸತಕ್ಕದ್ದು.

(2) ಈ ಅನುಚ್ಫೇದದಲ್ಲಿ ಇರುವುದು ಯಾವುದೂ,-

(ಎ) ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಮೂಲಕ ಇತರ ಯಾವುದೇ ಪ್ರಾಧಿಕಾರಕ್ಕೆ ಪ್ರದಾನ ಮಾಡಿರುವ ಯಾವುದೇ ಪ್ರಕಾರ್ಯಗಳನ್ನು ರಾಜ್ಯಪಾಲನಿಗೆ ವರ್ಗಾಯಿಸುತ್ತದೆಂದು ಭಾವಿಸತಕ್ಕದ್ದಲ್ಲ; ಅಥವಾ

(ಬಿ) ರಾಜ್ಯಪಾಲನಿಗೆ ಅಧೀನವಾಗಿರುವ ಯಾವುದೇ ಪ್ರಾಧಿಕಾರಕ್ಕೆ ಸಂಸತ್ತು ಅಥವಾ ರಾಜ್ಯದ ವಿಧಾನ ಮಂಡಲವು ಕಾನೂನಿನ ಮೂಲಕ ಪ್ರಕಾರ್ಯಗಳನ್ನು ಪ್ರದಾನ ಮಾಡುವುದನ್ನು ಪ್ರತಿಬಂಧಿಸತಕ್ಕದ್ದಲ್ಲ.

ಅನುಚ್ಛೇದ -155. ರಾಜ್ಯಪಾಲನ ನೇಮಕ

ರಾಷ್ಟ್ರಪತಿಯು ಒಂದು ರಾಜ್ಯದ ರಾಜ್ಯಪಾಲನನ್ನು ತಾನು ಸಹಿ ಮಾಡಿ ಮೊಹರು ಹಾಕಿದ ವಾರಂಟಿನ ಮೂಲಕ ನೇಮಕ ಮಾಡತಕ್ಕದ್ದು.

ಅನುಚ್ಛೇದ -156. ರಾಜ್ಯಪಾಲನ ಪದಾವಧಿ

(1) ರಾಜ್ಯಪಾಲನು ರಾಷ್ಟ್ರಪತಿಯ ಇಷ್ಟಪರ್ಯಂತ ಪದದಲ್ಲಿರತಕ್ಕದ್ದು.

(2) ರಾಜ್ಯಪಾಲನು ತಾನು ಸಹಿ ಮಾಡಿದ ಪತ್ರವನ್ನು ರಾಷ್ಟ್ರಪತಿಗೆ ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು.

(3) ಈ ಅನುಚ್ಫೇದದಲ್ಲಿ ಹಿಂದೆ ಹೇಳಿದ ಉಪಬಂಧಗಳಿಗೊಳಪಟ್ಟು, ರಾಜ್ಯಪಾಲನು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಪದದಲ್ಲಿರತಕ್ಕದ್ದು: ಪರಂತು, ರಾಜ್ಯಪಾಲನು ತನ್ನ ಅವಧಿಯು ಮುಕ್ತಾಯವಾದಾಗ್ಯೂ, ತನ್ನ ಉತ್ತರಾಧಿಕಾರಿಯು ಪದವನ್ನು ವಹಿಸಿಕೊಳ್ಳುವವರೆಗೆ ಆ ಪದದಲ್ಲಿ ಮುಂದುವರಿಯತಕ್ಕದ್ದು.

ಅನುಚ್ಛೇದ -157. ರಾಜ್ಯಪಾಲನಾಗಿ ನೇಮಕಗೊಳ್ಳಲು ಅರ್ಹತೆಗಳು

ಯಾರೇ ವ್ಯಕ್ತಿಯು ಭಾರತದ ನಾಗರಿಕನಾಗಿರುವ ಹೊರತು ಮತ್ತು ಅವನಿಗೆ ಮೂವತ್ತೈದು ವರ್ಷ ವಯಸ್ಸು ಪೂರ್ತಿಯಾಗಿರುವ ಹೊರತು ರಾಜ್ಯಪಾಲನಾಗಿ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದಲ್ಲ.

ಅನುಚ್ಛೇದ -158. ರಾಜ್ಯಪಾಲನ ಪದದ ಷರತ್ತುಗಳು

(1) ರಾಜ್ಯಪಾಲನು ಸಂಸತ್ತಿನ ಯಾವುದೇ ಒಂದು ಸದನದ ಅಥವಾ ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಒಂದು ಸದನದ ಸದಸ್ಯನೊಬ್ಬನು ರಾಜ್ಯಪಾಲನಾಗಿ ನೇಮಕಗೊಂಡರೆ, ಅವನು ರಾಜ್ಯಪಾಲನಾಗಿ ಪದವನ್ನು ವಹಿಸಿಕೊಂಡ ದಿನಾಂಕದಂದು ಆ ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡಿರುವುದಾಗಿ ಭಾವಿಸತಕ್ಕದ್ದು.

(2) ರಾಜ್ಯಪಾಲನು ಇತರ ಯಾವುದೇ ಲಾಭದಾಯಕ ಪದವನ್ನು ಧಾರಣ ಮಾಡತಕ್ಕದ್ದಲ್ಲ.

(3) ರಾಜ್ಯಪಾಲನು ಬಾಡಿಗೆಯನ್ನು ಸಂದಾಯ ಮಾಡದೆ ತನ್ನ ಅಧಿಕೃತ ನಿವಾಸಗಳನ್ನು ಬಳಸುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಉಪಲಬ್ಧಿಗಳಿಗೆ, ಭತ್ಯಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಸಹ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಉಪಲಬ್ಧಿಗಳಿಗೆ, ಭತ್ಯಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಹಕ್ಕುಳ್ಳವನಾಗಿರತಕ್ಕದ್ದು.

(3ಎ) ಒಬ್ಬನೇ ವ್ಯಕ್ತಿಯನ್ನು ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ರಾಜ್ಯಪಾಲನಾಗಿ ನೇಮಕ ಮಾಡಿರುವಲ್ಲಿ, ಆ ರಾಜ್ಯಪಾಲನಿಗೆ ಸಂದಾಯ ಮಾಡಬೇಕಾದ ಉಪಲಬ್ಧಿಗಳನ್ನು ಮತ್ತು ಭತ್ಯೆತ್ಯಗಳನ್ನು ರಾಷ್ಟ್ರಪತಿಯು ಆದೇಶದ ಮೂಲಕ, ನಿರ್ಧರಿಸಬಹುದಾದಂಥ ಪ್ರಮಾಣದಲ್ಲಿ ಆ ರಾಜ್ಯಗಳೊಳಗೆ ಹಂಚಿಕೆ ಮಾಡತಕ್ಕದ್ದು.

(4) ರಾಜ್ಯಪಾಲನ ಪದಾವಧಿಯಲ್ಲಿ ಅವನ ಉಪಲಬ್ಧಿಗಳನ್ನು ಮತ್ತು ಭತ್ಯಗಳನ್ನು ಕಡಿಮೆ ಮಾಡತಕ್ಕದ್ದಲ್ಲ.

ಅನುಚ್ಛೇದ -159. ರಾಜ್ಯಪಾಲನಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾವಚನ

ಪ್ರತಿಯೊಬ್ಬ ರಾಜ್ಯಪಾಲನು ಮತ್ತು ರಾಜ್ಯಪಾಲನಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ಆ ರಾಜ್ಯದ ಸಂಬಂಧದಲ್ಲಿ ಅಧಿಕಾರವ್ಯಾಪ್ತಿಯುಳ್ಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಅಥವಾ ಅವನ ಗೈರುಹಾಜರಿಯಲ್ಲಿ ಆ ನ್ಯಾಯಾಲಯದ ನ್ಯಾಯಾಧೀಶರ ಪೈಕಿ ಲಭ್ಯವಿರುವ ಜ್ಯೇಷ್ಠ ನ್ಯಾಯಾಧೀಶನ ಸಮಕ್ಷಮದಲ್ಲಿ ಈ ಕೆಳಕಂಡ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು; ಎಂದರೆ:-“..... ಎಂಬ ಹೆಸರಿನ ನಾನು ನಿಷ್ಠಾಪೂರ್ವಕವಾಗಿ ..... (ರಾಜ್ಯದ ಹೆಸರು) ರಾಜ್ಯಪಾಲನ ಪದದ ಕಾರ್ಯಪಾಲನೆಯನ್ನು (ಅಥವಾ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆಯನ್ನು) ಮಾಡುತ್ತೇನೆಂದೂ ಮತ್ತು ನನಗೆ ಸಾಮರ್ಥ್ಯವಿದ್ದಷ್ಟೂ ಭಾರತ ಸಂವಿಧಾನದ ಮತ್ತು ಕಾನೂನಿನ ಪರಿರಕ್ಷಣೆ, ಸಂರಕ್ಷಣೆ ಮತ್ತು ಪ್ರತಿರಕ್ಷಣೆ ಮಾಡುತ್ತೇನೆಂದೂ........(ರಾಜ್ಯದ ಹೆಸರು) ರಾಜ್ಯದ ಜನತೆಯ ಸೇವೆಯಲ್ಲಿ ಮತ್ತು ಯೋಗಕ್ಷೇಮ ಸಾಧನೆಯಲ್ಲಿ ನಿರತನಾಗಿರುತ್ತೇನೆಂದೂ, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ''.

 

ಅನುಚ್ಛೇದ -160. ಕೆಲವು ಆಕಸ್ಮಿಕ ಸಂದರ್ಭಗಳಲ್ಲಿ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆ

ಈ ಅಧ್ಯಾಯದಲ್ಲಿ ಉಪಬಂಧಿಸಿರದ ಯಾವುದೇ ಆಕಸ್ಮಿಕ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲನ ಪ್ರಕಾರ್ಯಗಳ ನಿರ್ವಹಣೆಗಾಗಿ ರಾಷ್ಟ್ರಪತಿಯು ತಾನು ಸೂಕ್ತವೆಂದು ಭಾವಿಸುವಂಥ ಉಪಬಂಧವನ್ನು ಮಾಡಬಹುದು.

ಅನುಚ್ಛೇದ -161. ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ, ಮುಂತಾದವುಗಳನ್ನು ಮಾಡಲು, ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಕಡಿಮೆ ಮಾಡಲು ರಾಜ್ಯಪಾಲನ ಅಧಿಕಾರ

ರಾಜ್ಯದ ಕಾರ್ಯಾಂಗ ಅಧಿಕಾರವು ವ್ಯಾಪ್ತವಾಗುವ ಯಾವುದೇ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾನೂನಿಗೆ ಸಂಬಂಧಿಸಿದಂತೆ ಯಾವುದೇ ಅಪರಾಧದ ಅಪರಾಧಿಯೆಂದು ನಿರ್ಣೀತನಾದ ಯಾರೇ ವ್ಯಕ್ತಿಗೆ ವಿಧಿಸಿರುವ ದಂಡನೆಯ ಬಗ್ಗೆ ಕ್ಷಮಾದಾನವನ್ನು, ಪ್ರವಿಲಂಬನವನ್ನು, ಮುಂದೂಡಿಕೆ ಅಥವಾ ಮಾಫಿಯನ್ನು ಮಾಡಲು ಅಥವಾ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ರಾಜ್ಯದ ರಾಜ್ಯಪಾಲನಿಗೆ ಅಧಿಕಾರವಿರತಕ್ಕದ್ದು.

161ನೇ ಅನುಚ್ಛೇದದ ಕುರಿತು ಟಿಪ್ಪಣಿಗಳು

161ನೇ ಅನುಚ್ಛೇದದ ಅಡಿಯಲ್ಲಿನ ಅಧಿಕಾರವು ಶಾಸನಾತ್ಮಕ ಅಧಿಕಾರವಾಗಿದ್ದು, ಇದನ್ನು ಭಾರತೀಯ ದಂಡ ಸಂಹಿತೆ, 1960ರ 432, 433, 433ಎ ಗಳಂಥ ಪ್ರಕರಣಗಳ ಮೂಲಕ ಆ ಅಧಿಕಾರವನ್ನು ಸಂಕುಚಿತಗೊಳಿಸಲಾಗುವುದಿಲ್ಲ; ಪಂಜಾಬ್ ರಾಜ್ಯ ವಿರುದ್ಧ ಜೋಗಿಂಧರ್, ಎಐಆರ್ 1990 ಎಸ್‌ಸಿ 1396.

ಅನುಚ್ಛೇದ -162. ರಾಜ್ಯದ ಕಾರ್ಯಾಂಗ ಅಧಿಕಾರ ವ್ಯಾಪ್ತಿ

ಈ ಸಂವಿಧಾನದ ಉಪಬಂಧಗಳಿಗೊಳಪಟ್ಟು, ರಾಜ್ಯದ ಕಾರ್ಯಾಂಗ ಅಧಿಕಾರವು, ಯಾವ ವಿಷಯಗಳ ಬಗ್ಗೆ ಆ ರಾಜ್ಯದ ವಿಧಾನಮಂಡಲವು ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿದೆಯೋ ಆ ವಿಷಯಗಳಿಗೆ ವ್ಯಾಪ್ತವಾಗತಕ್ಕದ್ದು:

ಪರಂತು, ರಾಜ್ಯದ ವಿಧಾನಮಂಡಲ ಮತ್ತು ಸಂಸತ್ತು ಯಾವ ವಿಷಯದ ಬಗ್ಗೆ ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿವೆಯೋ, ಆ ಯಾವುದೇ ವಿಷಯದ ಬಗ್ಗೆ ಆ ರಾಜ್ಯದ ಕಾರ್ಯಾಂಗ ಅಧಿಕಾರವು, ಈ ಸಂವಿಧಾನದ ಮೂಲಕ ಅಥವಾ ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಒಕ್ಕೂಟಕ್ಕೆ ಅಥವಾ ಅದರ ಪ್ರಾಧಿಕಾರಗಳಿಗೆ ವ್ಯಕ್ತವಾಗಿ ಪ್ರದಾನ ಮಾಡಲಾಗಿರುವ ಕಾರ್ಯಾಂಗ ಅಧಿಕಾರಕ್ಕೆ ಒಳಪಟ್ಟಿರತಕ್ಕದ್ದು ಮತ್ತು ಅಷ್ಟಕ್ಕೇ ಸೀಮಿತವಾಗಿರತಕ್ಕದ್ದು.

162ನೇ ಅನುಚ್ಛೇದದ ಕುರಿತ ಟಿಪ್ಪಣಿಗಳು

ರಾಜ್ಯ ಕಾರ್ಯಾಂಗದ ಕಾರ್ಯನಿರ್ವಾಹಕ ಅಧಿಕಾರವು, ಆ ರಾಜ್ಯ ವಿಧಾನಮಂಡಲದೊಂದಿಗೆ ಸಹ-ವ್ಯಾಪ್ತವಾಗಿರುವುದರಿಂದ, ರಾಜ್ಯ ಕಾರ್ಯಾಂಗವು ರಚಿಸಲಾದ ನಿಯಮಗಳು ಸಂವಿಧಾನದ ಯಾವುದೇ ಉಪಬಂಧವನ್ನು ಉಲ್ಲಂಘಿಸುವ ಕಾರಣದಿಂದ, ಶಾಸನದ ರಚನೆಯನ್ನು ಅಗತ್ಯಪಡಿಸುವ ಉದಾ: ಅನುಚ್ಛೇದ 265 ಮತ್ತು 302 ಕಾನೂನು ಅಗತ್ಯವಾಗಿರುವ ಸಂದರ್ಭಗಳನ್ನು ಹೊರತುಪಡಿಸಿ, ಶಾಸನರಚನಾ ಪ್ರಾಧಿಕಾರದ ಪೂರ್ವಾನುಮೋದನೆ ಅಗತ್ಯವಿಲ್ಲದ ಹೊರತು, ರಾಜ್ಯ ವಿಧಾನಮಂಡಲದ ಶಾಸನರಚನಾ ಸಕ್ಷಮತೆಯೊಳಗೆ ಯಾವುದೇ ವಿಷಯವನ್ನು ವಿನಿಯಮಿಸುವ ನಿಯಮಗಳನ್ನು ರಚಿಸಬಹುದು; ಪ್ರತಿಭಾ-ವಿರುದ್ಧ-ರಾಜ್ಯ ಸರ್ಕಾರ.

ಎಐಆರ್ 1991 ಕಾಂತ್ 205, ಖಂಡಿಕೆ 10, ಸಾಮಾನ್ಯವಾಗಿ ಸರ್ಕಾರವು 162ನೇ ಅನುಚ್ಛೇದದ ಅಡಿಯಲ್ಲಿನ ತನ್ನ ಅಧಿಕಾರವನ್ನು ಚಲಾಯಿಸಿ ವಿಶೇಷವಾಗಿ, ತಾಂತ್ರಿಕ, ವೈಜ್ಞಾನಿಕ ಅಥವಾ ಆರ್ಥಿಕ ತಜ್ಞರನ್ನು ಒಳಗೊಂಡು ಮಾಡಲಾದ ನೀತಿಗಳಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಿ ತನ್ನ ನ್ಯಾಯಿಕ ಪುನರಾವಲೋಕನ ಅಧಿಕಾರವನ್ನು ಚಲಾಯಿಸುವುದಿಲ್ಲ. ಶ್ರೀ ಸೀತಾರಾಮ್ ಶುಗರ್ ಕಂ. ಲಿಮಿಟೆಡ್-ವಿರುದ್ಧ-ಭಾರತ ಒಕ್ಕೂಟ, ಎಐಆರ್ 1990 ಎಸ್‌ಸಿ 1277, ಖಂಡಿಕೆ 56.

ಯಾವುದೇ ವ್ಯತ್ಯಾಸವಾಗಿರುವ ಸಂದರ್ಭದಲ್ಲಿ, ವಿಶೇಷವಾಗಿ ಅದನ್ನು ಪುನರಾವರ್ತನೆ ಮಾಡಿದ್ದಲ್ಲಿ, ಪ್ರಾಧಿಕಾರವು ವಿನಾಯಿತಿ ನೀಡುವ ತನ್ನ ಅಧಿಕಾರವನ್ನು ಚಲಾಯಿಸಲಾಗಿದೆ ಅಥವಾ ನೀತಿಯನ್ನು ಬದಲಾಯಿಸಲಾಗಿದೆ (ಔಪಚಾರಿಕ ತಿದ್ದುಪಡಿ ಇಲ್ಲದೆ) ಎಂಬ ಪೂರ್ವಭಾವನೆ ಬರುತ್ತದೆ. ಮತ್ತು ಆನಂತರ ಬಂದವರು ಮೂಲ ಸೂಚನೆಗಳ ಪ್ರಯೋಜನವನ್ನು ಕ್ಲೇಮು ಮಾಡಲು ಸಾಧ್ಯವಿಲ್ಲ: Direct Recnlit Class-11 ಇಂಜಿನಿಯರಿಂಗ್ ಅಧಿಕಾರಿಗಳ ಸಂಘ-ವಿರುದ್ಧ-ಮಹಾರಾಷ್ಟ್ರ ರಾಜ್ಯ, ಎಐಆರ್ 1990 ಎಸ್‌ಸಿ 1607 (ಸಿಬಿ) ಖಂಡಿಕೆ 44.

 

 

ಉನ್ನತಾಧಿಕಾರಿಗಳ ಕರ್ತವ್ಯ:

ರಾಜ್ಯಾಡಳಿತದ ಸೂಕ್ತಪ್ರಕಾರ್ಯವು ಉನ್ನತಾಧಿಕಾರಿಗಳ ನಡುವಿನ ಪ್ರತಿಷ್ಠೆಯ ಘರ್ಷಣೆಯ ಕಾರಣದಿಂದ ಅಪಾಯವನ್ನುಂಟು ಮಾಡತಕ್ಕದ್ದಲ್ಲ. ಅಂಥ ಅಧಿಕಾರಿಗಳು ಅಧಿಕಾರವನ್ನು ಸಾರ್ವಜನಿಕ ಒಳಿತಿಗಾಗಿ ಬಳಸಬೇಕೆ ಹೊರತು, ತಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಅಲ್ಲ ಎಂಬುವುದನ್ನು ತಿಳಿದುಕೊಳ್ಳಬೇಕು; ಆಸ್ಸಾಂ ರಾಜ್ಯ-ವಿರುದ್ಧ- ಪಿ.ಸಿ.ಮಿಶ್ರಾ, ಎಐಆರ್ 1996 ಎಸ್‌ಸಿ 430, ಖಂಡಿಕೆ II.

ಸರ್ಕಾರವು ನೀತಿಗಳನ್ನು ರೂಪಿಸಲು ಹಕ್ಕುಳ್ಳದ್ದಾಗಿದೆ ಮತ್ತು 11ಪಿ ಖಾತಾ ಇಂಡಸ್ಟ್ರೀ ಅನುಮೋದನೆಯನ್ನು ತಿರಸ್ಕರಿಸಲು ಅಧಿಕಾರವನ್ನು ಹೊಂದಿದೆ: ಹಿಮಾಚಲ ಪ್ರದೇಶ-ವಿರುದ್ಧ-ಗಣೇಶ್ ವುಡ್ ಪ್ರಾಡೆಕ್ಟ್ಸ್‍, ಎಐಆರ್ 1996 ಎಸ್‌ಸಿ 149.

ಮಂತ್ರಿಮಂಡಲ

ಅನುಚ್ಛೇದ -163. ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿಮಂಡಲ

(1) ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲರು, ತನ್ನ ಎಲ್ಲ ಪ್ರಕಾರ್ಯಗಳನ್ನು ಅಥವಾ ಅವುಗಳಲ್ಲಿ ಯಾವುದೇ ಪ್ರಕಾರ್ಯವನ್ನು ತನ್ನ ವಿವೇಚನಾನುಸಾರ ಚಲಾಯಿಸಲು ಅವರನ್ನು ಅಗತ್ಯಪಡಿಸಿರುವಷ್ಟರಮಟ್ಟಿಗೆ ಹೊರತು, ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ಅವರಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಇರತಕ್ಕದ್ದು.

(2) ಯಾವುದೇ ವಿಷಯವು ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲನು ತನ್ನ ವಿವೇಚನಾನುಸಾರ ಕಾರ್ಯ ನಿರ್ವಹಿಸಬೇಕೆಂದು ಅವನನ್ನು ಅಗತ್ಯಪಡಿಸಿರುವ ವಿಷಯವೆ ಅಥವಾ ಅಲ್ಲವೆ ಎಂಬ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ರಾಜ್ಯಪಾಲನು ತನ್ನ ವಿವೇಚನಾನುಸಾರ ಕೈಗೊಂಡ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು ಮತ್ತು ರಾಜ್ಯಪಾಲನು ಕೈಗೊಂಡ ಯಾವುದೇ ಕಾರ್ಯದ ಸಿಂಧುತ್ವವನ್ನು ಅವನು ತನ್ನ ವಿವೇಚನಾನುಸಾರವಾಗಿ ಕಾರ್ಯನಿರ್ವಹಿಸಬೇಕಾಗಿತ್ತು ಅಥವಾ ಕಾರ್ಯನಿರ್ವಹಿಸಬಾರದಾಗಿತ್ತು ಎಂಬ ಕಾರಣದ ಮೇಲೆ ಪ್ರಶ್ನಿಸತಕ್ಕದ್ದಲ್ಲ.

(3) ಮಂತ್ರಿಗಳು ರಾಜ್ಯಪಾಲನಿಗೆ ಯಾವುದೇ ಸಲಹೆಯನ್ನು ನೀಡಿದ್ದರೇ ಮತ್ತು ಹಾಗೆ ನೀಡಿದ್ದರೆ ಯಾವ ಸಲಹೆಯನ್ನು ನೀಡಿದ್ದರು ಎಂಬ ಪ್ರಶ್ನೆಯನ್ನು ಕುರಿತು ಯಾವುದೇ ನ್ಯಾಯಾಲಯವು ವಿಚಾರಣೆ ಮಾಡತಕ್ಕದ್ದಲ್ಲ.

163ನೇ ಅನುಚ್ಛೇದದ ಕುರಿತು ಟಿಪ್ಪಣಿಗಳು

ರಾಜ್ಯ ಪಟ್ಟಿಯಲ್ಲಿನ ನಮೂದನ್ನು ವ್ಯಕ್ತವಾಗಿ ಸಂಸದೀಯ ಶಾಸನ ರಚನೆ (ರಾಜ್ಯಪಟ್ಟಿ ನಮೂದು 23)ಗೆ ಒಳಪಟ್ಟು ಮಾಡಲಾಗಿದ್ದರೆ, ರಾಜ್ಯವು ಸಂಸದೀಯ ಕಾನೂನಿನ ವಿಷಯದ ಸಂಬಂಧದಲ್ಲಿ ಚಲಾಯಿಸುವ ಶಾಸಕಾಂಗ ಮತ್ತು ಕಾರ್ಯಾಂಗ ಅಧಿಕಾರಗಳೆರಡೂ ಸಹ ನಿಂತು ಹೋಗುತ್ತದೆ; ಭಾರತ ಕಲ್ಲಿದ್ದಲು-ವಿರುದ್ಧ- ಬಿಹಾರ್ ರಾಜ್ಯ (1990) 4 ಎಸ್‌ಸಿಸಿ 557.

ರಾಜ್ಯಪಾಲರು ಹಾಗೂ ಸಚಿವ ಸಂಪುಟ

ರಾಜ್ಯಪಾಲರು, ತನ್ನ ವಿವೇಚನಾನುಸಾರ ಈ ಕೆಳಕಂಡ ಪ್ರಕರಣಗಳಲ್ಲಿ 6ನೇ ಅನೂಸೂಚಿಯ 9ನೇಕಂಡಿಕೆಯ ಅಡಿಯಲ್ಲಿ ಆಸ್ಸಾಂ ರಾಜ್ಯಪಾಲರ ಅಧಿಕಾರಗಳನ್ನು ಬಳಸಿ ಕಾರ್ಯನಿರ್ವಹಿಸುವುದು ಅಗತ್ಯವಾಗಿರುತ್ತದೆ.

(ಎ) 239(2)ನೇ ಅನುಚ್ಛೇದದ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಆಡಳಿತಾಧಿಕಾರಿಯಾಗಿ ನೇಮಿಸಲಾದ ರಾಜಪಾಲರ ಪ್ರಕಾರ್ಯಗಳು;

(i)ಅನುಚ್ಛೇದ 371(2), 371 ಎ(I) (ಬಿ); 371ಸಿ (I); 371ಎಫ್(ಜಿ)ರ ಅಡಿಯಲ್ಲಿನ ಪ್ರಕಾರ್ಯಗಳು. ಇತರಸಂದರ್ಭಗಳಲ್ಲಿರಾಜಪಾಲರು ಮಂತ್ರಿಗಳ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು.(i) ಕಪೂರ್‍-ವಿರುದ್ಧ-ಪಂಜಾಬ್‍ ರಾಜ್ಯ, (1955)I ಎಸ್‍ಸಿಆರ್ 577, 587

(ii)ಸಂಜೀವಿ-ವಿರುದ್ಧ-ಮದ್ರಾಸ್ ರಾಜ್ಯ (1970) II ಎಸ್‌ಸಿ 672677.

ಲೋಕಸೇವಾ ಆಯೋಗದ ವಿರುದ್ಧದ ಮೇಲ್ಮನವಿಯನ್ನೂ ಆಲಿಸುವ ಪ್ರಕಾರ್ಯವನ್ನು ಸಹ ಸಚಿವ ಸಂಪುಟದ ಸಲಹೆಯ ಮೇರೆಗೆ ನಿರ್ವಹಿಸಬೇಕು; ಯು.ಪಿ.ಪಿಎಸ್.ಸಿ.-ವಿರುದ್ಧ-ಸುರೇಶ್, ಎಐಆರ್ 1987 ಎಸ್‌ಸಿ 1953.

ಅದರ ಮೂಲ ಸ್ವರೂಪದ ಕಾರಣದಿಂದ, 356(1)ನೇ ಅನುಚ್ಛೇದದ ಅಡಿಯಲ್ಲಿ ರಾಜ್ಯಪಾಲರ ವರದಿಯು ಸಂಸ್ಥೆಯ ವೈಫಲ್ಯಕ್ಕೆ ಕಾರಣವಾಗುವಂತಿದ್ದರೆ ಅಂಥ ವರದಿಯನ್ನು ಮಂತ್ರಿಮಂಡಲದ ಸಲಹೆಯ ಮೇರೆಗೆ ನೀಡಬಾರದು.

 

ಅಸ್ತಿತ್ವದಲ್ಲಿರುವ ಸಚಿವರು ಮುಂದುವರಿಯಲು

ಒಂದು ಮಂತ್ರಿಮಂಡಲವು ಯಾವಾಗಲೂ (ವಿಧಾನಮಂಡಲದ ವಿಸರ್ಜನೆ ನಂತರವೂ ಅಥವಾ ಮಂತ್ರಿಮಂಡಲದ ರಾಜೀನಾಮೆಯ ಸಮಯದಲ್ಲೂ) ರಾಜ್ಯಪಾಲರ ಸಲಹೆ ಮೇರೆಗೆ ಅಸ್ತಿತ್ವದಲ್ಲಿರಬೇಕು, ಆದರೆ, ಅಸ್ತಿತ್ವದಲ್ಲಿರುವ ಮಂತ್ರಿಮಂಡಲವು ಉತ್ತರಾಧಿಕಾರಿಯು ಕಾರ್ಯಭಾರವನ್ನು ವಹಿಸಿಕೊಳ್ಳುವವರೆಗೂ ಆ ಪದದಲ್ಲಿ ಮುಂದುವರಿಯಬಹುದು.

ಆದೇಶಗಳ ವರ್ಗೀಕರಣ

ರಾಜ್ಯದ ರಾಜ್ಯಪಾಲರು (163ನೇ ಅನುಚ್ಛೇದ) ಹೊರಡಿಸುವ ಆದೇಶಗಳು ನಾಲ್ಕು ವಿಸ್ತೃತ ವರ್ಗೀಕರಣದ ಅಡಿಯಲ್ಲಿ ಬರುತ್ತವೆ:

(i)ಸಂಪೂರ್ಣವಾಗಿ ನ್ಯಾಯಿಕ ಪರಿಶೀಲನೆ ಲಭ್ಯವಿರುವಲ್ಲಿ, ರಾಜ್ಯಪಾಲರು ಮತ್ತು ಅವರ ಆದೇಶಾನುಸಾರ, ಸಂವಿಧಾನದ ಉಪಬಂಧಗಳ ಅನುಸಾರವಾಗಿ ಕಾರ್ಯಾಂಗದ ಅಧಿಕಾರಗಳನ್ನು ಚಲಾಯಿಸುವುದು;

(ii)ಸಂಪೂರ್ಣವಾಗಿ ನ್ಯಾಯಿಕ ಪರಿಶೀಲನೆ ಲಭ್ಯವಿರುವಲ್ಲಿ, ಮುಖ್ಯಮಂತ್ರಿ ನೇತೃತ್ವದ ಮಂತ್ರಿಮಂಡಲದ ನೆರವು ಮತ್ತು ಸಲಹೆಯ ಮೇರೆಗೆ, ರಾಜ್ಯಪಾಲರಿಂದ ಹೊರಡಿಸಿದ ಆದೇಶಗಳು;

(iii)161ನೇ ಅನುಚ್ಛೇದದ ಅಡಿಯಲ್ಲಿ ಕ್ಷಮಾದಾನ ನೀಡುವಂತಹ ಆದೇಶಗಳು ಮತ್ತು ಸೀಮಿತ ನ್ಯಾಯಿಕ ಪರಿಶೀಲನೆ ಲಭ್ಯವಿರುವಲ್ಲಿ 356ನೇ ಅನುಚ್ಛೇದದ ಅಡಿಯಲ್ಲಿ ರಾಜ್ಯಪಾಲರಿಂದ ಸಲ್ಲಿಸಲಾದ ವರದಿಯ ಆಧಾರದ ಮೇಲೆ ರಾಷ್ಟ್ರಪತಿಗಳಿಂದ ಹೊರಡಿಸಿದ ಆದೇಶಗಳು; ಮತ್ತು

(iv)ಮಂತ್ರಿಮಂಡಲದ (ಮುಖ್ಯಮಂತ್ರಿಗಳ ನೇತೃತ್ವದ) ನೆರವು ಮತ್ತು ಸಲಹೆ ಇಲ್ಲದೆ ರಾಜ್ಯಪಾಲರು ತಮ್ಮ ಸ್ವಂತ ವಿವೇಚನೆಯ ಮೇರೆಗೆ ಮಾಡಿದ ಕಾರ್ಯಗಳು (ಇಲ್ಲಿ ಯಾವುದೇ ನ್ಯಾಯಿಕ ಪರಿಶೀಲನೆಯನ್ನು ಅನುಮತಿಸಲಾಗದು) ಪ್ರತಾಪ್ ಸಿಂಗ್ ರಾಣೆ-ವಿರುದ್ಧ-ಗೋವಾ ಸರ್ಕಾರ ಏಐಆರ್ 1999 ಬಾರ್ನ್‍ 53, 91, ಖಂಡಿಕೆ 29, 36 (ಓಬಿ).

ಅನುಚ್ಛೇದ -164. ಮಂತ್ರಿಗಳಿಗೆ ಸಂಬಂಧಿಸಿದ ಇತರ ಉಪಬಂಧಗಳು

(1) ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡತಕ್ಕದ್ದು ಮತ್ತು ಮುಖ್ಯಮಂತ್ರಿಯ ಸಲಹೆಗನುಸಾರ ಇತರ ಮಂತ್ರಿಗಳನ್ನು ರಾಜ್ಯಪಾಲರು ನೇಮಕ ಮಾಡತಕ್ಕದ್ದು ಮತ್ತು ಮಂತ್ರಿಗಳು ರಾಜ್ಯಪಾಲನ ಇಷ್ಟಪರ್ಯಂತ ಪದಧಾರಣ ಮಾಡತಕ್ಕದ್ದು:

ಪರಂತು, ಬಿಹಾರ್, ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗಗಳ ಕಲ್ಯಾಣಕ್ಕೆ ಸಂಬಂಧಪಟ್ಟಂತೆ ಒಬ್ಬ ಮಂತ್ರಿಯಿರತಕ್ಕದ್ದು ಮತ್ತು ಅವನು ಅದರ ಜೊತೆಗೆ ಅನುಸೂಚಿತ ಜಾತಿಗಳ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಅಥವಾ ಇತರ ಯಾವುದೇ ಕಾರ್ಯವನ್ನು ನೋಡಿಕೊಳ್ಳಬಹುದು.

(2) ಮಂತ್ರಿ ಮಂಡಲವು ಆ ರಾಜ್ಯದ ವಿಧಾನಸಭೆಗೆ ಸಾಮೂಹಿಕವಾಗಿ ಜವಾಬ್ದಾರಿಯಾಗಿರತಕ್ಕದ್ದು.

(3) ಯಾರೇ ಮಂತ್ರಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯಪಾಲರು ಅವನಿಗೆ ಪದದ ಮತ್ತು ಗೋಪ್ಯತಾ ಪಾಲನೆಯ ಪ್ರಮಾಣವಚನಗಳನ್ನು, ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಡಲಾದ ನಮೂನೆಗಳಿಗೆ ಅನುಸಾರವಾಗಿ ಬೋಧಿಸತಕ್ಕದ್ದು.

(4) ಯಾರೇ ಮಂತ್ರಿಯು ನಿರಂತರವಾಗಿ ಆರು ತಿಂಗಳ ಅವಧಿಯವರೆಗೆ ರಾಜ್ಯದ ವಿಧಾನಮಂಡಲದ ಸದಸ್ಯನಾಗದಿದ್ದರೆ ಆ ಅವಧಿಯು ಮುಕ್ತಾಯವಾದ ಮೇಲೆ ಅವನು ಮಂತ್ರಿಯಾಗಿರುವುದು ನಿಂತುಹೋಗತಕ್ಕದ್ದು.

(5) ಮಂತ್ರಿಗಳ ಸಂಬಳಗಳು ಹಾಗೂ ಭತ್ಯಗಳು ಕಾಲಕಾಲಕ್ಕೆ ರಾಜ್ಯದ ವಿಧಾನಮಂಡಲವು ಕಾನೂನಿನ ಮೂಲಕ ನಿರ್ಧರಿಸಬಹುದಾದಂತೆ ಇರತಕ್ಕದ್ದು ಮತ್ತು ವಿಧಾನಮಂಡಲವು ಆ ರೀತಿ ನಿರ್ಧರಿಸುವವರೆಗೆ ಅವು ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಇರತಕ್ಕದ್ದು.

ಅನುಚ್ಛೇದ -165 ರಾಜ್ಯದ ಅಡ್ವೋಕೇಟ್ ಜನರಲ್

(1) ಪ್ರತಿಯೊಂದು ರಾಜ್ಯದ ರಾಜ್ಯಪಾಲರು ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹತೆಯುಳ್ಳ ವ್ಯಕ್ತಿಯನ್ನು ಆ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಕ ಮಾಡತಕ್ಕದ್ದು.

(2) ಅಡ್ವೋಕೇಟ್ ಜನರಲ್‌ನು, ರಾಜ್ಯಪಾಲರು ಕಾಲಕಾಲಕ್ಕೆ ತನಗೆ ಕಳುಹಿಸಬಹುದಾದಂಥ ಅಥವಾ ಒಪ್ಪಿಸಬಹುದಾದಂಥ ಕಾನೂನು ವಿಷಯಗಳ ಮೇಲೆ ರಾಜ್ಯಸರ್ಕಾರಕ್ಕೆ ಸಲಹೆ ಕೊಡುವುದು ಮತ್ತು ಕಾನೂನು ಸ್ವರೂಪದಂಥ ಇತರ ಕರ್ತವ್ಯಗಳನ್ನು ನೆರವೇರಿಸುವುದು ಹಾಗೂ ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ತನಗೆ ಪ್ರದಾನ ಮಾಡಿದ ಪ್ರಕಾರ್ಯಗಳನ್ನು ನಿರ್ವಹಿಸುವುದು ಅವನ ಕರ್ತವ್ಯವಾಗಿರತಕ್ಕದ್ದು.

(3) ಅಡ್ವೋಕೇಟ್ ಜನರಲ್‌ನು ರಾಜ್ಯಪಾಲರ ಇಷ್ಟಪರ್ಯಂತ ಪದಧಾರಣ ಮಾಡತಕ್ಕದ್ದು; ಮತ್ತು ರಾಜ್ಯಪಾಲನು ನಿರ್ಧರಿಸಬಹುದಾದ ಸಂಭಾವನೆಯನ್ನು ಪಡೆಯತಕ್ಕದ್ದು.

165ನೇ ಅನುಚ್ಛೇದದ ಕುರಿತು ಟಿಪ್ಪಣಿಗಳು:

ಸಾಮಾನ್ಯವಾಗಿ ಅಧಿವಿಚಾರಣಾ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರು ಮಾಡಿದ ರಿಯಾಯಿತಿಯು ಜವಾಬ್ದಾರಿಯುತವಾದ ಅಧಿಕಾರಿಯಿಂದ ಲಿಖಿತದಲ್ಲಿ ಸೂಚನೆಗಳನ್ನು ನೀಡಿದ ಹೊರತು ಸರ್ಕಾರವನ್ನು ಅದು ಬದ್ಧಗೊಳಿಸುವುದಿಲ್ಲ. ಆ ತತ್ವವು ಅಡ್ವೋಕೇಟ್ ಜನರಲ್‌ರವರಿಂದ ಮಾಡಿದ ರಿಯಾಯಿತಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಅವರು ಜವಾಬ್ದಾರಿಯಿಂದ ಹೇಳಿಕೆ ನೀಡುವುದಕ್ಕೆ ಪದಧಾರಣ ಮಾಡಿರುತ್ತಾರೆ; ಪರಿಯಾರ್-ವಿರುದ್ಧ-ಕೇರಳ ರಾಜ್ಯ, ಎಐಆರ್ 1990 ಎಸ್‌ಸಿ 2192, ಖಂಡಿಕೆ 9.

ಅನುಚ್ಛೇದ -166. ರಾಜ್ಯ ಸರ್ಕಾರದ ಕಾರ್ಯಕಲಾಪ ನಿರ್ವಹಣೆ

(1) ರಾಜ್ಯ ಸರ್ಕಾರದ ಕಾರ್ಯಾಂಗದ ಸಮಸ್ತ ಕಾರ್ಯವು ರಾಜ್ಯಪಾಲನ ಹೆಸರಿನಲ್ಲಿ ನಡೆಯುತ್ತದೆಂದು ಇಂಗಿತವಾಗತಕ್ಕದ್ದು.

(2) ರಾಜ್ಯಪಾಲರ ಹೆಸರಿನಲ್ಲಿ ಮಾಡಿದ ಆದೇಶಗಳನ್ನು ಮತ್ತು ಬರೆದುಕೊಟ್ಟ ಇತರ ಲಿಖಿತಗಳನ್ನು ರಾಜ್ಯಪಾಲರು ರಚಿಸುವ ನಿಯಮಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಅಧಿಪ್ರಮಾಣನ ಮಾಡತಕ್ಕದ್ದು ಮತ್ತು ಹಾಗೆ ಅಧಿಪ್ರಮಾಣನ ಮಾಡಿದ ಆದೇಶದ ಅಥವಾ ಲಿಖಿತದ ಸಿಂಧುತ್ವವನ್ನು, ಅದು ರಾಜ್ಯಪಾಲನು ಮಾಡಿದ ಆದೇಶವಲ್ಲವೆಂಬ ಅಥವಾ ಬರೆದುಕೊಟ್ಟ ಲಿಖಿತವಲ್ಲವೆಂಬ ಕಾರಣದ ಮೇಲೆ ಪ್ರಶ್ನಿಸತಕ್ಕದ್ದಲ್ಲ.

(3) ರಾಜ್ಯ ಸರ್ಕಾರದ ಕಾರ್ಯಕಲಾಪವನ್ನು ಹೆಚ್ಚು ಅನುಕೂಲಕರವಾಗಿ ನಿರ್ವಹಿಸಲು ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ರಾಜ್ಯಪಾಲರು ತಮ್ಮ ವಿವೇಚನಾನುಸಾರ ನಿರ್ವಹಿಸಬೇಕಾಗಿರುವ ಕಾರ್ಯಕಲಾಪಗಳನ್ನು ಬಿಟ್ಟು ಉಳಿದ ಕಾರ್ಯಕಲಾಪವನ್ನು ಮಂತ್ರಿಗಳಿಗೆ ಹಂಚಿಕೆ ಮಾಡಲು ರಾಜ್ಯಪಾಲರು ನಿಯಮಗಳನ್ನು ರಚಿಸತಕ್ಕದ್ದು.

 

 

ರಾಜ್ಯ ವಿಧಾನಮಂಡಲ

ಅನುಚ್ಛೇದ -168. ರಾಜ್ಯಗಳ ವಿಧಾನಮಂಡಲಗಳ ರಚನೆ

(1) ಪ್ರತಿಯೊಂದು ರಾಜ್ಯಕ್ಕೂ ಒಂದು ವಿಧಾನ ಮಂಡಲ ಇರತಕ್ಕದ್ದು ಮತ್ತು ಅದು ರಾಜ್ಯಪಾಲರನ್ನು ಮತ್ತು

(ಎ) ಮಹಾರಾಷ್ಟ್ರ ಕರ್ನಾಟಕ ಮತ್ತು ಉತ್ತರ ಪ್ರದೇಶ ಈ ರಾಜ್ಯಗಳಲ್ಲಿ ಎರಡು ಸದನಗಳನ್ನು;

(ಬಿ) ಇತರ ರಾಜ್ಯಗಳಲ್ಲಿ ಒಂದು ಸದನವನ್ನು

- ಒಳಗೊಂಡಿರತಕ್ಕದ್ದು.

(2) ರಾಜ್ಯದ ವಿಧಾನಮಂಡಲವು ಎರಡು ಸದನಗಳನ್ನು ಹೊಂದಿರುವಲ್ಲಿ, ಒಂದನ್ನು ವಿಧಾನಪರಿಷತ್ತು ಎಂದು ಮತ್ತು ಇನ್ನೊಂದನ್ನು ವಿಧಾನಸಭೆ ಎಂದು ಮತ್ತು ಒಂದೇ ಸದನವನ್ನು ಹೊಂದಿರುವಲ್ಲಿ ಅದನ್ನು ವಿಧಾನಸಭೆ ಎಂದು ಕರೆಯತಕ್ಕದ್ದು.

ಅನುಚ್ಛೇದ -171. ವಿಧಾನ ಪರಿಷತ್ತುಗಳ ಸಂರಚನೆ

(1) ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ವಿಧಾನಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯು, ಆ ರಾಜ್ಯದ ವಿಧಾನಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಮೂರನೆಯ ಒಂದು ಭಾಗವನ್ನು ಮೀರತಕ್ಕದ್ದಲ್ಲ:

ಪರಂತು, ಒಂದು ರಾಜ್ಯದ ವಿಧಾನಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯು ಯಾವುದೇ ಸಂದರ್ಭದಲ್ಲಿ ನಲವತ್ತಕ್ಕಿಂತಲೂ ಕಡಿಮೆಯಾಗಿರತಕ್ಕದ್ದಲ್ಲ.

(2) ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸುವವರೆಗೆ, ಒಂದು ರಾಜ್ಯದ ವಿಧಾನಪರಿಷತ್ತಿನ ರಚನೆಯು (3)ನೆಯ ಖಂಡದಲ್ಲಿ ಉಪಬಂಧಿಸಿರುವಂತೆ ಇರತಕ್ಕದ್ದು.

(3) ಒಂದು ರಾಜ್ಯದ ವಿಧಾನಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯಲ್ಲಿ,-

(ಎ) ಆದಷ್ಟುಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರು ಆ ರಾಜ್ಯದಲ್ಲಿನ ಪೌರಸಭೆಗಳ, ಜಿಲ್ಲಾ ಮಂಡಲಿಗಳ ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಇತರ ಸ್ಥಳೀಯ ಪ್ರಾಧಿಕಾರಗಳ ಸದಸ್ಯರನ್ನು ಒಳಗೊಂಡಿರುವ ಮತದಾರರ ಗಣಗಳಿಂದ ಚುನಾಯಿತರಾಗತಕ್ಕದ್ದು;

(ಬಿ) ಆದಷ್ಟುಮಟ್ಟಿಗೆ ಹನ್ನೆರಡನೆಯ ಒಂದು ಭಾಗದಷ್ಟು ಸದಸ್ಯರು ಭಾರತದ ರಾಜ್ಯಕ್ಷೇತ್ರದಲ್ಲಿನ ಯಾವುದೇ ವಿಶ್ವವಿದ್ಯಾನಿಲಯದ ಪದವೀಧರರಾಗಿ ಕನಿಷ್ಠ ಪಕ್ಷ ಮೂರು ವರ್ಷಗಳಾದರೂ ಆಗಿರುವ ಅಥವಾ ಅಂಥ ಯಾವುದೇ ವಿಶ್ವವಿದ್ಯಾನಿಲಯದ ಪದವೀಧರನಿಗೆ ಸಮಾನವಾದ ಅರ್ಹತೆಗಳೆಂದು ಸಂಸತ್ತು ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಿದ ಅರ್ಹತೆಗಳನ್ನು ಪಡೆದು ಕನಿಷ್ಠಪಕ್ಷ ಮೂರು ವರ್ಷಗಳಾದರೂ ಆಗಿರುವ ಮತ್ತು ಆ ರಾಜ್ಯದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಮತದಾರರ ಗಣಗಳಿಂದ ಚುನಾಯಿತರಾಗತಕ್ಕದ್ದು;

(ಸಿ) ಆದಷ್ಟು ಮಟ್ಟಿಗೆ ಹನ್ನೆರಡನೆಯ ಒಂದು ಭಾಗದಷ್ಟು ಸದಸ್ಯರು ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂತೆ ರಾಜ್ಯದಲ್ಲಿನ ಪ್ರೌಢಶಾಲೆಯ ದರ್ಜೆಗೆ ಕಡಿಮೆ ಇಲ್ಲದಂತಹ ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠಪಕ್ಷ ಮೂರು ವರ್ಷಗಳಿಂದಾದರೂ ಬೋಧನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನೊಳಗೊಂಡಿರುವ ಮತದಾರರ ಗಣಗಳಿಂದ ಚುನಾಯಿತರಾಗತಕ್ಕದ್ದು;

(ಡಿ) ಆದಷ್ಟು ಮಟ್ಟಿಗೆ ಮೂರನೆಯ ಒಂದು ಭಾಗದಷ್ಟು ಸದಸ್ಯರನ್ನು, ಆ ರಾಜ್ಯದ ವಿಧಾನಸಭೆಯ ಸದಸ್ಯರು ವಿಧಾನಸಭೆಯ ಸದಸ್ಯರಲ್ಲದ ವ್ಯಕ್ತಿಗಳಿಂದ ಚುನಾಯಿಸತಕ್ಕದ್ದು;

(ಇ) ಉಳಿದ ಸದಸ್ಯರು (5)ನೆಯ ಖಂಡದ ಉಪಬಂಧಗಳಿಗೆ ಅನುಸಾರವಾಗಿ ಆ ರಾಜ್ಯದ ರಾಜ್ಯಪಾಲನಿಂದ ನಾಮನಿರ್ದೇಶಿತರಾಗತಕ್ಕದ್ದು.

(4) (3)ನೆಯ ಖಂಡದ (ಎ), (ಬಿ) ಮತ್ತು (ಸಿ) ಉಪಖಂಡಗಳ ಮೇರೆಗೆ ಚುನಾಯಿತರಾಗಬೇಕಾದ ಸದಸ್ಯರು ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ ಆಯ್ಕೆಯಾಗತಕ್ಕದ್ದು ಮತ್ತು ಸದರಿ ಉಪಖಂಡಗಳ ಮೇರೆಗೆ ಮತ್ತು ಸದರಿ ಖಂಡದ (ಡಿ) ಉಪಖಂಡದ ಮೇರೆಗೆ ನಡೆಯುವ ಚುನಾವಣೆಗಳು ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರ ಏಕವರ್ಗಾವಣೀಯ ಮತದ ಮೂಲಕ ನಡೆಯತಕ್ಕದ್ದು.

(5) ರಾಜ್ಯಪಾಲನಿಂದ (3)ನೆಯ ಖಂಡದ (ಇ) ಉಪಖಂಡದ ಮೇರೆಗೆ ನಾಮನಿರ್ದೇಶಿತರಾಗಬೇಕಾದ ಸದಸ್ಯರು ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಎಂದರೆ,-

ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ ಚಳವಳಿ ಮತ್ತು ಸಮಾಜ ಸೇವೆಗಳಲ್ಲಿ ವಿಶೇಷ ಜ್ಞಾನವನ್ನು ಅಥವಾ ವ್ಯಾವಹಾರಿಕ ಅನುಭವವನ್ನು ಪಡೆದವರಾಗಿರತಕ್ಕದ್ದು.

ಅನುಚ್ಛೇದ -174. ರಾಜ್ಯವಿಧಾನಮಂಡಲದಅಧಿವೇಶನಗಳು, ಅಧಿವೇಶನದಮುಕ್ತಾಯಮತ್ತುವಿಸರ್ಜನೆ: (1) ರಾಜ್ಯಪಾಲರುತಾನುಸೂಕ್ತವೆಂದುಭಾವಿಸತಕ್ಕಂಥಕಾಲದಲ್ಲಿಮತ್ತುಸ್ಥಳದಲ್ಲಿರಾಜ್ಯದವಿಧಾನಮಂಡಲದಸದನವನ್ನುಅಥವಾಪ್ರತಿಯೊಂದುಸದನವನ್ನುಕಾಲಕಾಲಕ್ಕೆಕರೆಯತಕ್ಕದ್ದು; ಆದರೆಒಂದುಅಧಿವೇಶನದಕೊನೆಯಉಪವೇಶನದಮತ್ತುಮುಂದಿನಅಧಿವೇಶನದಮೊದಲನೆಯಉಪವೇಶನಕ್ಕೆಗೊತ್ತುಮಾಡಿರುವದಿನಾಂಕದನಡುವೆಆರುತಿಂಗಳಅಂತರವಿರತಕ್ಕದ್ದಲ್ಲ.

(2) ರಾಜ್ಯಪಾಲರುಕಾಲಕಾಲಕ್ಕೆ,-

(ಎ) ಸದನದಅಧಿವೇಶನವನ್ನುಅಥವಾಎರಡುಸದನಗಳಲ್ಲಿಯಾವುದೇಒಂದುಸದನದಅಧಿವೇಶನವನ್ನುಮುಕ್ತಾಯಗೊಳಿಸಬಹುದು;

(ಬಿ)   ವಿಧಾನಸಭೆಯನ್ನು ವಿಸರ್ಜಿಸಬಹುದು.

ಅನುಚ್ಛೇದ 174ರ ಕುರಿತು ಟಿಪ್ಪಣಿಗಳು

ವಿಧಾನಸಭೆ ವಿಸರ್ಜನೆ

ದಿನಾಂಕ: 7ನೇ ಡಿಸೆಂಬರ್ 1988 ರಂದು, ಗುವಾಹಟಿ ಉಚ್ಚನ್ಯಾಯಾಲಯವು ನಾಗಾಲ್ಯಾಂಡ್ ವಿಧಾನಸಭೆ ವಿಸರ್ಜನೆಗೆ ಸಂಬಂಧಪಟ್ಟ ಪ್ರಕರಣದಲ್ಲಿ ಒಂದು ಮಹತ್ತರವಾದ ತೀರ್ಪನ್ನು ಘೋಷಿಸಿದ್ದು, ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡಿರುವ ರಾಜ್ಯಪಾಲರ ಆ ವರದಿಯು ಅಂಗೀಕಾರಾರ್ಹವಲ್ಲವೆಂದು ಅಭಿಪ್ರಾಯಪಟ್ಟಿದೆ. ವಿಧಾನಸಭೆಯನ್ನು ವಿಸರ್ಜಿಸಿ 1988ರ ಆಗಸ್ಟ್ 17ರ ರಾಷ್ಟ್ರಪತಿಯ ಅಧಿಕಾರ ಘೋಷಣೆಯನ್ನು ಮತ್ತು ರಾಜ್ಯಸರ್ಕಾರದ ಆಡಳಿತವನ್ನು ವಹಿಸಿಕೊಳ್ಳುವುದರ ಸಿಂಧುತ್ವವನ್ನು ಪ್ರಶ್ನಿಸಿ ಜಂಟಿ ಪ್ರಾದೇಶಿಕ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ವಮುಜೊರವರು ರಿಟ್‍ ಅರ್ಜಿಯನ್ನು ಸಲ್ಲಿಸಿದ್ದರು. ಸದನದ 60 ಸದಸ್ಯರ ಪೈಕಿ 35 ಸದಸ್ಯರ ಬಹುಮತದ ಬೆಂಬಲ ಅರ್ಜಿದಾರರಿಗೇ ಇತ್ತು ಎಂಬುದು ಅರ್ಜಿದಾರನ ವಾದವಾಗಿತ್ತು. ಕಾಂಗ್ರೇಸ್-ಐ ಪಕ್ಷದಲ್ಲಿ ವಿಭಜನೆಯಾದ ತರುವಾಯ ಮಂತ್ರಿಮಂಡಲ ರಚಿಸಲು ಆಹ್ವಾನಿಸಬೇಕಾಗಿತ್ತು. ವಿಭಜನೆಯಾಗಿದೆ ಎಂಬ ಸ್ಪೀಕರ್‍ ರವರ ತೀರ್ಮಾನದ ಹೊರತಾಗಿಯೂ ರಾಜ್ಯಪಾಲರು ಸಂಬಂಧವಿಲ್ಲದ ಮತ್ತು ಅಸಂಬದ್ಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದರು ಎಂಬುದು ಅವರ ವಾದವಾಗಿತ್ತು. ರಿಟ್‍ ಅರ್ಜಿಯನ್ನು ವಿರೋಧಿಸುವ ಅಟಾರ್ನಿ- ಜನರಲ್‍ರವರ ಮೂಲಕ 3ಅಂಶಗಳು ಸಲ್ಲಿಕೆಯಾಗಿದ್ದವು; ಮೊದಲನೆಯದಾಗಿ, ರಾಷ್ಟ್ರಪತಿಯವರು ಮಂತ್ರಿಮಂಡಲದ ನೆರವು ಮತ್ತು ಸಲಹೆ ಮೇಲೆ ಕಾರ್ಯನಿರ್ವಹಿಸುತ್ತಾರೆ. ಸಂವಿಧಾನದಅನುಚ್ಛೇದ 74 (2)ರ ಮೇರೆಗೆ ರಾಷ್ಟ್ರಪತಿಗೆ ಯಾವ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲಾಗಿತ್ತು ಎಂಬುದನ್ನು ನ್ಯಾಯಾಲಯವು ನಿರ್ಧರಿಸಲು ಸಾಧ್ಯವಿಲ್ಲ.

ಎರಡನೆಯದಾಗಿ, ಸಂವಿಧಾನದ 361ನೇ ಅನುಚ್ಛೆದದ ಮೇರೆಗೆ ರಾಜ್ಯಪಾಲರಿಗೆ ರಕ್ಷಣೆಯಿದೆ; ಮೂರನೆಯದಾಗಿ, ಉದ್ಘೋಷಣೆಯು ಸಂಸತ್ತಿನಿಂದ ಅನುಮೋದನೆಗೊಂಡಿದ್ದು, ಅರ್ಜಿದಾರರಿಗೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿತ್ತು. ಎರಡನೇ ವಾದವನ್ನು ವಿಭಾಗೀಯ ಪೀಠವು (ಮುಖ್ಯನ್ಯಾಯಮೂರ್ತಿ ಎ. ರಘುವೀರ್ ಮತ್ತು ಶ‍್ರೀ ನ್ಯಾಯಮೂರ್ತಿ ಬಿ.ಎಲ್. ಹನ್ಸಾರಿಯಾ) ಅನುಮೋದಿಸಿಲ್ಲ ಎಂಬುದು ಕಂಡುಬರುತ್ತದೆ. ಅಸಂಬದ್ಧವಾದ ರೀತಿಯಲ್ಲಿ ರಾಜ್ಯಪಾಲರು ಕಾರ್ಯನಿರ್ವಹಿಸಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ. ಅನುಚ್ಛೇದ 361ರ ಮೂಲಕ ವ್ಯಾಪಕ ರಕ್ಷಣೆ ಇರುವುದು ಏನೇ ಇದ್ದರೂ ಆನುಷಂಗಿಕ ವಿಷಯದ ಆಧಾರದ ಮೇಲೆ ತೆಗೆದುಕೊಂಡ ರಾಜ್ಯಪಾಲರ ಕ್ರಮವು ಸಮರ್ಥನೀಯವಾಗುತ್ತದೆ ಎಂದು ತೀರ್ಮಾನಿಸುವ ಮೂಲಕ ಈ ತೀರ್ಪು ಅನುಚ್ಛೇದ 361ನ್ನು ಅರ್ಹಗೊಳಿಸುತ್ತದೆ.

ರಾಷ್ಟ್ರಪತಿಯವರ ಮನವರಿಕೆಯಾಗುವುದಕ್ಕೆ ಬೆಂಬಲವಾದ ವಿಷಯಗಳ ಕುರಿತ ಪ್ರಶ್ನೆಯ ಬಗ್ಗೆ ಇಬ್ಬರು ನ್ಯಾಯಾಧೀಶರ ನಡುವೆ ಅಭಿಪ್ರಾಯ ಭೇದ ಉಂಟಾಗಿರುವುದು ಕಂಡು ಬರುತ್ತದೆ. ರಾಷ್ಟ್ರಪತಿಯವರು ಯಾವ ಆಧಾರದ ಮೇಲೆ ಮನವರಿಕೆ ಮಾಡಿಕೊಂಡರು ಎಂಬ ಆಧಾರವನ್ನು ಕುರಿತ ಪ್ರಶ್ನೆಯನ್ನು ನ್ಯಾಯಾಲಯವು ಕೇಳುವಂತಿಲ್ಲ ಎಂಬಷ್ಟರಮಟ್ಟಿಗೆ ಅಟಾರ್ನಿ ಜನರಲ್‍ರವರ ವಾದವನ್ನು ಮುಖ್ಯ ನ್ಯಾಯಮೂರ್ತಿ ಶ್ರೀ ಹನ್ಸಾರಿಯಾ ರವರ ಪ್ರಕಾರ ಸೂಕ್ತ ಸಾಕ್ಷ್ಯ ಸಂಗತಿಯ ವರದಿಯಲ್ಲಿ ಕಂಡುಬರದಿರುವುದರಿಂದ ರಾಜ್ಯಪಾಲರ ವರದಿಯನ್ನು ಮಾತ್ರವೇ ಆಧರಿಸಿ ಉದ್ಘೋಷಣೆಯನ್ನು ಕಾನೂನಿನ ಮಾನದಂಡದ ಚೌಕಟ್ಟಿನೊಳಗೆ ಹೊರಡಿಸಲಾಗುವುದಿಲ್ಲ ಎಂಬುದು ನ್ಯಾಯಮೂರ್ತಿಗಳ ಅಭಿಪ್ರಾಯವಾಗಿದೆ. ಹಾಗಾಗಿ, ರಾಷ್ಟ್ರಪತಿಗಳಿಗೆ ಮನವರಿಕೆಯಾಗಿರುವ ವಿಷಯವು ಅಧಿಕಾರದ ದುರುಪಯೋಗದಿಂದ ಆಗಿರುವಂತಹುದಾಗಿದೆ. ರಾಜಕೀಯ ತಂತ್ರಗಾರಿಕೆಯು ಬುದ್ದಿವಂತಿಕೆಯಿಂದ ನ್ಯಾಯಾಲಯವನ್ನು ಪ್ರತಿಷೇದಿಸಲಾಗದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ವಿಧೇಯಕದ ದೃಡೀಕರಣ

ಒಂದು ವಿಧೇಯಕವು ಅಂಗೀಕಾರಗೊಂಡಿದೆ ಎಂದು ಸಭಾಧ್ಯಕ್ಷರು ದೃಡೀಕರಿಸಿದ್ದಲ್ಲಿ, ತುರ್ತು ಕಾನೂನುಗಳ ಅಡಿಯಲ್ಲಿ ನಿರ್ಬಂಧಿಸಿದ ಪರಿಣಾಮವಾಗಿ ಕೆಲವು ಸದಸ್ಯರು ಸದನಕ್ಕೆ ಹಾಜರಾಗಲು ನಿರ್ಬಂಧಉಂಟಾಯಿತು ಎಂಬ ಕಾರಣದ ಮೇಲೆ ಆ ವಿಧೇಯಕವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುವುದಿಲ್ಲ; ಇಂದಿರಾ ವಿರುದ್ಧ-ರಾಜ್ ನಾರೈನ್. ಎಐಆರ್‍ 1957 ಎಸ್‍ಸಿ 2299.

ಅನುಚ್ಛೇದ -175. ಸದನವನ್ನುಅಥವಾ ಸದನಗಳನ್ನುಉದ್ದೇಶಿಸಿ ಭಾಷಣ ಮಾಡಲು ಮತ್ತು ಅವುಗಳಿಗೆ ಸಂದೇಶಗಳನ್ನುಕಳುಹಿಸಲು ರಾಜ್ಯಪಾಲರಿಗೆ ಇರುವಹಕ್ಕು

(1)ರಾಜ್ಯಪಾಲನು, ವಿಧಾನಸಭೆಯನ್ನು ಅಥವಾ ರಾಜ್ಯವು ವಿಧಾನಪರಿಷತ್ತನ್ನು ಹೊಂದಿರುವ ಸಂದರ್ಭದಲ್ಲಿ ಆರಾಜ್ಯದ ವಿಧಾನಮಂಡಲದ ಎರಡರಲ್ಲಿ ಒಂದು ಸದನವನ್ನುಅಥವಾ ಒಟ್ಟಿಗೆ ಸಭೆ ಸೇರಿರುವ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಬಹುದು ಮತ್ತು ಆ ಉದ್ದೇಶಕ್ಕಾಗಿ ಸದಸ್ಯರ ಹಾಜರಾತಿಯನ್ನುಅಗತ್ಯಪಡಿಸಬಹುದು.

(2)ರಾಜ್ಯದವಿಧಾನಮಂಡಲದಲ್ಲಿಆಗಇತ್ಯರ್ಥವಾಗದೆಉಳಿದಿರುವಯಾವುದೇವಿಧೇಯಕಕ್ಕೆಸಂಬಂಧಿಸಿದಅಥವಾಬೇರೆವಿಷಯಕ್ಕೆಸಂಬಂಧಿಸಿದಸಂದೇಶಗಳನ್ನು,ರಾಜ್ಯಪಾಲನು, ರಾಜ್ಯದ ವಿಧಾನ ಮಂಡಲದ ಸದನಕ್ಕೆ ಅಥ ವಾಸದನಗಳಿಗೆ ಕಳುಹಿಸಬಹುದು ಮತ್ತು ಯಾವಸದನಕ್ಕೆ ಯಾವುದೇ ಸಂದೇಶವನ್ನು, ಹಾಗೆ ಕಳುಹಿಸಲಾಗಿದೆಯೋ ಆಸದನವು ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕೆಂದು ಆಸಂದೇಶದ ಮೂಲಕ ಅಗತ್ಯಪಡಿಸಿರುವ ಯಾವುದೇ ವಿಷಯವನ್ನು ಅನುಕೂಲವಾದಷ್ಟು ಬೇಗನೆ ಆಸದನವು ಪರ್ಯಾಲೋಚಿಸತಕ್ಕದ್ದು.

ಅನುಚ್ಛೇದ 176. ರಾಜ್ಯಪಾಲನಿಂದವಿಶೇಷಭಾಷಣ

(1)ವಿಧಾನಸಭೆಯ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯ ತರುವಾಯ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ ಮತ್ತು ಪ್ರತಿವರ್ಷದ ಮೊದಲನೆಯ ಅಧಿವೇಶನದ ಪ್ರಾರಂಭದಲ್ಲಿ ರಾಜ್ಯಪಾಲನು, ವಿಧಾನಸಭೆಯನ್ನು ಅಥವಾ ರಾಜ್ಯವು ವಿಧಾನಪರಿಷತ್ತನ್ನು ಹೊಂದಿರುವ ಸಂದರ್ಭದಲ್ಲಿ ಒಟ್ಟಿಗೆ ಸಭೆಸೇರಿರುವ ಉಭಯಸದನಗಳನ್ನು ಉದ್ದೇಶಿಸಿ ಭಾಷಣಮಾಡತಕ್ಕದ್ದು ಮತ್ತು ವಿಧಾನಮಂಡಲವನ್ನು ಕರೆದಿರುವುದರ ಕಾರಣಗಳನ್ನು ಅದಕ್ಕೆ ತಿಳಿಸತಕ್ಕದ್ದು.

(2)ಅಂಥ ಭಾಷಣದಲ್ಲಿ ಉಲ್ಲೇಖಿಸಿದ ವಿಷಯಗಳ ಚರ್ಚೆಗಾಗಿ ಕಾಲವನ್ನು ನಿಗದಿಪಡಿಸುವುದಕ್ಕಾಗಿ ಸದನದ ಅಥವಾ ಎರಡೂ ಸದನಗಳ ಕಾರ್ಯ ವಿಧಾನವನ್ನು ವಿನಿಯಮಗೊಳಿಸುವಂಥ ನಿಯಮಗಳ ಮೂಲಕ ಉಪ ಬಂಧವನ್ನು ಕಲ್ಪಿಸತಕ್ಕದ್ದು.

ಅನುಚ್ಛೇದ -188. ಸದಸ್ಯರಿಂದಪ್ರಮಾಣವಚನಅಥವಾಪ್ರತಿಜ್ಞಾವಚನ

ಒಂದು ರಾಜ್ಯದ ವಿಧಾನಸಭೆಯ ಅಥವಾ ವಿಧಾನಪರಿಷತ್ತಿನ ಪ್ರತಿಯೊಬ್ಬ ಸದಸ್ಯನು, ತನ್ನ ಸ್ಥಾನವನ್ನುವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯಪಾಲನ ಸಮಕ್ಷಮ ಅಥವಾ ರಾಜ್ಯಪಾಲನಿಂದ ಆ ಬಗ್ಗೆ ನೇಮಕಗೊಂಡ ವ್ಯಕ್ತಿಯ ಸಮಕ್ಷಮ ಆ ಉದ್ದೇಶಕ್ಕಾಗಿ ಮೂರನೆಯ ಅನುಸೂಚಿಯಲ್ಲಿ ಕೊಡಲಾಗಿರುವ ನಮೂನೆಗೆ ಅನುಸಾರ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನರುಜುಹಾಕತಕ್ಕದ್ದು.

ಅನುಚ್ಛೇದ -192. ಸದಸ್ಯರಅನರ್ಹತೆಗಳನ್ನುಕುರಿತಪ್ರಶ್ನೆಗಳತೀರ್ಮಾನ

(1)ಒಂದು ರಾಜ್ಯ ವಿಧಾನ ಮಂಡಲ ದಸದನದ ಯಾರೇ ಸದಸ್ಯನು 191ನೆಯ ಅನುಚ್ಫೇದದ (1)ನೆಯ ಖಂಡದಲ್ಲಿ ನಮೂದಾಗಿರುವ ಯಾವುವೇ ಅನರ್ಹತೆಗಳಿಗೆ ಒಳಪಟ್ಟಿದ್ದಾನೆಯೇ ಹೇಗೆ ಎಂಬ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ಆ ಪ್ರಶ್ನೆಯನ್ನು ರಾಜ್ಯಪಾಲರ ತೀರ್ಮಾನಕ್ಕೆ ಒಪ್ಪಿಸ ತಕ್ಕದ್ದು ಮತ್ತು ಆ ಬಗ್ಗೆ ಅವರ ತೀರ್ಮಾನವೇ ಅಂತಿಮವಾಗಿರತಕ್ಕದ್ದು.

(2)ಅಂಥ ಯಾವುದೇ ಪ್ರಶ್ನೆಯ ಮೇಲೆ ಯಾವುದೇ ತೀರ್ಮಾನವನ್ನು ಕೊಡುವುದಕ್ಕೆ ಮುಂಚಿತವಾಗಿ ರಾಜ್ಯಪಾಲರು ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯತಕ್ಕದ್ದು ಮತ್ತು ಆ ಅಭಿಪ್ರಾಯಕ್ಕನುಸಾರವಾಗಿ ಕಾರ್ಯಪ್ರವೃತ್ತರಾಗತಕ್ಕದ್ದು.

ಅನುಚ್ಛೇದ 192ರ ಕುರಿತು ಟಿಪ್ಪಣಿಗಳು

ಚುನಾವಣಾ ಆಯೋಗ

ಇಬ್ಬರು ಚುನಾವಣಾ ಆಯುಕ್ತರು ಇರುವಲ್ಲಿ ಅಗತ್ಯವಾಗಿ ಸರ್ವಾನುಮತದ ನಿರ್ಧಾರಕ್ಕೆ ಬರದಿದ್ದರೆ ಮುಖ್ಯ ಚುನಾವಣಾ ಆಯುಕ್ತರು ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸಬೇಕಾಗುತ್ತದೆ. ಬಹುಮತದ ಅಭಿಪ್ರಾಯವನ್ನು ರಾಜ್ಯಪಾಲರಿಗೆ ಕಳಿಸಲಾಗುತ್ತದೆ; ಚುನಾವಣಾ ಆಯೋಗ-ವಿರುದ್ದ-ಸುಬ್ರಮಣಿಯಂ ಸ್ವಾಮಿ ಎಐಆರ್‍ 1996 ಎಸ್‍ಸಿ 810.

ಅನುಚ್ಛೇದ -200. ವಿಧೇಯಕಗಳಿಗೆ ಅನುಮತಿ

ಒಂದು ವಿಧೇಯಕವು ಒಂದು ರಾಜ್ಯದ ವಿಧಾನಸಭೆಯಿಂದ ಅಂಗೀಕೃತವಾದಾಗ ಅಥವಾ ವಿಧಾನಪರಿಷತ್ತನ್ನು ಹೊಂದಿರುವ ಒಂದು ರಾಜ್ಯದ ಸಂದರ್ಭದಲ್ಲಿಆ ರಾಜ್ಯದ ವಿಧಾನಮಂಡಲದ ಉಭಯ ಸದನಗಳಿಂದ ಅಂಗೀಕೃತವಾದಾಗ, ಅದನ್ನು ರಾಜ್ಯಪಾಲರಿಗೆ ಒಪ್ಪಿಸತಕ್ಕದ್ದು ಮತ್ತು ರಾಜ್ಯಪಾಲರು ಆವಿಧೇಯಕಕ್ಕೆ ತನ್ನ ಅನುಮತಿಯನ್ನು ಕೊಟ್ಟಿರುವುದಾಗಿ ಅಥವಾ ಅದಕ್ಕೆ ಅನುಮತಿಯನ್ನು ತಡೆಹಿಡಿದಿರುವುದಾಗಿ ಅಥವಾರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಅದನ್ನು ಕಾಯ್ದಿರಿಸಿರುವುದಾಗಿ ಘೋಷಿಸತಕ್ಕದ್ದು:

ಪರಂತು, ವಿಧೇಯಕವನ್ನು ಅನುಮತಿಗಾಗಿ ರಾಜ್ಯಪಾಲರಿಗೆ ಒಪ್ಪಿಸಿದ ತರುವಾಯ ಅವರು ಸಾಧ್ಯವಾದಷ್ಟು ಬೇಗನೆ, ಅದು ಧನ ವಿಧೇಯಕವಾಗಿಲ್ಲದಿದ್ದರೆ ವಿಧಾನಮಂಡಲದ ಸದನವು ಅಥವಾ ಸದನಗಳು ಆವಿಧೇಯಕವನ್ನು ಅಥವಾ ಅದರ ಯಾವುವೇ ನಿರ್ದಿಷ್ಟವಾದ ಉಪಬಂಧಗಳನ್ನು ಮತ್ತೊಮ್ಮೆ ಪರ್ಯಾಲೋಚಿಸಬೇಕೆಂದು ಮತ್ತು ವಿಶೇಷವಾಗಿ ಅವನು ತನ್ನ ಸಂದೇಶದಲ್ಲಿ ಶಿಫಾರಸುಮಾಡಬಹುದಾದಂಥ ಯಾವುವೇತಿದ್ದುಪಡಿಗಳನ್ನು ಮಂಡಿಸುವುದರ ಅಪೇಕ್ಷಣೀಯತೆಯನ್ನು ಪರ್ಯಾಲೋಚಿಸಬೇಕೆಂದು ಕೋರುವ ಸಂದೇಶದೊಡನೆ ಆವಿಧೇಯಕವನ್ನು ವಾಪಸ್ಸು ಕಳುಹಿಸಬಹುದು ಮತ್ತು ವಿಧೇಯಕವನ್ನು ಹಾಗೆ ವಾಪಸ್ಸು ಕಳುಹಿಸಿದಾಗ, ವಿಧಾನಮಂಡಲದ ಸದನ ಅಥವಾ ಸದನಗಳು ಆ ವಿಧೇಯಕವನ್ನು ತದನುಸಾರ ಪುನಃಪರ್ಯಾಲೋಚಿಸತಕ್ಕದ್ದು ಮತ್ತು ಆ ವಿಧೇಯಕವನ್ನು ಸದನ ಅಥವಾ ಸದನಗಳು ತಿದ್ದು ಪಡಿಸಹಿತವಾಗಿ ಅಥವಾ ತಿದ್ದುಪಡಿ ಇಲ್ಲದೆ ಪುನಃ ಅಂಗೀಕರಿಸಿ, ರಾಜ್ಯಪಾಲನ ಅನುಮತಿಗಾಗಿ ಒಪ್ಪಿಸಿದರೆ, ರಾಜ್ಯಪಾಲನು ಅದಕ್ಕೆ ಅನುಮತಿಯನ್ನು ತಡೆಹಿಡಿಯತಕ್ಕದ್ದಲ್ಲ:

ಮತ್ತೂಪರಂತು, ಯಾವುದೇ ವಿಧೇಯಕವು ಕಾನೂನಾದರೆ, ಅದು ಈ ಸಂವಿಧಾನದ ಮೇರೆಗೆ ಉಚ್ಚನ್ಯಾಯಾಲಯವು ಯಾವಸ್ಥಾನವನ್ನು ಹೊಂದಿರಬೇಕೆಂದು ಉದ್ದೇಶಿಸಲಾಗಿದೆಯೋ ಆಸ್ಥಾನಕ್ಕೆ ಅಪಾಯವುಂಟು ಮಾಡುವ ರೀತಿಯಲ್ಲಿ ಆ ನ್ಯಾಯಾಲಯದ ಅಧಿಕಾರಗಳನ್ನು ಅಲ್ಪೀಕರಿಸುತ್ತದೆಂದು ರಾಜ್ಯಪಾಲನು ಅಭಿಪ್ರಾಯಪಟ್ಟರೆ ಅಂಥ ವಿಧೇಯಕಕ್ಕೆ ಅವನು ಅನುಮತಿಯನ್ನು ಕೊಡತಕ್ಕದ್ದಲ್ಲ, ಆದರೆ ಅದನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸತಕ್ಕದ್ದು.

ಅನುಚ್ಛೇದ 200ರ ಕುರಿತು ಟಿಪ್ಪಣಿಗಳು

ವಿಧೇಯಕಗಳಿಗೆ ರಾಜ್ಯಪಾಲರ ಅನುಮತಿ

ರಾಜ್ಯ ವಿಧಾನಮಂಡಲವು ಹೊರಡಿಸಿದ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿದಾಗ ರಾಜ್ಯಪಾಲರಿಗೆ ನಾಲ್ಕು ಆಯ್ಕೆಗಳು ಮುಕ್ತವಾಗುತ್ತದೆ-

ಅನುಚ್ಛೇದ -201. ಪರ್ಯಾಲೋಚನೆಗಾಗಿ ಕಾಯ್ದಿರಿಸಿದ ವಿಧೇಯಕಗಳು

ವಿಧೇಯಕವನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ರಾಜ್ಯಪಾಲನು ಕಾಯ್ದಿರಿಸಿದಾಗ, ರಾಷ್ಟ್ರಪತಿಯು ಆ ವಿಧೇಯಕಕ್ಕೆ ತಾನು ಅನುಮತಿಕೊಟ್ಟಿರುವುದಾಗಿ ಅಥವಾ ಅನುಮತಿಯನ್ನು ತಡೆಹಿಡಿದಿರುವುದಾಗಿ ಘೋಷಿಸತಕ್ಕದ್ದು: ಪರಂತು, ಒಂದು ವಿಧೇಯಕವು ಧನ ವಿಧೇಯಕವಾಗಿಲ್ಲದಿದ್ದರೆ ಆ ವಿಧೇಯಕವನ್ನು ಸಂದರ್ಭಾನುಸಾರ, ರಾಜ್ಯದ ವಿಧಾನಮಂಡಲದ ಸದನಕ್ಕೆ ಅಥವಾ ಸದನಗಳಿಗೆ 200ನೆಯ ಅನುಚ್ಫೇದದ ಮೊದಲನೆಯ ಪರಂತುಕದಲ್ಲಿ ನಮೂದಿಸಲಾದ ಸಂದೇಶದ ಸಹಿತ ವಾಪಸ್ಸು ಕಳುಹಿಸುವಂತೆ ರಾಷ್ಟ್ರಪತಿಯು ರಾಜ್ಯಪಾಲನಿಗೆ ನಿರ್ದೇಶಿಸಬಹುದು ಮತ್ತು ಆವಿಧೇಯಕವನ್ನು ಹಾಗೆ ವಾಪಸ್ಸುಕ ಳುಹಿಸಿದಾಗ, ಆಸದನವು ಅಥವಾ ಸದನಗಳು ಅಂಥ ಸಂದೇಶವು ತಲುಪಿದ ದಿನಾಂಕದಿಂದ ಆರುತಿಂಗಳುಗಳ ಅವಧಿಯೊಳಗಾಗಿ, ಆ ಸಂದೇಶಕ್ಕನುಸಾರವಾಗಿ ಆವಿಧೇಯಕವನ್ನು ಪುನಃಪರ್ಯಾಲೋಚಿಸತಕ್ಕದ್ದು ಮತ್ತು ಅದು ಆಸದನದಿಂದ ಅಥವಾ ಸದನಗಳಿಂದ ತಿದ್ದುಪಡಿಯಸಹಿತ ಅಥವಾ ತಿದ್ದುಪಡಿಯಿಲ್ಲದೆ ಪುನಃ ಅಂಗೀಕೃತವಾದರೆ ಅದನ್ನು ಪರ್ಯಾಲೋಚನೆಗಾಗಿ ರಾಷ್ಟ್ರಪತಿಗೆ ಪುನಃ ಒಪ್ಪಿಸತಕ್ಕದ್ದು.

ಹಣಕಾಸು ವಿಷಯಗಳ ಬಗೆಗಿನ ಪ್ರಕ್ರಿಯೆ

ಅನುಚ್ಛೇದ -202. ವಾರ್ಷಿಕ ಹಣಕಾಸು ವಿವರ ಪತ್ರ

(1)ರಾಜ್ಯಪಾಲನು ಪ್ರತಿ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ರಾಜ್ಯದ ಅಂದಾಜು ಜಮೆಗಳ ಮತ್ತು ವೆಚ್ಚದ ವಿವರಣೆಯನ್ನು ರಾಜ್ಯ ವಿಧಾನಮಂಡಲದ ಸದನದ ಅಥವಾ ಸದನಗಳ ಮುಂದೆ ಇಡುವಂತೆ ಮಾಡತಕ್ಕದ್ದು. ಈ ಭಾಗದಲ್ಲಿ ಅದನ್ನು“ವಾರ್ಷಿಕ ಹಣಕಾಸು ವಿವರ ಪತ್ರ”ಎಂದು ಉಲ್ಲೇಖಿಸಲಾಗಿದೆ.

(2) ವಾರ್ಷಿಕ ಹಣಕಾಸು ವಿವರ ಪತ್ರದಲ್ಲಿ ಒಳಗೊಂಡಿರುವ ವೆಚ್ಚದ ಅಂದಾಜುಗಳಲ್ಲಿ,-

(ಎ) ರಾಜ್ಯದ ಸಂಚಿತನಿ ಧಿಯ ಮೇಲೆ ಹೊರಿಸಲಾದ ವೆಚ್ಚವೆಂದು ಈ ಸಂವಿಧಾನದಲ್ಲಿ ವಿವರಿಸಿರುವ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು; ಮತ್ತು

(ಬಿ) ರಾಜ್ಯದ ಸಂಚಿತ ನಿಧಿಯಿಂದ ಖರ್ಚು ಮಾಡಬೇಕೆಂದು ಉದ್ದೇಶಿಸಿರುವ ಇತರ ವೆಚ್ಚವನ್ನು ಭರಿಸಲು ಬೇಕಾದ ಮೊಬಲಗುಗಳನ್ನು

- ಪ್ರತ್ಯೇಕವಾಗಿ ತೋರಿಸತಕ್ಕದ್ದು ಮತ್ತು ರಾಜಸ್ವಲೆಕ್ಕಕ್ಕೆ ಖರ್ಚು ಬೀಳುವ ವೆಚ್ಚವನ್ನು ಮತ್ತು ಇತರ ವೆಚ್ಚದಿಂದ ಪ್ರತ್ಯೇಕಿಸಿ ತೋರಿಸತಕ್ಕದ್ದು.

(3) ಈ ಕೆಳಕಂಡ ವೆಚ್ಚವು ಪ್ರತಿಯೊಂದು ರಾಜ್ಯದ ಸಂಚಿತ ನಿಧಿಯ ಮೇಲೆ ಹೊರಿಸಲಾಗುವ ವೆಚ್ಚವಾಗಿರ ತಕ್ಕದ್ದು:-

(ಎ) ರಾಜ್ಯಪಾಲನ ಉಪಲಬ್ಧಿಗಳು ಮತ್ತು ಭತ್ಯಗಳು ಹಾಗೂ ಅವನಪದಕ್ಕೆ ಸಂಬಂಧಪಟ್ಟ ಇತರ ವೆಚ್ಚ;

(ಬಿ) ವಿಧಾನಸಭೆಯ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಸಂಬಳಗಳು ಮತ್ತು ಭತ್ಯಗಳು ಮತ್ತು ವಿಧಾನಪರಿಷತ್ತು ಇರುವ ರಾಜ್ಯದ ಸಂದರ್ಭದಲ್ಲಿ ಆವಿಧಾನಪರಿಷತ್ತಿನ ಸಭಾಪತಿಯ ಅಥವಾ ಉಪ ಸಭಾಪತಿಯ ಸಂಬಳಗಳು ಮತ್ತು ಭತ್ಯಗಳು;

(ಸಿ) ಬಡ್ಡಿ, ಸಾಲ ತೀರುವ ನಿಧಿಯ ಭಾರಗಳು ಮತ್ತು ಋಣ ವಿಮೋಚನೆಯ ಭಾರಗಳು ಸೇರಿದಂತೆ ರಾಜ್ಯ ಸರ್ಕಾರವು ಹೊಣೆಯಾಗಿರುವ ಋಣಭಾರಗಳು ಮತ್ತು ಸಾಲಗಳನ್ನು ಎತ್ತುವುದಕ್ಕೆ ಸಂಬಂಧಪಟ್ಟ ಮತ್ತು ಋಣ ತೀರಿಕೆ ಸೇವೆಗೆ ಹಾಗೂ ಋಣ ವಿಮೋಚನೆಗೆ ಸಂಬಂಧಪಟ್ಟ ಇತರವೆಚ್ಚ;

(ಡಿ) ಯಾವುದೇ ಉಚ್ಚನ್ಯಾಯಾಲಯದ ನ್ಯಾಯಾಧೀಶರ ಸಂಬಳಗಳಿಗೆ ಮತ್ತು ಭತ್ಯಗಳಿಗೆ ಸಂಬಂಧಪಟ್ಟವೆಚ್ಚ;

(ಇ) ಯಾವುದೇ ನ್ಯಾಯಾಲಯದ ಅಥವಾ ಮಧ್ಯಸ್ಥಗಾರಿಕೆ ನ್ಯಾಯಾಧಿಕರಣದ ಯಾವುದೇ ತೀರ್ಪು, ಡಿಕ್ರಿ ಅಥವಾ ಐತೀರ್ಪುಗಳ ಮೇರೆಗೆ ಸಂದಾಯಮಾಡಲು ಬೇಕಾಗಿರುವ ಯಾವುವೇ  ಮೊಬಲಗುಗಳು;

(ಎಫ್) ಈ  ಸಂವಿಧಾನದ ಮೂಲಕ ಅಥವಾ ರಾಜ್ಯ ವಿಧಾನಮಂಡಲವು ಕಾನೂನಿನ ಮೂಲಕ ಹಾಗೆ ಹೊರಿಸಲಾಗಿರುವ ವೆಚ್ಚ ಎಂದು ಘೋಷಿಸಲಾದ ಇತರ ಯಾವುದೇ ವೆಚ್ಚ.

ಅನುಚ್ಛೇದ 205. ಪೂರಕ, ಹೆಚ್ಚುವರಿ ಅಥವಾ ಅಧಿಕಅ ನುದಾನಗಳು

(1) ರಾಜ್ಯಪಾಲನು,-

(ಎ) 204ನೆಯ ಅನುಚ್ಫೇದದ ಉಪಬಂಧಗಳಿಗನುಸಾರವಾಗಿ ಮಾಡಿದ ಯಾವುದೇ ಕಾನೂನಿನ ಮೂಲಕ, ಚಾಲ್ತಿ ಹಣಕಾಸು ವರ್ಷದಲ್ಲಿ ನಿರ್ದಿಷ್ಟ ಸೇವೆಗೆ ವೆಚ್ಚ ಮಾಡುವುದಕ್ಕಾಗಿ ಅಧಿಕೃತಗೊಳಿಸಿದ ಮೊಬಲಗು ಆ ವರ್ಷದ ಉದ್ದೇಶಗಳಿಗೆ ಸಾಕಾಗುವುದಿಲ್ಲವೆಂದು ಕಂಡು ಬಂದರೆ ಅಥವಾ ಆ ಚಾಲ್ತಿ ಹಣಕಾಸು ವರ್ಷದ ವಾರ್ಷಿಕ ಹಣಕಾಸು ವಿವರಪತ್ರದಲ್ಲಿ ಉದ್ದೇಶಿಸಿಲ್ಲದ ಯಾವುದೇ ಹೊಸ  ಸೇವೆಯ ಸಂಬಂಧದಲ್ಲಿ ಆ ವರ್ಷದಲ್ಲಿ ಪೂರಕ ಅಥವಾ ಅಧಿಕ ವೆಚ್ಚದ ಅಗತ್ಯತೆವುಂಟಾದರೆ, ಅಥವಾ

(ಬಿ) ಯಾವುದೇ ಸೇವೆಗಾ ಗಿಹಣಕಾಸು ವರ್ಷದಲ್ಲಿ ಆ ವರ್ಷಕ್ಕೆ ಕೊಡಲಾದ ಮೊಬಲಗನ್ನು ಮೀರಿದ ಯಾವುದೇ ಹಣವು ಆ ಸೇವೆಗಾಗಿ ವೆಚ್ಚವಾಗಿದ್ದರೆ

-ಸಂದರ್ಭಾನುಸಾರ, ಆ ವೆಚ್ಚದ ಅಂದಾಜು ಮೊಬಲಗನ್ನು ತೋರಿಸುವ ಇನ್ನೊಂದು ವಿವರಪತ್ರವನ್ನು ರಾಜ್ಯದ ವಿಧಾನಮಂಡಲದ ಸದನದ ಅಥವಾ ಸದನಗಳ ಮುಂದೆ ಇಡುವಂತೆ ಅಥವಾ ಅಂಥ ಅಧಿಕ ಮೊಬಲಗಿಗೆ ಬೇಡಿಕೆಯನ್ನು ರಾಜ್ಯದ ವಿಧಾನಸಭೆಯ ಮುಂದೆ ಇಡುವಂತೆ ಮಾಡತಕ್ಕದ್ದು.

(2) 202, 203 ಮತ್ತು  204ನೆಯ ಅನುಚ್ಫೇದಗಳ ಉಪಬಂಧಗಳು ವಾರ್ಷಿಕ ಹಣಕಾಸು ವಿವರ ಪತ್ರದ ಮತ್ತು ಆ ವಿವರ ಪತ್ರದಲ್ಲಿ ನಮೂದಿಸಿದ ವೆಚ್ಚದ ಅಥವಾ ಅನುದಾನದ ಬೇಡಿಕೆ ಮತ್ತು ಅಂಥ ವೆಚ್ಚವನ್ನು ಅಥವಾ ಅನುದಾನವನ್ನು ಭರಿಸಲು ರಾಜ್ಯದ ಸಂಚಿತ ನಿಧಿಯಿಂದ ಹಣವನ್ನು ವಿನಿಯೋಗಿಸುವುದನ್ನು ಅಧಿಕೃತಗೊಳಿಸಲು ಮಾಡಬೇಕಾದ ಕಾನೂನಿನ ಸಂಬಂಧದಲ್ಲಿ ಪರಿಣಾಮಕಾರಿ ಯಾಗಿರುವಂತೆಯೇ, ಅಂಥ ಯಾವುದೇ ವಿವರ ಪತ್ರದ ಮತ್ತು ವೆಚ್ಚದ ಅಥವಾ ಬೇಡಿಕೆಯ ಹಾಗೂ ಅಂಥ ಬೇಡಿಕೆಗೆ ಸಂಬಂಧಿಸಿದ ವೆಚ್ಚವನ್ನು ಅಥವಾ ಅನುದಾನವನ್ನು ಭರಿಸಲು ರಾಜ್ಯದ ಸಂಚಿತನಿಧಿಯಿಂದ ಹಣ ವಿನಿಯೋಗಿಸುವುದನ್ನು ಅಧಿಕೃತಗೊಳಿಸುವ ಯಾವುದೇ ಕಾನೂನಿನ ಸಂಬಂಧದಲ್ಲಿಯೂ ಪರಿಣಾಮಕಾರಿಯಾಗಿರ ತಕ್ಕದ್ದು.

 

ಸಾಮಾನ್ಯತಃಪ್ರಕ್ರಿಯೆ

ಅನುಚ್ಛೇದ -208. ಪ್ರಕ್ರಿಯಾ ನಿಯಮಗಳು

(1) ರಾಜ್ಯದ ವಿಧಾನ ಮಂಡಲದ ಒಂದು ಸದನವು ತನ್ನ ಪ್ರಕ್ರಿಯೆಯನ್ನು ಮತ್ತು ಅದರ ಕಾರ್ಯಕಲಾಪ ನಡೆಸುವುದನ್ನು ವಿನಿಯಮಗೊಳಿಸುವುದಕ್ಕಾಗಿ ಈ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು ನಿಯಮಗಳನ್ನು ರಚಿಸಬಹುದು.

(2) (1)ನೆಯ ಖಂಡದ ಮೇರೆಗೆ ನಿಯಮಗಳನ್ನು ರಚಿಸುವವರೆಗೆ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟ ಪೂರ್ವದಲ್ಲಿ, ಆ ರಾಜ್ಯಕ್ಕೆ ಸಂವಾದಿ ಪ್ರಾಂತದ ವಿಧಾನಮಂಡಲದ ಸಂಬಂಧದಲ್ಲಿ ಯಾವ ಪ್ರಕ್ರಿಯಾ ನಿಯಮಗಳು ಮತ್ತು ಸ್ಥಾಯಿ ಆದೇಶಗಳು ಜಾರಿಯಲ್ಲಿದ್ದವೋ ಅವೇ ನಿಯಮಗಳು ಮತ್ತು ಸ್ಥಾಯಿ ಆದೇಶಗಳು, ವಿಧಾನಸಭೆಯ ಅಧ್ಯಕ್ಷನು ಅಥವಾ ಸಂದರ್ಭಾನುಸಾರ ವಿಧಾನಪರಿಷತ್ತಿನ ಸಭಾಪತಿಯು ಅವುಗಳಲ್ಲಿ ಮಾಡಬಹುದಾದಂಥ ಮಾರ್ಪಾಡುಗಳಿಗೆ ಮತ್ತು ಅಳವಡಿಕೆಗಳಿಗೆ ಒಳಪಟ್ಟು, ರಾಜ್ಯದ ವಿಧಾನ ಮಂಡಲಕ್ಕೆ ಸಂಬಂಧಪಟ್ಟಂತೆ ಪರಿಣಾಮಕಾರಿಯಾಗತಕ್ಕದ್ದು.

(3) ವಿಧಾನಪರಿಷತ್ತನ್ನು ಹೊಂದಿರುವ ರಾಜ್ಯಗಳ ಸಂಬಂಧದಲ್ಲಿ ರಾಜ್ಯಪಾಲನು, ವಿಧಾನಸಭೆಯ ಅಧ್ಯಕ್ಷನೊಡನೆ ಮತ್ತು ವಿಧಾನಪರಿಷತ್ತಿನ ಸಭಾಪತಿಯೊಡನೆ ಸಮಾಲೋಚಿಸಿದ ತರುವಾಯ, ಆ ಎರಡು ಸದನಗಳ ನಡುವಣ ಸಂಪರ್ಕದ ಪ್ರಕ್ರಿಯೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸಬಹುದು.

ಅನುಚ್ಛೇದ -213. ವಿಧಾನಮಂಡಲದ ವಿರಾಮಕಾಲದಲ್ಲಿ ಅಧ್ಯಾದೇಶಗಳನ್ನು ಹೊರಡಿಸಲು ರಾಜ್ಯಪಾಲನ ಅಧಿಕಾರ

(1) ರಾಜ್ಯದ ವಿಧಾನಸಭೆಯು ಅಧಿವೇಶನದಲ್ಲಿರುವ ಕಾಲವನ್ನು ಹೊರತುಪಡಿಸಿ ಅಥವಾ ರಾಜ್ಯದಲ್ಲಿ ವಿಧಾನಪರಿಷತ್ತು ಇರುವಲ್ಲಿವಿ ಧಾನಮಂಡಲದ ಉಭಯಸದನಗಳು ಅಧಿವೇಶನದಲ್ಲಿರುವ ಕಾಲವನ್ನುಹೊರತುಪಡಿಸಿ, ಯಾವುದೇ ಕಾಲದಲ್ಲಿ ತಾನು ಕೂಡಲೇಕ್ರಮವನ್ನು ಕೈಗೊಳ್ಳುವುದು ಅವಶ್ಯವಾಗಿರುವ ಸನ್ನಿವೇಶಗಳು ಇರುವುದಾಗಿ ರಾಜ್ಯಪಾಲನಿಗೆ ಮನದಟ್ಟಾದರೆ, ಅವನುಆಸನ್ನಿವೇಶಗಳಿಗೆಅಗತ್ಯವೆಂದುತನಗೆತೋರುವಂಥಅಧ್ಯಾದೇಶಗಳನ್ನುಹೊರಡಿಸಬಹುದು:

ಪರಂತು, ರಾಜ್ಯಪಾಲನು,-

(ಎ) ವಿಧೇಯಕವು ಆ ಅಧ್ಯಾದೇಶದಲ್ಲಿರುವಂಥವೇ ಉಪಬಂಧಗಳನ್ನೊಳಗೊಂಡಿದ್ದು, ಅದನ್ನು ವಿಧಾನಮಂಡಲದಲ್ಲಿ ಮಂಡಿಸಬೇಕಾದರೆ ಈ ಸಂವಿಧಾನದ ಮೇರೆಗೆ ಅದಕ್ಕೆ ರಾಷ್ಟ್ರಪತಿಯ ಮಂಜೂರಾತಿಯನ್ನು ಮುಂಚಿತವಾಗಿಪಡೆಯ ಬೇಕಾದುದು ಅಗತ್ಯವಾಗಿದ್ದರೆ; ಅಥವಾ

(ಬಿ) ಅವೇ ಉಪಬಂಧಗಳನ್ನು ಒಳಗೊಂಡ ವಿಧೇಯಕವನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸುವುದು ಅವಶ್ಯವೆಂದು ರಾಜ್ಯಪಾಲನುಭಾವಿಸಿದರೆ; ಅಥವಾ

(ಸಿ) ಅವೇ ಉಪಬಂಧಗಳನ್ನು ಒಳಗೊಂಡ ರಾಜ್ಯದ ವಿಧಾನಮಂಡಲದ ಒಂದು ಅಧಿನಿಯಮವನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸಿದ್ದು ಅದಕ್ಕೆ ರಾಷ್ಟ್ರಪತಿಯ ಅನುಮತಿಯು ದೊರೆಯದೆ ಹೋದ ಪಕ್ಷದಲ್ಲಿ ಈ ಸಂವಿಧಾನದ ಮೇರೆಗೆ ಅದು ಅಸಿಂಧುವಾಗುತ್ತಿದ್ದರೆ

-ರಾಷ್ಟ್ರಪತಿಯಿಂದ ಅನುದೇಶಗಳನ್ನು ಪಡೆಯದೆಯೇ ಅಂಥ ಯಾವುದೇ ಅಧ್ಯಾದೇಶವನ್ನು ಹೊರಡಿ ಸತಕ್ಕದ್ದಲ್ಲ.

(2) ಈ ಅನುಚ್ಫೇದದ ಮೇರೆಗೆ ಹೊರಡಿಸಲಾದ ಅಧ್ಯಾದೇಶವು ರಾಜ್ಯಪಾಲನಿಂದ ಅನುಮತಿಯನ್ನು ಪಡೆದಿರುವ ರಾಜ್ಯದ ವಿಧಾನಮಂಡಲದ ಒಂದು ಅಧಿನಿಯಮದಂತೆಯೇ ಬಲವುಳ್ಳದ್ದಾಗಿಯೂ ಮತ್ತು ಪರಿಣಾಮವುಳ್ಳದ್ದಾಗಿಯೂ ಇರತಕ್ಕದ್ದು. ಆದರೆ ಅಂಥಪ್ರ ತಿಯೊಂದು ಅಧ್ಯಾದೇಶವನ್ನು,-

(ಎ) ರಾಜ್ಯದ ವಿಧಾನಸಭೆಯ ಮುಂದೆ ಅಥವಾ ರಾಜ್ಯದಲ್ಲಿ ವಿಧಾನಪರಿಷತ್ತು ಇದ್ದಲ್ಲಿಅವೆರಡೂ ಸದನಗಳ ಮುಂದೆ ಇಡತಕ್ಕದ್ದು ಮತ್ತು ವಿಧಾನಮಂಡಲವು ಪುನಃ ಸಭೆಸೇರಿದಾಗಿನಿಂದ ಆರು ವಾರಗಳು ಮುಕ್ತಾಯವಾದ ಅನಂತರ ಅಥವಾ ಆ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ಆ ಅಧ್ಯಾದೇಶವನ್ನು ಅನುಮೋದಿಸದೆ ಇರುವ ನಿರ್ಣಯವು ವಿಧಾನಸಭೆಯಿಂದ ಅಂಗೀಕೃತವಾದರೆ ಮತ್ತು ವಿಧಾನಪರಿಷತ್ತು ಇರುವಲ್ಲಿ ಅದು ಅಂಥ ನಿರ್ಣಯಕ್ಕೆ ಒಪ್ಪಿಗೆ ಕೊಟ್ಟರೆ, ಆನಿ ರ್ಣಯವು ಅಂಗೀಕೃತವಾದೊಡನೆಯೇ ಅಥವಾ ಸಂದರ್ಭಾನುಸಾರ ವಿಧಾನಪರಿಷತ್ತು ಅದಕ್ಕೆ ಒಪ್ಪಿಗೆ ಕೊಟ್ಟೊಡನೆಯೇ ಅದು ಜಾರಿಯಲ್ಲಿರುವುದು ನಿಂತು ಹೋಗತಕ್ಕದ್ದು; ಮತ್ತು

(ಬಿ) ಯಾವುದೇ ಕಾಲದಲ್ಲಿ ರಾಜ್ಯಪಾಲನು ಹಿಂತೆಗೆದುಕೊಳ್ಳಬಹುದು.

ವಿವರಣೆ:-ವಿಧಾನಪರಿಷತ್ತು ಇರುವ ರಾಜ್ಯದ ವಿಧಾನಮಂಡಲದ ಸದನಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ಪುನಃ ಸಮಾವೇಶಗೊಳ್ಳುವಂತೆ ಕರೆದಿರುವ ಸಂದರ್ಭದಲ್ಲಿ ಈಖಂಡದ ಉದ್ದೇಶಗಳಿಗಾಗಿ, ಆ ದಿನಾಂಕಗಳಲ್ಲಿ ಆನಂತರದ ದಿನಾಂಕದಿಂದ ಆರುವಾರಗಳ ಅವಧಿಯನ್ನು ಲೆಕ್ಕ ಹಾಕತಕ್ಕದ್ದು.

(3) ಯಾವ ಉಪಬಂಧವನ್ನು ರಾಜ್ಯ ವಿಧಾನಮಂಡಲದ ಅಧಿನಿಯಮದಲ್ಲಿ ಅಧಿನಿಯ ಮಿತಗೊಳಿಸಿದ್ದರೆ ಮತ್ತು ರಾಜ್ಯಪಾಲನು ಅನುಮತಿಯನ್ನು ಕೊಟ್ಟಿದ್ದರೆ ಸಿಂಧುವಾಗುತ್ತಿರಲಿಲ್ಲವೋ ಅಂಥ ಯಾವುದೇ ಉಪಬಂಧವನ್ನು ಈ ಅನುಚ್ಫೇದದ ಮೇರೆಗೆ ಯಾವುದೇ ಅಧ್ಯಾದೇಶದ ಮೂಲಕ ಮಾಡಿದರೆ ಮತ್ತು ಮಾಡುವಷ್ಟರ ಮಟ್ಟಿಗೆ ಅಂಥ ಅಧ್ಯಾದೇಶವು ಶೂನ್ಯವಾಗ ತಕ್ಕದ್ದು:

ಪರಂತು, ಸಮವರ್ತಿ ಪಟ್ಟಿಯಲ್ಲಿ ನಮೂದಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಅಧಿನಿಯಮಕ್ಕೆ ಅಥವಾ ಅಸ್ತಿತ್ವದಲ್ಲಿರುವ ಕಾನೂನಿಗೆ ವಿರುದ್ಧವಾಗಿರುವ ಒಂದು ರಾಜ್ಯದ ವಿಧಾನಮಂಡಲದ ಅಧಿನಿಯಮದ ಪರಿಣಾಮಕ್ಕೆ ಸಂಬಂಧಿಸಿದ ಈ ಸಂವಿಧಾನದ ಉಪಬಂಧಗಳ ಉದ್ದೇಶಗಳಿಗಾಗಿ, ರಾಷ್ಟ್ರಪತಿಯ ಅನುದೇಶಗಳಿಗನು ಸಾರವಾಗಿ ಈ ಅನುಚ್ಫೇದದ ಮೇರೆಗೆ ಹೊರಡಿಸಿದ ಅಧ್ಯಾದೇಶವನ್ನು, ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸಿದ್ದು ಅವನಿಂದ ಅನುಮತಿಯನ್ನು ಪಡೆದಿರುವ ರಾಜ್ಯ ವಿಧಾನಮಂಡಲದ ಒಂದು ಅಧಿನಿಯಮವಾಗಿರುವುದಾಗಿ ಭಾವಿಸ ತಕ್ಕದ್ದು.

ಅನುಚ್ಛೇದ 213ರ ಕುರಿತು ಟಿಪ್ಪಣಿಗಳು

(ರಾಷ್ಟ್ರಪತಿಯ ಮೂಲಕ ಅಧ್ಯಾದೇಶವನ್ನು ಹೊರಡಿಸುವುದು). ಅನುಚ್ಛೇದ 213ರ ಕುರಿತ ಅತ್ಯಂತ ಮಹತ್ತರವಾದ ಪ್ರಕರಣವೆಂದರೆ ಡಿ.ಸಿ. ವಾದ್ವಾ-ವಿರುದ್ಧ-ಬಿಹಾರ ರಾಜ್ಯ ಎಐಆರ್‍ 1987 ಎಸ್‍ಸಿ 579 ಆಗಿದೆ. ಅಧ್ಯಾದೇಶಗಳ ಮರುಉದ್ಘೋಷಣೆ ಪುಸ್ತಕವು (ಒರಿಯಂಟ್‍ ಲಾಂಗ್‍ಮನ್ 1985) “ಸಮಗ್ರವಾದ ರೀತಿಯಲ್ಲಿ ಅಧಿಕಾರವನ್ನು ರೂಪಿಸುವುದು” ಅಧ್ಯಾದೇಶಗಳ ಇತಿಹಾಸವನ್ನು ಶೋಧಿಸುತ್ತದೆ. ಹಿಂದಿನ ತೀರ್ಮಾನಗಳಾದಂತಹ ಪಂಜಾಬ್‍ ರಾಜ್ಯ-ವಿರುದ್ಧ-ಸತ್ಯಪಾಲ್, ಎಐಆರ್‍ 1969ಸಿ (903 ಪ್ರಕರಣವನ್ನು ಡಿ.ಸಿ. ವಾದ್ವಾ-ವಿರುದ್ಧ-ಬಿಹಾರ ರಾಜ್ಯ, ಎಐಆರ್ 1987 ಎಸ್‍ಸಿ 579 ಕ್ಕೆ ಸಂಬಂಧಪಟ್ಟಂತೆ ಓದಿಕೊಳ್ಳಬೇಕು.

(ಎ)   ರಾಜ್ಯಪಾಲರು ಸಾಂವಿಧಾನಿಕ ಉಪಬಂಧವನ್ನು ನೇರವಾಗಿ ಉಲ್ಲಂಘಿಸಿದರೆ, ಅಥವಾ

(ಬಿ)   ರಾಜ್ಯಪಾಲರು ಒಂದು ಅಧ್ಯಾದೇಶವನ್ನು ಮಾಡುವುದಕ್ಕೆ ತನ್ನ ಸಾಂವಿಧಾನಿಕ ಅಧಿಕಾರವನ್ನು ಮೀರಿದರೆ,ಅಥವಾ

(ಸಿ)   ರಾಜ್ಯಪಾಲರು ಅಂತಹ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ (ಉದಾ: ಒಂದು ಅಧ್ಯಾದೇಶದ ಕಾಲಾವಧಿಯು ಮುಕ್ತಾಯಗೊಂಡಾಗ ಅದನ್ನು ಬದಲಾಯಿಸುವುದಕ್ಕೆ ವಿಧಾನಮಂಡಲವು ಹೊರಡಿಸಿದ ಒಂದು ಅಧಿನಿಯಮವನ್ನು ರಚಿಸದೇ ಅಧ್ಯಾದೇಶವನ್ನು ಮತ್ತೊಮ್ಮೆ ಪುನರ್ ಉದ್ಘೋಷಿಸುವುದು) ಅಧ‍್ಯಾದೇಶವನ್ನು ಪ್ರಶ್ನಿಸುವುದು. ನ್ಯಾಯಾಲಯವು, ಆ ಅಧ‍್ಯಾದೇಶವನ್ನು ರದ್ದುಗೊಳಿಸಬಹುದು; ಡಿ.ಸಿ. ವಾದ್ವಾ ವಿರುದ್ಧ ಬಿಹಾರ ರಾಜ್ಯ, ಎಐಆರ್, 1987 ಎಸ್‍.ಸಿ 579, ಖಂಡಿಕೆಗಳು 6 ರಿಂದ 8.ರ ವರೆಗೆ.

ಅನುಚ್ಛೇದ -219. ಉಚ್ಚನ್ಯಾಯಾಲಯಗಳ ನ್ಯಾಯಾಧೀಶರಿಂದ ಪ್ರಮಾಣವಚನ ಅಥವಾ ದೃಢೀಕರಣ:

ಉಚ್ಚನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಜ್ಯದ ರಾಜ್ಯಪಾಲನ ಮುಂದೆ ಅಥವಾ ಅವನಿಂದ ಆ ಬಗ್ಗೆ ನೇಮಕಗೊಂಡ ಇತರ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗನುಸಾರವಾಗಿ ಪ್ರಮಾಣವನ್ನು ಅಥವಾ ದೃಢೀಕರಣವನ್ನು ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ಸಹಿ ಹಾಕತಕ್ಕದ್ದು.

ಅನುಚ್ಛೇದ -233. ಜಿಲ್ಲಾನ್ಯಾಯಾಧೀಶರ ನೇಮಕ

(1) ಯಾವುದೇ ರಾಜ್ಯದ ರಾಜ್ಯಪಾಲನು, ಆ ರಾಜ್ಯದಲ್ಲಿ ಜಿಲ್ಲಾ ನ್ಯಾಯಾಧೀಶರ ನೇಮಕ, ಸ್ಥಳ ನಿಯುಕ್ತಿ ಮತ್ತು ಬಡ್ತಿಯನ್ನು ಅಂಥ ರಾಜ್ಯಕ್ಕೆ ಸಂಬಂಧಿಸಿದಂತೆ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುತ್ತಿರುವ ಉಚ್ಚ ನ್ಯಾಯಾಲಯ ದೊಡನೆ ಸಮಾಲೋಚಿಸಿದ ತರುವಾಯ ಮಾಡತಕ್ಕದ್ದು.

(2) ಒಕ್ಕೂಟದ ಅಥವಾ ರಾಜ್ಯದ ಸೇವೆಯಲ್ಲಿ ಈ ಮೊದಲೇ ಇಲ್ಲದಿರುವ ಯಾರೇ ವ್ಯಕ್ತಿಯು ಏಳು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ಕಾಲ ನ್ಯಾಯವಾದಿಯಾಗಿದ್ದು ಅಥವಾ ಪ್ಲೀಡರ್ಆಗಿದ್ದು ಅವನನ್ನು ಜಿಲ್ಲಾ ನ್ಯಾಯಾಧೀಶನಾಗಿ ನೇಮಿಸಲು ಉಚ್ಚ ನ್ಯಾಯಾಲಯವು ಶಿಫಾರಸು ಮಾಡಿದ್ದರೆ ಮಾತ್ರ ಅವನು ಹಾಗೆ ನೇಮಕಗೊಳ್ಳಲು ಅರ್ಹನಾಗಿರತಕ್ಕದ್ದು.

(ಎ) (i) ಯಾವುದೇ ರಾಜ್ಯದ ನ್ಯಾಯಿಕ ಸೇವೆಯಲ್ಲಿ ಈಗಾಗಲೇ ಇರುವ ಯಾರೇ ವ್ಯಕ್ತಿಯನ್ನು ಅಥವಾ ಏಳು ವರ್ಷಗಳಿಗೆ ಕಡಿಮೆಯಿಲ್ಲದಷ್ಟು ಕಾಲ ನ್ಯಾಯವಾದಿಯಾಗಿದ್ದ ಅಥವಾ ಪ್ಲೀಡರನಾಗಿದ್ದ ಯಾರೇ ವ್ಯಕ್ತಿಯನ್ನು 233ನೆಯ ಅಥವಾ 235ನೆಯ ಅನುಚ್ಫೇದದ ಉಪಬಂಧಗಳಿಗನುಸಾರವಾಗಿಯಲ್ಲದೆ ಅನ್ಯಥಾ ಆ ರಾಜ್ಯದಲ್ಲಿ ಜಿಲ್ಲಾ ನ್ಯಾಯಾಧೀಶನನ್ನಾಗಿ ಮಾಡಿದ ಯಾವುದೇ ನೇಮಕವನ್ನು, ಮತ್ತು

(ii)ಸದರಿ ಉಪಬಂಧಗಳಿಗನುಸಾರವಾಗಲ್ಲದೆ ಅನ್ಯಥಾ ಜಿಲ್ಲಾ ನ್ಯಾಯಾಧೀಶನಾಗಿ ನೇಮಕಗೊಂಡ ಅಂಥ ಯಾರೇ ವ್ಯಕ್ತಿಯ ಯಾವುದೇ ಸ್ಥಳನಿಯುಕ್ತಿ, ಬಡ್ತಿ ಅಥವಾ ವರ್ಗಾವಣೆಯನ್ನು

- ಸದರಿ ಉಪಬಂಧಗಳಿಗನುಸಾರವಾಗಿ ಮಾಡಿಲ್ಲವೆಂಬ ಸಂಗತಿಯ ಕಾರಣ ಮಾತ್ರದಿಂದ ಅವು ಕಾನೂನು ಬಾಹಿರವಾಗಿವೆ ಅಥವಾ ಶೂನ್ಯವಾಗಿವೆ ಎಂದು ಅಥವಾ ಎಂದಾದರೂ ಕಾನೂನುಬಾಹಿರವಾಗಿದ್ದುವು ಅಥವಾ ಶೂನ್ಯವಾಗಿದ್ದುವು ಎಂದು ಭಾವಿಸತಕ್ಕದ್ದಲ್ಲ;

(ಬಿ) 1966ನೆಯ ಸಂವಿಧಾನ (ಇಪ್ಪತ್ತನೆಯತಿದ್ದುಪಡಿ) ಅಧಿನಿಯಮದ ಪ್ರಾರಂಭಕ್ಕೆ ಮುಂಚೆ 233ನೆಯ ಅಥವಾ 235ನೆಯ ಅನುಚ್ಫೇದದ ಉಪಬಂಧಗಳಿಗನುಸಾರವಾಗಿಯಲ್ಲದೆ ಅನ್ಯಥಾ ಯಾವುದೇ ರಾಜ್ಯದಲ್ಲಿ ಜಿಲ್ಲಾನ್ಯಾಯಾಧೀಶನಾಗಿ ನೇಮಕಗೊಂಡಿರುವ, ಸ್ಥಳ ನಿಯುಕ್ತಿ ಹೊಂದಿರುವ, ಬಡ್ತಿ ಪಡೆದಿರುವ ಅಥವಾ ವರ್ಗಾವಣೆಯಾಗಿರುವ ಯಾರೇ ವ್ಯಕ್ತಿಯು ಚಲಾಯಿಸಿದ ಯಾವುದೇ ಅಧಿಕಾರ ವ್ಯಾಪ್ತಿ, ಕೊಟ್ಟ ಅಥವಾ ಮಾಡಿದಯಾವುದೇ ತೀರ್ಪು, ಡಿಕ್ರಿ, ಶಿಕ್ಷೆ ಅಥವಾ ಆದೇಶವು ಅಥವಾ ಅವನ ಸಮ್ಮುಖದಲ್ಲಿ ಮಾಡಲಾದ ಅಥವಾ ಕೈಗೊಳ್ಳಲಾದ ಇತರ ಯಾವುದೇ ಕಾರ್ಯ ಅಥವಾ ವ್ಯವಹರಣೆಯು, ಅಂಥ ನೇಮಕ, ಸ್ಥಳ ನಿಯುಕ್ತಿ, ಬಡ್ತಿ ಅಥವಾ ವರ್ಗಾವಣೆಯನ್ನು ಸದರಿ ಉಪಬಂಧಗಳಿಗನುಸಾರಮಾಡಿಲ್ಲವೆಂಬ ಸಂಗತಿಯ ಕಾರಣ ಮಾತ್ರದಿಂದಲೇ ಕಾನೂನು ಬಾಹಿರವಾಗಿವೆ ಅಥವಾ ಅಸಿಂಧುವಾಗಿವೆ ಎಂದು ಅಥವಾ ಎಂದಾದರೂ ಕಾನೂನು ಬಾಹಿರವಾಗಿದ್ದವು ಅಥವಾ ಅಸಿಂಧುವಾಗಿದ್ದವು ಎಂದು ಭಾವಿಸತಕ್ಕದ್ದಲ್ಲ.

  1. ನ್ಯಾಯಿಕ ಸೇವೆಗೆ ಜಿಲ್ಲಾ ನ್ಯಾಯಾಧೀಶರಲ್ಲದ ಇತರ ವ್ಯಕ್ತಿಗಳ ನೇಮಕಾತಿ:

ರಾಜ್ಯದ ನ್ಯಾಯಿಕ ಸೇವೆಗೆ ಜಿಲ್ಲಾ ನ್ಯಾಯಾಧೀಶರಲ್ಲದ ಇತರ ವ್ಯಕ್ತಿಗಳ ನೇಮಕಗಳನ್ನು ಮಾಡುವ ಸಂಬಂಧದಲ್ಲಿ ರಾಜ್ಯಪಾಲನು ರಾಜ್ಯ ಲೋಕಸೇವಾ ಆಯೋಗದೊಡನೆ ಮತ್ತು ಅಂಥ ರಾಜ್ಯಕ್ಕೆ ಸಂಬಂಧಿಸಿದಂತೆ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುತ್ತಿರುವ ಉಚ್ಚ ನ್ಯಾಯಾಲಯದೊಡನೆ ಸಮಾಲೋಚಿಸಿದ ನಂತರ ತಾನು ರಚಿಸಿದ ನಿಯಮಗಳಿಗನುಸಾರವಾಗಿ ಅಂಥ ನೇಮಕಗಳನ್ನು ಮಾಡತಕ್ಕದ್ದು.

ಅನುಚ್ಛೇದ -237. ಕೆಲವು ದರ್ಜೆ ಅಥವಾ ದರ್ಜೆಗಳ ಮ್ಯಾಜಿಸ್ಟ್ರೇಟರುಗಳಿಗೆ ಈ ಅಧ್ಯಾಯದ ಉಪ ಬಂಧಗಳ ಅನ್ವಯ

ಈ ಅಧ್ಯಾಯದಲ್ಲಿ ಹಿಂದೆ ಹೇಳಿದ ಉಪ ಬಂಧಗಳು ಮತ್ತು ಅವುಗಳ ಮೇರೆಗೆ ರಚಿಸಿದ ಯಾವುವೇ ನಿಯಮಗಳು ರಾಜ್ಯದ ನ್ಯಾಯಿಕ ಸೇವೆಗೆ ನೇಮಕ ಗೊಂಡಿರುವ ವ್ಯಕ್ತಿಗಳ ಸಂಬಂಧದಲ್ಲಿ ಅನ್ವಯಿಸುವಂತೆಯೇ, ರಾಜ್ಯಪಾಲನು ಸಾರ್ವಜನಿಕ ಅಧಿಸೂಚನೆಯ ಮೂಲಕ ಆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ವಿನಾಯಿತಿಗಳು ಮತ್ತು ಮಾರ್ಪಾಟುಗಳಿಗೆ ಒಳಪಟ್ಟು, ಅವನು ಈ ಬಗ್ಗೆ ನಿಗದಿಪಡಿಸಬಹುದಾದಂಥ ದಿನಾಂಕದಿಂದ ರಾಜ್ಯದಲ್ಲಿರುವ ಯಾವುದೇ ದರ್ಜೆಯ ಅಥವಾ ಯಾವುವೇ ದರ್ಜೆಗಳ ಮ್ಯಾಜಿಸ್ಟ್ರೇಟರುಗಳಿಗೆ ಸಂಬಂಧಿಸಿದಂತೆಯೂ ಅನ್ವಯಿಸತಕ್ಕದ್ದೆಂದು ನಿರ್ದೇಶಿಸಬಹುದು.

ಅನುಚ್ಛೇದ -243(I). ಪಂಚಾಯಿತಿಗಳ ಹಣಕಾಸು ಪರಿಸ್ಥಿತಿಗಳನ್ನು ಪುನರಾವಲೋಕನ ಮಾಡುವುದಕ್ಕೆ ಹಣಕಾಸು ಆಯೋಗದ ರಚನೆ

ಪರಿಭಾಷೆಗಳು:-ಈಭಾಗದಲ್ಲಿಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು:

(ಎ) “ಜಿಲ್ಲೆ” ಎಂದರೆ,ಒಂದುರಾಜ್ಯದಲ್ಲಿನಜಿಲ್ಲೆ;

(ಬಿ) “ಗ್ರಾಮಸಭೆ” ಎಂದರೆ,ಗ್ರಾಮಮಟ್ಟದಲ್ಲಿ ಪಂಚಾಯತಿ ಪ್ರದೇಶದೊಳಗೆ ಸೇರಿರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಗಳಲ್ಲಿ ನೋಂದಾಯಿತರಾದ ವ್ಯಕ್ತಿಗಳನ್ನು ಒಳಗೊಂಡಿರುವ ಒಂದು ನಿಕಾಯ;

(ಸಿ) “ಮಧ್ಯಂತರ ಮಟ್ಟ” ಎಂದರೆ,ಈ ಭಾಗದ ಉದ್ದೇಶಗಳಿಗಾಗಿ ಮಧ್ಯಂತರ ಮಟ್ಟವೆಂದು ರಾಜ್ಯದ ರಾಜ್ಯಪಾಲನು ಸಾರ್ವಜನಿಕ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಿದ ಗ್ರಾಮ ಮತ್ತು ಜಿಲ್ಲೆಯ ನಡುವಣ ಮಟ್ಟ;

(ಡಿ) “ಪಂಚಾಯತಿ” ಎಂದರೆ,ಗ್ರಾಮೀಣ ಪ್ರದೇಶಗಳಿಗಾಗಿ 243ಬಿ ಅನುಚ್ಫೇದದ ಮೇರೆಗೆ ರಚಿತವಾದ (ಯಾವುದೇ ಹೆಸರಿನಿಂದ ಕರೆಯುವ) ಒಂದು ಸ್ವಯಂ ಆಡಳಿತ ಸಂಸ್ಥೆ;

(ಇ) “ಪಂಚಾಯತಿ ಪ್ರದೇಶ” ಎಂದರೆ,ಪಂಚಾಯತಿಯ ವ್ಯಾಪ್ತಿ ಪ್ರದೇಶ;

(ಎಫ್) “ಜನಸಂಖ್ಯೆ”ಎಂದರೆ,ಯಾವ ಹಿಂದಿನ ಕೊನೆಯ ಸಲದ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಯಲ್ಲಿ ಖಚಿತ ಪಡಿಸಿಕೊಂಡ ಜನಸಂಖ್ಯೆ;

(ಜಿ) “ಗ್ರಾಮ”ಎಂದರೆ,ಈ ಭಾಗದ ಉದ್ದೇಶಗಳಿಗಾಗಿ ರಾಜ್ಯಪಾಲನು ಸಾರ್ವಜನಿಕ ಅಧಿಸೂಚನೆಯ ಮೂಲಕ ಗ್ರಾಮವೆಂದು ನಿರ್ದಿಷ್ಟಪಡಿಸಿದ ಗ್ರಾಮ ಮತ್ತು ಇದು ಹಾಗೆ ನಿರ್ದಿಷ್ಟ ಪಡಿಸಲಾದ ಗ್ರಾಮಗಳ ಸಮೂಹವನ್ನು ಒಳಗೊಳ್ಳುತ್ತದೆ.

ಅನುಚ್ಛೇದ 243(ವೈ). ಹಣಕಾಸು ಆಯೋಗ: (1) 243ಐ ಅನುಚ್ಫೇದದ ಮೇರೆಗೆ ರಚಿತವಾದ ಹಣಕಾಸು ಆಯೋಗವು ಪೌರಸಭೆಗಳ ಹಣಕಾಸು ಸ್ಥಿತಿಗತಿಯನ್ನು ಪರಿಶೀಲಿಸತಕ್ಕದ್ದು; ಮತ್ತು

(ಎ) ಈ ಮುಂದಿನ ವಿಷಯಗಳಿಗೆ ಸಂಬಂಧಿಸಿದಂತೆ, ರಾಜ್ಯಪಾಲರಿಗೆ ಶಿಫಾರಸು ಮಾಡತಕ್ಕದ್ದು:

(i) ಈ ಭಾಗದ ಮೇರೆಗೆ ರಾಜ್ಯದ ಮತ್ತು ಪೌರಸಭೆಗಳ ನಡುವೆ ಭಾಗ ಮಾಡಿಕೊಳ್ಳಬಹುದಾದಂಥ ಮತ್ತು ರಾಜ್ಯವು ವಿಧಿಸಬಹುದಾದ ತೆರಿಗೆಗಳ, ಸುಂಕಗಳ, ದಾರಿಸುಂಕಗಳ ಮತ್ತು ಫೀಜುಗಳ ನಿವ್ವಳ ಉತ್ಪತ್ತಿಯನ್ನು ರಾಜ್ಯದ ಮತ್ತು ಪೌರಸಭೆಗಳ ನಡುವೆ ವಿತರಿಸುವುದಕ್ಕೆ ಮತ್ತು ಎಲ್ಲ ಮಟ್ಟಗಳ ಪೌರಸಭೆಗಳ ನಡುವೆ ಅಂಥ ಉತ್ಪತ್ತಿಯಲ್ಲಿನ ಆಯಾ ಪೌರಸಭೆಗಳ ಪಾಲನ್ನು ಹಂಚುವುದು;

(ii) ಪೌರಸಭೆಗಳಿಗೆ ವಹಿಸಿಕೊಡಬಹುದಾದ ಅಥವಾ ಅವುಗಳು ವಿನಿಯೋಗಿಸಬಹುದಾದ ತೆರಿಗೆಗಳು, ಸುಂಕಗಳು, ದಾರಿಸುಂಕಗಳು ಮತ್ತು ಫೀಜುಗಳನ್ನು ನಿರ್ಧರಿಸುವುದು;

(iii) ರಾಜ್ಯದ ಸಂಚಿತ ನಿಧಿಯಿಂದ ಪೌರಸಭೆಗಳಿಗೆ ನೀಡುವ ಸಹಾಯಾನುದಾನ ನೀಡುವುದು;

(ಬಿ) ಪೌರಸಭೆಗಳ ಹಣಕಾಸು ಸ್ಥಿತಿಗತಿಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳು;

(ಸಿ) ಪೌರಸಭೆಗಳ ಸುಭದ್ರ ಹಣಕಾಸಿನ ದೃಷ್ಟಿಯಿಂದ ರಾಜ್ಯಪಾಲರು ಹಣಕಾಸು ಆಯೋಗಕ್ಕೆ ಕಳುಹಿಸಬಹುದಾದ ಯಾವುದೇ ಇತರ ವಿಷಯ;

ಒಕ್ಕೂಟ ಮತ್ತು ರಾಜ್ಯಗಳ ಅಧೀನದಲ್ಲಿನ ಸೇವೆಗಳು

ಅನುಚ್ಛೇದ 309. ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಕಗೊಳ್ಳುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳು.

ಈ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು, ಸಮುಚಿತ ವಿಧಾನಮಂಡಲದ ಅಧಿನಿಯಮಗಳು ಒಕ್ಕೂಟದ ಅಥವಾ ಯಾವುದೇ ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿನ ಲೋಕಸೇವೆಗಳಿಗೆ ಮತ್ತು ಹುದ್ದೆಗಳ ನೇಮಕಾತಿಯನ್ನು ಮತ್ತು ಅವುಗಳಿಗೆ ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ವಿನಿಯಮಿಸಬಹುದು:

ಪರಂತು, ಒಕ್ಕೂಟದ ವ್ಯವಹಾರಗಳಿಗೆ ಸಂಬಂಧಪಟ್ಟ ಸೇವೆಗಳ ಮತ್ತು ಹುದ್ದೆಗಳ ಸಂದರ್ಭದಲ್ಲಿ ರಾಷ್ಟ್ರಪತಿಯು ಅಥವಾ ಅವನು ನಿರ್ದೇಶಿಸಬಹುದಾದಂಥ ವ್ಯಕ್ತಿಯು ಮತ್ತು ಒಂದು ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟ ಸೇವೆಗಳ ಮತ್ತು ಹುದ್ದೆಗಳ ಸಂದರ್ಭದಲ್ಲಿ ಆ ರಾಜ್ಯದ ರಾಜ್ಯಪಾಲರು ಅಥವಾ ಅವನು ನಿರ್ದೇಶಿಸಬಹುದಾದಂಥ ವ್ಯಕ್ತಿಯು, ಈ ಅನುಚ್ಫೇದದ ಮೇರೆಗೆ, ಆ ಬಗ್ಗೆ ಸಮುಚಿತ ವಿಧಾನಮಂಡಲದ ಅಧಿನಿಯಮದ ಮೂಲಕ ಅಥವಾ ಅದರ ಮೇರೆಗೆ ಉಪಬಂಧಿಸುವವರೆಗೆ, ಅಂಥ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ನೇಮಕಾತಿಯನ್ನು ಮತ್ತು ಹಾಗೆ ನೇಮಕಗೊಂಡ ವ್ಯಕ್ತಿಗಳ ಸೇವಾ ಷರತ್ತುಗಳನ್ನು ವಿನಿಯಮಿಸುವ ನಿಯಮಗಳನ್ನು ರಚಿಸಲು ಸಕ್ಷಮನಾಗಿರತಕ್ಕದ್ದು ಮತ್ತು ಹಾಗೆ ರಚಿಸಿದ ಯಾವುದೇ ನಿಯಮಗಳು ಅಂಥ ಯಾವುದೇ ಅಧಿನಿಯಮದ ಉಪಬಂಧಗಳಿಗೊಳಪಟ್ಟು ಪರಿಣಾಮಕಾರಿಯಾಗಿರತಕ್ಕದ್ದು.

 

ಆಡಳಿತಾತ್ಮಕ ಸೂಚನೆಗಳು

ಶಾಸನೇತರ ನಿಯಮಗಳು ಶಾಸನಬದ್ಧ ನಿಯಮಗಳನ್ನು ಮಾರ್ಪಾಟು ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ಯಾವ ವಿಷಯಗಳ ಮೇಲೆ ಶಾಸನಬದ್ಧ ನಿಯಮಗಳು ಮೌನವಾಗಿವೆಯೋ ಅಂಥ ವಿಷಯಗಳ ಕುರಿತು ಆಡಳಿತಾತ್ಮಕ ಸೂಚನೆಗಳನ್ನು ನೀಡುವುದರಿಂದ ಯಾವುದೂ ಸರ್ಕಾರವನ್ನು ತಡೆಯುವಂತಿಲ್ಲ; ಲೆಕ್ಕನಿಯಂತ್ರಕರು ವಿರುದ್ಧ-ಮೋಹನ್, (1992) Iಎಸ್‍ಸಿ 20.

ಪ್ರತಿಕೂಲ ಷರಾ

ಆಯ್ಕೆ ಶ್ರೇಣಿ ಇತ್ಯಾದಿಗಳಿಗೆ ಆಯ್ಕೆ ಮಾಡುವುದಕ್ಕಾಗಿ ಒಬ್ಬ ನೌಕರನ ಪ್ರಕರಣವನ್ನು ಪರಿಗಣಿಸುವಾಗ, ಇತ್ಯರ್ಥದಲ್ಲಿರುವ ನಿವೇದನೆಯ ವಿರುದ್ಧದ ಪ್ರತಿಕೂಲ ಷರಾಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತಿಲ್ಲ; ಮಧ್ಯಪ್ರದೇಶ ರಾಜ್ಯ-ವಿರುದ್ಧ-ಬಾನಿ (1990), ಪೂರಕ ಎಸ್‍ಸಿಸಿ 736, ಕಂಡಿಕೆ 6.

ಪ್ರತಿಕೂಲ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ನಿವೇದನೆಯನ್ನು ತಿರಸ್ಕರಿಸಲು ಕಾರಣವಾಗಬಹುದಾದ ಕಾರಣಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲು ಸಕ್ಷಮ ಪ್ರಾಧಿಕಾರಕ್ಕೆ ಯಾವಾಗಲೂ ಮುಕ್ತ ಅವಕಾಶವಿರುತ್ತದೆ. ಭಾರತ ಒಕ್ಕೂಟ-ವಿರುದ್ಧ-ಇ.ಜಿ. ನಂಬೂದರಿ, ಎಐಆರ್ 1991 ಎಸ್‍ಸಿ 1216.

ಪ್ರತಿಕೂಲ ನಮೂದಿನ ಒಂದು ಪ್ರತಿಯನ್ನು ಯುಕ್ತ ಕಾಲದೊಳಗೆ ನೌಕರನಿಗೆ ಪೂರೈಸಬೇಕು. ಸಂವಹನ ನಡೆಸುವ ಈ ಭಾದ್ಯತೆಯನ್ನು ನೌಕರನಿಗೆ ಪ್ರತಿಕೂಲವಾಗಿರದ ನಮೂದಿನಲ್ಲಿರುವ ಯಾವುದೇ ಅಭಿಪ್ರಾಯಕ್ಕೆ ವಿಸ್ತರಿಸುವಂತಿಲ್ಲ; ಬೈಕುಂಠ-ವಿರುದ್ಧ-ಸಿ. ಡಿಎಮ್ಓ, (1992) 2 ಎಸ್‍ಸಿಸಿ 299, ಕಂಡಿಕೆ 33 (3 ನ್ಯಾಯಾಧೀಶರು).

ನೌಕರನ ಮುಂಬಡ್ತಿ, ಸ್ಥೀರಿಕರಣ, ದಕ್ಷತಾ ತಡೆಯನ್ನು ದಾಟುವುದು, ಸೇವೆಯ ಮುಕ್ತಾಯ ಇತ್ಯಾದಿ ಪ್ರಶ್ನೆಗಳು ಉದ್ಭವಿಸಿದಾಗ, ಗೌಪ್ಯ ವರದಿಯಲ್ಲಿರುವ ಷರಾಗಳನ್ನು ತುಲನಾತ್ಮಕ ಅರ್ಹತೆಯ ದತ್ತಾಂಶವನ್ನಾಗಿ ಬಳಸಲಾಗುತ್ತದೆ; ಭಾರತ ಒಕ್ಕೂಟ-ವಿರುದ್ಧ-ನಂಬೂದರಿ (1991)3 ಎಸ್‍ಸಿಸಿ 38, ಕಂಡಿಕೆ 6.

ಆಡಳಿತಾತ್ಮಕ ನ್ಯಾಯಾಧಿಕರಣಗಳ ಅಧಿನಿಯಮದ 19ನೇ ಪ್ರಕರಣದಡಿಯಲ್ಲಿನ ಅರ್ಜಿಯನ್ನು ಪ್ರತಿಕೂಲ ಷರಾಗಳನ್ನು ತೆಗೆದುಹಾಕುವುದಕ್ಕಾಗಿ ಸಲ್ಲಿಸಲಾಗಿದೆ; ಮಧ್ಯಪ್ರದೇಶ ರಾಜ್ಯ-ವಿರುದ್ಧ-ಬಾನಿ (1990) ಎಸ್‍ಸಿಸಿ 738, ಕಂಡಿಕೆ 5.

ನೇಮಕಾತಿ

ಒಬ್ಬ ವ್ಯಕ್ತಿಯು, ಒಂದು ಜಾಹೀರಾತನ್ನು ಅನುಸರಿಸಿ ಒಂದು ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ಆ ಹುದ್ದೆಗೆ ನೇಮಕಗೊಳ್ಳಬೇಕಾದ ಯಾವುದೇ ನಿಹಿತವಾದ ಹಕ್ಕನ್ನು ಹೊಂದಿರುವುದಿಲ್ಲವಾದರೂ, ಆತನು ಆ ಜಾಹೀರಾತಿನ ನಿಬಂಧನೆಗಳಿಗನುಗುಣವಾಗಿ ಆಯ್ಕೆಗಾಗಿ ಆತನನ್ನು ಪರಿಗಣಿಸಬೇಕಾದ ಹಕ್ಕನ್ನು ಹೊಂದಿರುತ್ತಾನೆ. ಒಂದು ಹುದ್ದೆಯ ಆಯ್ಕೆಗಾಗಿ ಒಬ್ಬ ಅಭ್ಯರ್ಥಿಯ ಅರ್ಹತೆಯು ಅವರು ನೇಮಕಾತಿಗಾಗಿ ಜಾಹೀರಾತನ್ನು ನೀಡಿರುವ ದಿನಾಂಕದಲ್ಲಿರುವಂತೆ ಸಂಬಂಧಪಟ್ಟ ನಿಯಮಗಳಿಗನುಗುಣವಾಗಿ ಆತನು ಅರ್ಹತೆ ಹೊಂದಿದ್ದಾನೆಯೇ ಎಂಬುದರ ಮೇಲೆ ಅವಲಂಬಿಸಿರುತ್ತದೆ; ಎನ್‍.7: ಬೆವಿನ್‍ ಕಲ್ತಿ-ವಿರುದ್ಧ- ಕರ್ನಾಟಕ ಲೋಕಸೇವಾ ಆಯೋಗ, (1990) 3 ಎಸ್‍ಸಿಸಿ 157.

ಸಶಸ್ತ್ರ ಪಡೆಗಳು

ಸಶಸ್ತ್ರ ಪಡೆಗಳಿಂದ ನಿವೃತ್ತರಾದವರಿಗೆ ಸಂಬಂಧಿಸಿದಂತೆ, ಸರ್ವೋಚ್ಚ ನ್ಯಾಯಾಲಯವು, “ಒಂದೇ ದರ್ಜೆ ಒಂದು ಪಿಂಚಣಿ”ಗಾಗಿನ ಸಶಸ್ತ್ರ ಪಡೆಗಳ ಬೇಡಿಕೆಯನ್ನು ಪುರಸ್ಕರಿಸಿರುವುದಿಲ್ಲ; ಭಾರತೀಯ ಮಾಜಿ ಸೈನಿಕರ ಸಂಘ-ವಿರುದ್ಧ-ಭಾರತ ಒಕ್ಕೂಟ ಎಐಆರ್‍ 1991 ಎಸ್‍ಸಿ 1182, ಕಂಡಿಕೆಗಳು 8, 10 ಮತ್ತು 18.

ರಾಜ್ಯ ಸರ್ಕಾರವು, ತುರ್ತುಪರಿಸ್ಥಿತಿಯಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇರಿಕೊಂಡಿರುವ ವ್ಯಕ್ತಿಗಳಿಗೆ, ತುರ್ತು ಪರಿಸ್ಥಿತಿಗಳ ಮುಂಚೆ ಸೇರಿಕೊಂಡಿರುವಂಥವರಿಗೆ ನೀಡುವುದಕ್ಕಿಂತಲೂ ಭಿನ್ನವಾದ ಪಿಂಚಣಿ, ವೇತನ ಹೆಚ್ಚಳ ಮುಂತಾದ ವಿಶೇಷ ಪ್ರಯೋಜನಗಳನ್ನು ಘೋಷಿಸುವುದು ನ್ಯಾಯಸಮ್ಮತವಾಗಿದೆ. ಹಿರಿಯ ವ್ಯಕ್ತಿಗಳು ಮಿಲಿಟರಿ ಸೇವೆಗೆ ಸೇರುವ ಮೂಲಕ ಇತರ ಸರ್ಕಾರಿ ಇಲಾಖೆಗಳಿಗೆ ಸೇರುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಈ ತಾರತಮ್ಯವು ಸಮಂಜಸವಾಗಿದೆ; ಧಾನ್ ಸಿಂಗ್-ವಿರುದ್ಧ-ಹರಿಯಾಣ ರಾಜ್ಯ, ಎಐಆರ್‍ 1991 ಎಸ್‍ಸಿ 1047.

ಕಡ್ಡಾಯ ನಿವೃತ್ತಿ

ಕಡ್ಡಾಯ ನಿವೃತ್ತಿಯು ಯಾವುದೇ ಕಳಂಕವನ್ನು ಒಳಗೊಂಡಿರುವುದಿಲ್ಲ ಹಾಗೂ ಇದು, ಪ್ರಾಧಿಕಾರದ ಮನವರಿಕೆಯನ್ನು ಆಧರಿಸುತ್ತದೆ. ಆದಾಗ್ಯೂ, ಪ್ರತಿಕೂಲ ನಮೂದನ್ನು ಅರ್ಜಿದಾರನಿಗೆ ತಿಳಿಸಿರುವುದಿಲ್ಲ ಅಥವಾ ಸ್ವಭಾವಸಿದ್ಧ ನ್ಯಾಯದ ನಿಯಮಗಳು ಅಥವಾ ಸಂವಿಧಾನದ 21ನೇ ಅನುಚ್ಛೇದದ ಅಗತ್ಯತೆಗಳನ್ನು ಪಾಲಿಸುವುದಿಲ್ಲ ಎಂಬುದರ ಆಧಾರದ ಮೇಲೆ 226ನೇ ಅನುಚ್ಛೇದದ ಅಡಿಯಲ್ಲಿ ಕಡ್ಡಾಯ ನಿವೃತ್ತಿಯ ಆದೇಶವನ್ನು ರದ್ದುಗೊಳಿಸುವಂತಿಲ್ಲ; ಭಾರತ ಒಕ್ಕೂಟ-ವಿರುದ‍್ಧ-ರೆಡ್ಡಿ, ಎಐಆರ್‍ 1990 ಎಸ್‍ಸಿ 563, ಕಂಡಿಕೆ 27; ಸಿಕ್ಕಿಂ ರಾಜ್ಯ-ವಿರುದ‍್ಧ-ಸೋನಮ್‍, (1991) ಪೂರಕ I ಎಸ್‍ಸಿಸಿ 179, ಕಂಡಿಕೆಗಳು 4 ಮತ್ತು 5.

ಕ್ರಿಮಿನಲ್ ವ್ಯವಹರಣೆಗಳು

20(2)ನೇ ಅನುಚ್ಛೇದವು ನ್ಯಾಯಿಕ ವ್ಯವಹರಣೆಗಳಲ್ಲಿ ಶಿಕ್ಷೆ ನೀಡಲು ಮಾತ್ರ ಅನ್ವಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವುದರಿಂದ, ಒಬ್ಬ ಸರ್ಕಾರಿ ನೌಕರನ ವಿರುದ್ಧ ಮಾಡಲಾದ ಇಲಾಖಾ ವ್ಯವಹರಣೆಯ ನಂತರ ಅಥವಾ ವಿಪರ್ಯಯವಾಗಿ ಒಂದು ಕ್ರಿಮಿನಲ್ ವ್ಯವಹರಣೆಯಲ್ಲಿ ಪ್ರಾಸಿಕ್ಯೂಷನ್ ಅಥವಾ ಅಪರಾಧ ನಿರ್ಣಯ ಮಾಡುವಾಗ, ಅನುಚ್ಛೇದ 20(2)ನ್ನು ಅನ್ವಯಿಸುವ ಪ್ರಶ್ನೆಯೇ ಇಲ್ಲ. ಅಪರಾಧಗಳು ಯಾವುದಾದರೂ ಇದ್ದರೆ, ಅಂಥ ಅಪರಾಧಗಳಿಗೆ ಸಂಬಂಧಿಸಿದಂತೆ ದುರ್ವಿನಿಯೋಗ ಮಾಡಿಕೊಂಡ ಹಣದ ವಸೂಲಿ ಅಥವಾ ಇಲಾಖಾ ವ್ಯವಹರಣೆಯಿಂದ ಸರ್ಕಾರಕ್ಕೆ ಬರಬೇಕಾದ ಇತರ ವಸೂಲಾತಿಯು ಕ್ರಿಮಿನಲ್ ಪ್ರಾಸಿಕ್ಯೂಷನ್ ಅನ್ನು ಪ್ರತಿಷೇಧಿಸುವಂತಿಲ್ಲ; ಬಿಶ್ವನಾಥ್-ವಿರುದ್ಧ-ಭಾರತ ಒಕ್ಕೂಟ, (1991) 16 ಎಟಿಸಿ 912 (ಸಿಎಎಲ್), ಕಂಡಿಕೆಗಳು 14-16 (ಎಫ್‍ಬಿ).

ತಾರತಮ್ಯತೆ

ಒಂದೇ ಸೇವಾ ವರ್ಗದ ನೌಕರರ ನಡುವೆಯೂ ಸಹ, ಯುಕ್ತವಾದ ಸಂಬಂಧಪಟ್ಟ ಉನ್ನತ ಅರ್ಹತೆಯನ್ನು ಹೊಂದಿದವರಿಗೆ ಮಾತ್ರ ಮಾನ್ಯತೆ ನೀಡಲು ಅನುಮತಿಸಬಹುದಾಗಿದೆ. ಉದಾಹರಣೆಗೆ; ಸರ್ಕಾರಿ ಸೇವೆಗೆ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಕರ್ಷಿಸುವ ಸಲುವಾಗಿ, ಹೆಚ್ಚು ಅರ್ಹತೆ ಪಡೆದವರಿಗೆ ಮುಂಬಡ್ತಿಯನ್ನು ನೀಡುವುದು; ಬಿಸ್ವಾಸ್‍-ವಿರುದ್ಧ-ಭಾರತೀಯ ಸ್ಟೇಟ್‍ ಬ್ಯಾಂಕ್ (1991) 2 ಯುಜೆಎಸ್‍ಸಿ 567, ಕಂಡಿಕೆ 4. ಈ ನಿಯಮವು ಎಲ್ಲಾ ವರ್ಗದ ಸರ್ಕಾರಿ ನೌಕರರಿಗೆ ಅನ್ವಯವಾಗುವುದಾದರೆ, ಅದನ್ನು ತಾರತಮ್ಯ ಎಂದು ಪ್ರಶ್ನಿಸುವಂತಿಲ್ಲ. ಆದರೆ, ಇದು ದುರ್ಭಾವನೆ ಅಥವಾ ಸ್ವೇಚ್ಛೆ ಅಥವಾ ವಿಕೃತತೆಯನ್ನು ಹೊಂದಿದ್ದರೆ, ಆದೇಶವನ್ನು ರದ್ದುಗೊಳಿಸಬಹುದು; ಬೈಕುಂಠ-ವಿರುದ್ಧ-ಸಿ.ಡಿ.ಎಂ.ಓ., (1992) 2 ಎಸ್‍ಸಿಸಿ 299, ಕಂಡಿಕೆಗಳು 32 ಮತ್ತು 34 (3 ನ್ಯಾಯಾಧೀಶರು).

ಶೋಷಣೆ

ಸರ್ಕಾರವು ತನ್ನ ನೌಕರರನ್ನು ಶೋಷಣೆ ಮಾಡಬಾರದು ಅಥವಾ ಉದ್ಯೋಗಿಗಳ ಅಥವಾ ನಿರುದ್ಯೋಗಿಗಳ ಅಸಹಾಯಕತೆಯ ಲಾಭವನ್ನು ಪಡೆಯಬಾರದು. ಸರ್ಕಾರವು ಮಾದರಿ ಉದ್ಯೋಗದಾತನಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು. ಇದು ಒಬ್ಬ ವ್ಯಕ್ತಿಯನ್ನು ದೀರ್ಘಕಾಲದವರೆಗೆ ತಾತ್ಕಾಲಿಕಅಥವಾ ತಾತ್ಪೂರ್ತಿಕ ಉದ್ಯೋಗದ ಸ್ಥಿತಿಯಲ್ಲಿ ಇಟ್ಟುಕೊ‍ಳ್ಳದೆ, ಅವರ ಉದ್ಯೋಗದ ಸ್ಥಿತಿಯನ್ನು ನಿಯತಗೊಳಿಸುವುದಕ್ಕಾಗಿ ಕ್ರಮ ಕೈಗೊಳ್ಳಬೇಕು; ಹರಿಯಾಣ ರಾಜ್ಯ-ವಿರುದ್ಧ- ಪಿಯಾರ, (1992) 4 ಎಸ್‍ಸಿಸಿ 18.

ಒಬ್ಬ ನೌಕರನು ಯಾವ ಹುದ್ದೆಯಲ್ಲಿ ತಾನು ಎಂದೂ ಕಾರ್ಯನಿರ್ವಹಿಸಿಲ್ಲವೋ ಅಂಥ ಹುದ್ದೆಗೆ ಆತನಿಗೆ ಹೆಚ್ಚಿನ ಉಪಲಬ್ಧಿಗಳನ್ನು ನೀಡುವ ಉದ್ದೇಶಕ್ಕಾಗಿ ವೇತನ ಸಮಾನತೆಯ ನಿಯಮವನ್ನು ಹಾಗೆ ಅನ್ವಯಿಸುವಂತಿಲ್ಲ; ವಿರೇಂದರ್-ವಿರುದ್ಧ-ಅವಿನಾಶ್, ಎಐಆರ್ 1991 ಎಸ್‍ಸಿ 958.

ಸಾಮಾನ್ಯವಾಗಿ, ಅದೇ ವೃಂದದಲ್ಲಿರುವ ಒಬ್ಬ ಕಿರಿಯ ನೌಕರನಿಗೆ ಹೆಚ್ಚಿನ ವೇತನ ನೀಡುವುದು “ಸಮಾನ ಕೆಲಸಕ್ಕೆ ಸಮಾನ ವೇತನ” ಎಂಬ ನಿಯಮದ ಉಲ್ಲಂಘನೆಯಾಗಿದೆ. ಆದರೆ, ಇದಕ್ಕೆ ಸಮರ್ಥನೀಯ ಆಧಾರಗಳು ಅಥವಾ ಅರ್ಥಗರ್ಭಿತ ವ್ಯತ್ಯಾಸದ ಮೇಲೆ ಆಧರಿತವಾದ ವಿನಾಯಿತಿಗಳಿವೆ. ಉದಾಹರಣೆಗೆ,“ ಒಬ್ಬ ಕಿರಿಯ ನೌಕರನಿಗೆ ಹೆಚ್ಚಿನ ವೇತನವನ್ನು ನೀಡಿದ್ದಲ್ಲಿ, ಅದು ಆತನಿಗೆ ಸಂಬಂಧಿಸಿದ್ದು, ಆತನು ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸಿರುವುದರಿಂದ, ಆತನಿಗೆ ಹೆಚ್ಚಿನ ವೇತನವನ್ನು ನೀಡಲಾಗಿದೆ ಎಂದು ಹೇಳಬಹುದು; ಮುಖ್ಯ ಇಂಜಿನಿಯರ್-ವಿರುದ್ಧ-ಜಗದೀಶ, ಎಐಆರ್‍ 1991 ಎಸ್‍ಸಿ 200 ಕಂಡಿಕೆ 5.

ಪರೀಕ್ಷೆ

ಪರೀಕ್ಷಾ ನಿಕಾಯದ ರಚನೆಯಲ್ಲಿ ಅಥವಾ ಅದು ಅಳವಡಿಸಿಕೊಂಡಿರುವ ಕಾರ್ಯವಿಧಾನದಲ್ಲಿ ಪಕ್ಷಪಾತ ಅಥವಾ ದುರ್ಭಾವನೆಗಳು ಅಥವಾ ಮುಖ್ಯ ಕ್ರಮದೋಷಗಳಿಲ್ಲದಿದ್ದರೆ, ಪರೀಕ್ಷಾ ನಿಕಾಯವು ನಿರ್ಧರಿಸಿದಂತೆ ಅಭ್ಯರ್ಥಿಗಳ ತುಲನಾತ್ಮಕ ಗುಣಾವಗುಣಗಳಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವುದಿಲ್ಲ. ಏಕೆಂದರೆ ಇವು, ನ್ಯಾಯಾಲಯಗಳು ಯಾವ ಪರಿಣತಿಯನ್ನು ಹೊಂದಿಲ್ಲವೋ ಅಂಥ ಪರಿಣಿತಿಯ ಅಗತ್ಯತೆ ಇರುವ ವಿಷಯಗಳಾಗಿವೆ; ದಳಪತ್-ವಿರುದ್ಧ-ಮಹಾಜನ್, (1990) I ಎಸ್‍ಸಿಸಿ 305, ಕಂಡಿಕೆ 12 (3 ನ್ಯಾಯಾಧೀಶರು), ಜಸ್ವಂತ್‍-ವಿರುದ್ಧ-ಪಂಜಾಬ್ ರಾಜ್ಯ (1990) ಪೂರಕ. 1 ಎಸ್‍ಸಿಸಿ 313, ಕಂಡಿಕೆ 6.

ಉಪದಾನ

ಸರ್ಕಾರವು ಯಾವುದೇ ಆಧಾರದ ಮೇಲೆ ಉಪದಾನವನ್ನು ಮುಟ್ಟುಗೋಲು ಹಾಕಲು ಯಾವುದೇ ವಿವೇಚನೆಯನ್ನು ಹೊಂದಿರುವುದಿಲ್ಲ; ಜೇಸುರತ್ನನ್‍-ವಿರುದ್ಧ-ಭಾರತ ಒಕ್ಕೂಟ, (1990) ಪೂರಕ. ಎಸ್‍ಸಿಸಿ 640, ಕಂಡಿಕೆ 2.

ಉಚ್ಚನ್ಯಾಯಾಲಯ

ಅಧೀನ ನ್ಯಾಯಾಲಯಗಳಲ್ಲಿ ಲಿಪಿಕ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ, ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯು ವಿಷಯದ ಕುರಿತು ಸಾಂವಿಧಾನಿಕ ಮತ್ತು ಶಾಸನಬದ್ಧ ಉಪಬಂಧಗಳಿಂದ ಹೊರಗುಳಿಯುವಂತಿಲ್ಲ. ಒಂದು ವೇಳೆ ಮುಖ್ಯ ನ್ಯಾಯಮೂರ್ತಿಯು, ಅಧೀನ ನ್ಯಾಯಾಲಯಗಳ ಸ್ಥಾಪನೆಗಳಿಗಾಗಿ ಆಯ್ಕೆಗಳನ್ನು ಮಾಡಲು ಹಾಗೂ ನೇಮಕಾತಿಗಳನ್ನು ಮಾಡಲು ಮೇಲೆ ತಿಳಿಸಿರುವ ಎರಡೂ ಪ್ರಾಧಿಕಾರಗಳ ಅಧಿಕಾರವನ್ನು ತಾವೇ ಸ್ವಯಂ ಕೈಗೆತ್ತಿಕೊಂಡರೆ, ಅಂಥ ನೇಮಕಾತಿಗಳು ರದ್ದಾಗತಕ್ಕದ್ದು; ಪುಟ್ಟಸ್ವಾಮಿ-ವಿರುದ್ಧ-ಮುಖ್ಯ ನ್ಯಾಯಮೂರ್ತಿ, ಎಐಆರ್‍ 1991 ಎಸ್‍ಸಿ 295.

ಅರ್ಥ ವಿವರಣೆ

ಕೆಲವು ಮಿತಿಗಳಿಗೆ ಒಳಪಟ್ಟು, ಸರ್ಕಾರದ ನಿಯಮಗಳು ಮತ್ತು ಅದರಡಿಯಲ್ಲಿ ಮಾಡಿದ ಕಾರ್ಯನೀತಿ ನಿರ್ಧಾರಗಳ ಬಗ್ಗೆ ಸರ್ಕಾರವು ನೀಡಿರುವ ಅರ್ಥವಿವರಣೆಯನ್ನು ನ್ಯಾಯಾಲಯಗಳು ಗೌರವಿಸಬೇಕು; ಅಜಿತ್‍ ಸಿಂಗ್ ಸಿಂಗ್ವಿ-ವಿರುದ್ಧ-ರಾಜಸ್ಥಾನ ರಾಜ್ಯ, (1991) ಪೂರಕ.I ಎಸ್‍ಸಿಸಿ 343 ಕಂಡಿಕೆ 12.

ಸಂದರ್ಶನ

ಕೇವಲ ಲಿಖಿತ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಆಯ್ಕೆಪಟ್ಟಿಯನ್ನು ಸಿದ್ಧಪಡಿಸುವುದರಲ್ಲಿ ಹಾಗೂ ತದನಂತರ ಲಭ್ಯವಿರುವ ಆ ಪಟ್ಟಿಯಿಂದ ಆಯ್ಕೆಯಾದ ಅಭ್ಯರ್ಥಿಗಳನ್ನು ಖಾಲಿ ಹುದ್ದೆಗಳ ಸಂಖ್ಯೆಯನ್ನು ಆಧರಿಸಿ, ಸಂದರ್ಶನಕ್ಕಾಗಿ ಕರೆಯುವುದರಲ್ಲಿ ಯಾವುದೇ ಸಂದಿಗ್ಧತೆ ಇರುವುದಿಲ್ಲ; ಬಿಸ್ವಾಸ್‍-ವಿರುದ್ಧ-ಭಾರತೀಯ ಸ್ಟೇಟ್ ಬ್ಯಾಂಕ್, (1991) 2 ಯುಜೆಎಸ್‍ಸಿ 567, ಕಂಡಿಕೆ 4.

ಲಿಖಿತ ಮತ್ತು ಮೌಖಿಕ ಪರೀಕ್ಷೆಗಳೆರಡನ್ನೂ ಅಳವಡಿಸಿಕೊಳ‍್ಳಬೇಕು ಎಂಬುದನ್ನು ನೇಮಕಾತಿಗೆ ಸಂಬಂಧಿಸಿದ ನಿಯಮಗಳು ಅಗತ್ಯಪಡಿಸದಿದ್ದಲ್ಲಿ, ಸಂದರ್ಶನದ ಮೂಲಕ ಮಾತ್ರ ಮಾಡಲಾದ ಆಯ್ಕೆ ಪ್ರಕ್ರಿಯೆಯನ್ನು ಕಾನೂನುಬಾಹಿರವೆಂದು ಭಾವಿಸುವಂತಿಲ್ಲ. ಸಂದರ್ಶನದ ಅವಧಿಗೆ ಸಂಬಂಧಿಸಿದಂತೆ ಯಾವುದೇ ಬದಲಾಯಿಸಲಾಗದ ಮಾನದಂಡ ಇರುವುದಿಲ್ಲ. ಒಂದು ಹುದ್ದೆಯ ಅಂದರೆ, ಒಂದು ಉನ್ನತ ಪ್ರವರ್ಗದ ಹುದ್ದೆಯ ಆಯ್ಕೆಯ ಸಂದರ್ಭವನ್ನು ಹೊರತುಪಡಿಸಿ, ಒಬ್ಬ ಅಭ್ಯರ್ಥಿಯ ಸಂದರ್ಶನವು ತುಂಬಾ ಸಂಕ್ಷಿಪ್ತವಾಗಿತ್ತು ಎಂದು ದೂರುವಂತಿಲ್ಲ; ಸರ್‍ದಾರ್‍ ಸಿಂಗ್‍-ವಿರುದ‍್ಧ-ಪಂಜಾಬ್‍ ರಾಜ್ಯ ಎಐಆರ್‍ 1991 ಎಸ್‍ಸಿ 2248, ಕಂಡಿಕೆಗಳು 6 ಮತ್ತು 7.

ನಿಯಮಗಳು 118 ಸಂದರ್ಶನ ಪರೀಕ್ಷೆಗಳಿಗಾಗಿ ಯಾವುದೇ ತೇರ್ಗಡೆಯ ಅಂಕಗಳನ್ನು ನಿಗದಿಪಡಿಸದಿದ್ದಾಗ ಪರೀಕ್ಷಾ ನಿಕಾಯವು ಲಿಖಿತ ಪರೀಕ್ಷೆಗಳಿಗೆ ಇದ್ದಂತೆಯೇ ಸಂದರ್ಶನಕ್ಕೂ ಕೂಡ ಶೇ 40 ರಷ್ಟು ತೇರ್ಗಡೆಯ ಅಂಕಗಳನ್ನು ನಿಗದಿಪಡಿಸಿದ್ದಲ್ಲಿ, ಆಗ ನ್ಯಾಯಾಲಯವು ಮಧ‍್ಯಪ್ರವೇಶಿಸುವಂತಿಲ್ಲ; ಮಂಜೀತ್-ವಿರುದ್ಧ- ಇ.ಎಸ್‍.ಐ.ಸಿ., ಎಐಆರ್‍ 1990 ಎಸ್‍ಸಿ 1104, ಕಂಡಿಕೆ 6 (3 ನ್ಯಾಯಾಧೀಶರ ಪೀಠ).

ಧಾರಣಾಧಿಕಾರ

ಒಬ್ಬ ಸರ್ಕಾರಿ ನೌಕರನ ಧಾರಣಾಧಿಕಾರವನ್ನು ನಿಯಮಗಳ ಅಡಿಯಲ್ಲಿ ತಡೆಹಿಡಿದಾಗ, ಉದಾಹರಣೆಗೆ., ಆತನು ಒಂದು ಪ್ರತಿನಿಯೋಜನೆ ಹುದ್ದೆಗೆ ನೇಮಕಗೊಂಡಾಗ, ಆತನು ಅಂಥ ಧಾರಣಾಧಿಕಾರದ ಅಮಾನತ್ತಿನ ಅವಧಿಯಲ್ಲಿ ಮುಂಬಡ್ತಿಗಾಗಿ ಪರಿಗಣಿಸುವ ಎಲ್ಲಾ ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ತನ್ನ ಸ್ವಯಂ ಆಯ್ಕೆಯ ಮೇಲಾಗಲಿ ಅಥವಾ ಪ್ರತಿನಿಯೋಜನೆಯಿಂದ ಬಿಡುಗಡೆಗೊಂಡ ನಂತರವಾಗಲಿ ಮೂಲ ವೃಂದಕ್ಕೆ ಆತನು ಹಿಂತಿರುಗಿ ಬಂದಾಗ ಮಾತ್ರ ಮೂಲ ವೃಂದದಲ್ಲಿನ ಆತನ ಧಾರಣಾಧಿಕಾರವನ್ನು ಪುನಃ ಪ್ರಾರಂಭಿಸಲಾಗುತ್ತದೆ; ರಾಮ್‍ ಸರನ್‍-ವಿರುದ್ಧ-ಪಂಜಾಬ್ ರಾಜ್ಯ, (1991) 2 ಎಸ್‍ಸಿಸಿ 253, ಕಂಡಿಕೆಗಳು 14, 19-21.

ಉದ್ಯೋಗಿಯು ಆ ಹುದ್ದೆಯಲ್ಲಿ ಸ್ಥಿರಗೊಂಡು ಖಾಯಂಗೊಳಿಸಿದಾಗ ಮಾತ್ರವೇ ಆ ಹುದ್ದೆಯ ಮೇಲಿನ ಧಾರಣಾಧಿಕಾರವನ್ನು ಆತನು ಗಳಿಸಿಕೊಳ್ಳುತ್ತಾನೆಯೇ ಹೊರತು, ಅದಕ್ಕಿಂತ ಮುಂಚಿತವಾಗಿ ಗಳಿಸಿಕೊಳ್ಳಲಾಗುವುದಿಲ್ಲ; ತ್ರಿವೇಣಿ-ವಿರುದ್ಧ-ಉತ್ತರ ಪ್ರದೇಶ ರಾಜ್ಯ, ಎಐಆರ್‍ 1992 ಎಸ್‍ಸಿ 496, ಕಂಡಿಕೆಗಳು 21.22.

ಪರಮಾದೇಶ (ಮ್ಯಾಂಡಮಸ್‍)

ಪರಮಾದೇಶವು ಯಾವುದೇ ತರ್ಕಬದ್ಧ ಸಮರ್ಥನೆಯಿಲ್ಲದಂತೆ, ಅದೇ ವೃಂದದ ನೌಕರನಿಗೆ ನೀಡುವಂತೆ ಅದೇ ವೇತನ ಶ್ರೇಣಿಯನ್ನು ಅರ್ಜಿದಾರನಿಗೆ ನೀಡುವಂತೆ ಆದೇಶಿಸುತ್ತದೆ; ಪಶ್ಚಿಮ ಬಂಗಾಳ ರಾಜ್ಯ-ವಿರುದ್ಧ- ದೇಬದಾಸ್‍, (1991)-I ಎಸ್‍ಸಿಸಿ 138, ಕಂಡಿಕೆ 15; ರಾಜಸ್ಥಾನ ರಾಜ್ಯ-ವಿರುದ್ಧ-ಗುರ್‍ಚರನ್, (1990) ಪೂರಕ. ಎಸ್‍ಸಿಸಿ 778, ಕಂಡಿಕೆಗಳು 10-11.

ಸರ್ಕಾರಕ್ಕೆ ಆದೇಶ

ಆಂಧ‍್ರಪ್ರದೇಶಉಚ್ಚ ನ್ಯಾಯಾಲಯದ ತೀರ್ಪಿನಿಂದ ಉದ್ಭವಿಸಿದ ಮೇಲ್ಮನವಿಯಲ್ಲಿ, ಉಚ್ಚ ನ್ಯಾಯಾಲಯ ಅಥವಾ ಆಡಳಿತಾತ್ಮಕ ನ್ಯಾಯಾಧಿಕರಣವು, ಸಂವಿಧಾನದ 309ನೇ ಅನುಚ್ಛೇದದ ಅಡಿಯಲ್ಲಿ ಸೇವಾ ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. “ನ್ಯಾಯಾಲಯಗಳು ಸಂವಿಧಾನದ ಅಡಿಯಲ್ಲಿ ಕಾರ್ಯಾಂಗಕ್ಕೆ ನಿಯೋಜಿಸಿರುವ ಪ್ರಕಾರ್ಯಗಳನ್ನು ಕಸಿದುಕೊಳ್ಳುವಂತಿಲ್ಲ ಹಾಗೂ ಯಾವುದೇ ರೀತಿಯಲ್ಲಿ ತನ್ನ ನಿಯಮ ರಚನಾ ಅಧಿಕಾರವನ್ನು ಚಲಾಯಿಸಲು ಕಾರ್ಯಾಂಗವನ್ನು ಪರೋಕ್ಷವಾಗಿಯೂ ಸಹ ಕೋರುವಂತಿಲ್ಲ. ನ್ಯಾಯಾಲಯಗಳು ಸಂವಿಧಾನದ 309ನೇ ಅನುಚ್ಛೇದದ ಅಡಿಯಲ್ಲಿ ಕಾರ್ಯಾಂಗದ ನಿಯಮ ರಚನಾ ಅಧಿಕಾರದ ಮೇಲೆ ತಾವೇ ಸ್ವತಃ ಮೇಲ್ವಿಚಾರಣಾ ಅಧಿಕಾರವನ್ನು ವಹಿಸಿಕೊಳ್ಳುವಂತಿಲ್ಲ” ಸಂವಿಧಾನವು ಕಾರ್ಯನೀತಿಯ ವಿಷಯಗಳಲ್ಲಿ ಕಾರ್ಯಾಂಗಕ್ಕೆ ನಿರ್ದೇಶಿಸಲು ಅಥವಾ ಸಲಹೆ ನೀಡಲು ಅಥವಾ ಸಂವಿಧಾನದ ಅಡಿಯಲ್ಲಿ ಶಾಸಕಾಂಗ ಅಥವಾ ಕಾರ್ಯಾಂಗದ ವ್ಯಾಪ್ತಿಯೊಳಗೆ ಬರುವ ಯಾವುದೇ ವಿಷಯದ ಬಗ್ಗೆ ಉಪದೇಶ ಮಾಡಲು ನ್ಯಾಯಾಲಯಕ್ಕೆ ಅನುಮತಿ ನೀಡುವುದಿಲ್ಲ; ಮಲ್ಲಿಕಾರ್ಜುನ ರಾವ್- ವಿರುದ್ಧ-ಆಂಧ್ರಪ್ರದೇಶ ರಾಜ್ಯ, ಎಐಆರ್‍ 1990 ಎಸ್‍ಸಿ 1251, 1255, ಕಂಡಿಕೆಗಳು 10-12.

ಸ್ಥಾನಪನ್ನ ಹುದ್ದೆ

ಖಾಯಂ ಆಗಿ ಒಂದು ಹುದ್ದೆಯನ್ನು ಹೊಂದಿರುವ ಒಬ್ಬ ಅಧಿಕಾರಿಗೆ, ಸಾರ್ವಜನಿಕ ಸೇವೆಯ ಅವಶ್ಯಕತೆಗಳಲ್ಲಿ ಒಂದು ಉನ್ನತ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಲು ಮಾತ್ರ ಆದೇಶಿಸಿದ್ದಲ್ಲಿ, ಆತನು ಆ ಉನ್ನತ ಹುದ್ದೆಯ ಉಪಲಬ್ಧಿಗಳನ್ನು ಪಡೆಯಲು ಹಕ್ಕುಳ್ಳವನಾಗಿರುವುದಿಲ್ಲ. ಆತನು “ಪ್ರಭಾರ ಭತ್ಯೆ” ಎಂದು ಕರೆಯುವ ಭತ್ಯೆಯನ್ನು ಮಾತ್ರ ಪಡೆಯಬಹುದು; ರಮಾಕಾಂತ್-ವಿರುದ್ಧ-ಭಾರತ ಒಕ್ಕೂಟ, ಎಐಆರ್‍ 1991 ಎಸ್‍ಸಿ 1145, ಕಂಡಿಕೆ 4.

ಖಾಸಗಿತನ

ಜೀವವಿಮಾ ನಿಗಮವು, ಒಬ್ಬ ಮಹಿಳಾ ನೌಕರಳು ತನ್ನ ನಿರಂತರ ಋತುಚಕ್ರದ ಅವಧಿಗಳ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದರೆ ಆಕೆಯನ್ನು ಸೇವೆಯಿಂದ ತೆಗೆದುಹಾಕತಕ್ಕದ್ದಲ್ಲ. ಅಂಥ ಮಾಹಿತಿಯನ್ನು ಕಡ್ಡಾಯವಾಗಿ ಕೇಳುವುದು ಸಂವಿಧಾನದ 21ನೇ ಅನುಚ್ಛೇದದಲ್ಲಿರುವ ಖಾಸಗಿತನ ಹಕ್ಕನ್ನು ಉಲ್ಲಂಘಿಸುತ್ತದೆ. ಪ್ರಶ್ನಿತ ಮಾಹಿತಿಯು ಗರ್ಭಾಧಾರಣೆ ಮುಂತಾದವುಗಳನ್ನು ಪರೀಕ್ಷಿಸಲು ಅಗತ್ಯಪಡಿಸಿದರೆ, ಎಲ್‍ಪಿಯು (ಅದು ಹಾಗೆ ಆಯ್ಕೆ ಮಾಡಿದರೆ) ನೌಕರಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದು; ನೀರಾ-ವಿರುದ್ಧ- ಎಲ್.ಐ.ಸಿ., (1992) I ಎಸ್‍ಸಿಸಿ 286.

 

ಪ್ರಾಮಿಸರಿ ವಿಬಂಧ

ವಿಮೆಯ ಬದಲಾವಣೆಯನ್ನು ಪ್ರಾಮಿಸರಿ ವಿಬಂಧದ ಸಿದ್ದಾಂತಗಳಿಂದಲೂ ಸಹ ನಿಯಂತ್ರಿಸಲಾಗುತ್ತದೆ; ಅಮಿತ್-ವಿರುದ್ಧ-ಪಂಜಾಬ್ ರಾಜ್ಯ, (1992) 2 ಎಸ್‍ಸಿಸಿ 411, ಕಂಡಿಕೆಗಳು 4-6.

309ನೇ ಅನುಚ್ಛೇದದ ಪರಂತುಕದ ಅಡಿಯಲ್ಲಿನ, ಅಧಿಕಾರವನ್ನು ಚಲಾಯಿಸಿ ರಚಿಸಿದ ನಿಯಮವು ಅನುಚ್ಛೇದ 235ನೇ ಅರ್ಥವ್ಯಾಪ್ತಿಯೊಳಗೆ ಕಾನೂನು ಎಂಬುದಾಗಿ ಅರ್ಥೈಸಲಾಗುತ್ತದೆ. ಅದೇ ಕಾರಣಕ್ಕಾಗಿ, ಅಂಥ ನಿಯಮವನ್ನು ಶಾಸನಾತ್ಮಕ ಕ್ರಮವನ್ನು ಅಸಿಂಧುಗೊಳಿಸಬಹುದಾದಂಥ ಕಾರಣದ ಮೇಲೆ ಮಾತ್ರ ರದ್ದುಗೊಳಿಸಬಹುದು. ಉದಾಹರಣೆಗೆ, ಸಂವಿಧಾನದ 14 ಮತ್ತು 16ನೇ ಅನುಚ್ಛೇದಗಳನ್ನು ಉಲ್ಲಂಘನೆ ಮಾಡಿರುವುದರಿಂದಲೇ ಹೊರತು, ನ್ಯಾಯಾಲಯವು ಅದನ್ನು ಅಸಮಂಜಸವೆಂದು ಪರಿಗಣಿಸಿರುವುದರಿಂದ ಅಲ್ಲ; ಬನ್ಸಲ್-ವಿರುದ್ಧ-ಭಾರತ ಒಕ್ಕೂಟ ಎಐಆರ್‍ 1993, ಎಸ್‍ಸಿ 978, ಕಂಡಿಕೆ 21.

ಜಾಹೀರಾತಿಗೆ ಅನುಗುಣವಾಗಿ, ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವುದಕ್ಕೂ ಮುಂಚೆ, ನಿಯಮಗಳನ್ನು ತಿದ್ದುಪಡಿ ಮಾಡಿ, ಸರ್ಕಾರವು ಕೋರಿಕೆಗಳನ್ನು ಹಿಂತೆಗೆದುಕೊಂಡರೆ, ಸೇವಾ ಆಯೋಗವು ಮೂಲ ನಿಯಮಗಳಗನುಸಾರವಾಗಿ ಆಯ್ಕೆ ಪ್ರಕ್ರಿಯೆಯನ್ನು ಮುಂದುವರೆಸುತ್ತದೆಯಾದರೂ, ಹಾಗೆ ಆಯ್ಕೆಯಾದ ಅಭ್ಯರ್ಥಿಯು ಯಾವುದೇ ನಿಹಿತವಾದ ಹಕ್ಕನ್ನು ಹೊಂದಿರುವುದಿಲ್ಲ; ಜೈಸ್ವಾಲ್-ವಿರುದ್ಧ-ದೇಬಿ, (1992) 1 ಯುಜೆಎಸ್‍ಸಿ 731, ಕಂಡಿಕೆ 5.

ಒಂದು ಸೇವೆಯು, 309ನೇ ಅನುಚ್ಛೇದದ ಅಡಿಯಲ್ಲಿ ರಚಿಸಿದ ಎಂದರೆ, ಎರಡು ನಿಯಮಗಳನ್ನು ಹೊಂದಿದ್ದಲ್ಲಿ, ಸಂಘರ್ಷದ ಪ್ರಶ್ನೆ ಉದ್ಭವಿಸುತ್ತದೆ. ಉದಾಹರಣೆಗೆ; ಸಾಮಾನ್ಯ ನೇಮಕಾತಿ ನಿಯಮಗಳು ಮತ್ತು ವಿಶೇಷ ನೇಮಕಾತಿ ನಿಯಮಗಳು (ಮೋಟಾರು ವಾಹನಗಳ ವಿಭಾಗದಂಥ ನಿರ್ದಿಷ್ಟ ಇಲಾಖೆಗೆ ಅನ್ವಯಿಸುತ್ತದೆ); ರಘುನಾಥ್-ವಿರುದ್ಧ-ಕರ್ನಾಟಕ ರಾಜ್ಯ, ಎಐಆರ್‍ 1992 ಎಸ್‍ಸಿ 81, ಕಂಡಿಕೆ 7.

ನಿಯಮ ರಚಿಸುವ ಅಧಿಕಾರ

ಸೇವಾ ವಿಷಯಗಳಿಗೆ ಸಂಬಂಧಿಸಿದ ನಿಯಮಗಳನ್ನು- (ಎ) 309ನೇ ಅನುಚ್ಛೇದ, ಪರಂತುಕದ, ಅಡಿಯಲ್ಲಿ ಅಥವಾ

(ಬಿ) ಕಾರ್ಯಾಂಗದ ಆದೇಶಗಳ ಮೂಲಕ ಸಕ್ಷಮ ಶಾಸಕಾಂಗವು ರಚಿಸಿದ ನಿಯಮಗಳಿಗೆ ಒಳಪಟ್ಟು, ರಚಿಸಬಹುದಾಗಿದೆ; ಹರಿಯಾಣ ರಾಜ್ಯ-ವಿರುದ‍್ಧ-ಪಿಯಾರ, (1992) 4ಎಸ್‍ಸಿಸಿ 118, ಕಂಡಿಕೆ 21.

ವೇತನ 

ನಿವೃತ್ತಿ ಹೊಂದುವ ವ್ಯಕ್ತಿಗಳಿಗಾಗಿ ನಿವೃತ್ತಿಯ ದಿನಾಂಕದಂದು ಪಡೆಯುವ ವೇತನವನ್ನು ಮುಂದಿನ ದಿನಾಂಕದ ತರುವಾಯ, ಮಾಡಲಾದ ಯಾವುದೇ ಹೆಚ್ಚಳದ ಪರಿಣಾಮವಾಗಿ, ಮರು ಪರಿಶೀಲಿಸುವ ಹಾಗಿಲ್ಲ ಎಂದು ಸಂವಿಧಾನದ ಪೀಠವು ಅಭಿಪ್ರಾಯಪಟ್ಟಿದೆ. ಭಾರತದ ಮಾಜಿ ಸೈನಿಕರ ಸಂಘ-ವಿರುದ್ಧ-ಭಾರತದ ಒಕ್ಕೂಟ, ಎಐಆರ್‍ 1991 ಎಸ್‍ಸಿ 1182, ಕಂಡಿಕೆಗಳು 21 ಮತ್ತು 22.

ಜ್ಯೇಷ್ಠತೆ

ನೇಮಕಾತಿ ಆದೇಶದಲ್ಲಿ, ನೇಮಕಾತಿಯು ತಾತ್ಕಾಲಿಕ ಅಥವಾ ಹಂಗಾಮಿ ಇತ್ಯಾದಿ ಎಂದು ಹೇಳಿದ್ದರೂ ಸಹ, ಇಲ್ಲಿಯವರೆಗೆ, ನೇಮಕಗೊಂಡ ವ್ಯಕ್ತಿಯು ಯಾವುದೇ ವಿರಾಮವಿಲ್ಲದೆ, ದೀರ್ಘಾವಧಿಯವರೆಗೆ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾನೆಂದು ಸ್ಥಾಪಿತವಾದಲ್ಲಿ, ನ್ಯಾಯಾಲಯವು “ನಿರಂತರ ಕಾರ್ಯನಿರ್ವಹಣಾ” ಎಂಬ ತತ್ವವನ್ನು ಅನ್ವಯಿಸಿ, ನೇಮಕಗೊಂಡ ವ್ಯಕ್ತಿಯನ್ನು ನಿಯತಗೊಳಿಸಲಾಗಿದೆ ಎಂದು ಭಾವಿಸತಕ್ಕದ್ದು ಎಂದು ಅಭಿಪ್ರಾಯಪಟ್ಟಿದೆ; ನಾಯರ್‍-ವಿರುದ್ಧ-ಭಾರತ ಒಕ್ಕೂಟ, ಎಐಆರ್‍ 1993 ಎಸ್‍ಸಿ 1574; ಹರಿಯಾಣ ರಾಜ್ಯ-ವಿರುದ್ಧ-ಪಿಯಾರ, ಎಐಆರ್‍ 1992 ಎಸ್‍ಸಿ 2130, ಕಂಡಿಕೆ 12 (3 ನ್ಯಾಯಾಧೀಶರು).

ಸೇವೆಯ ನಂತರದ ಪುನರ್‍ರಚನೆ ಅಥವಾ ಒಬ್ಬ ನೌಕರನು ಜವಾಬ್ದಾರನಲ್ಲದ, ಆಯ್ಕೆ ಪ್ರಕ್ರಿಯೆಯಲ್ಲಿನ ವಿಳಂಬವು ಪುನರ್‍ರಚನೆಯ ದಿನಾಂಕಕ್ಕೂ ಮುಂಚೆ ಆತನು ಹೊಂದಿರುವ ಮುಂಬಡ್ತಿಗಾಗಿ ಆತನ ಜ್ಯೇಷ್ಠತೆಯನ್ನು ತೆಗೆದುಹಾಕುವಂತಿಲ್ಲ; ನಿರ್ಮಲ್‍-ವಿರುದ್ಧ-ಭಾರತ ಒಕ್ಕೂಟ, (1991) ಪೂರಕ 2 ಎಸ್‍ಸಿಸಿ 263, ಕಂಡಿಕೆ 4-6.

ಸೇವೆಯಲ್ಲಿನ ಜ್ಯೇಷ್ಠತೆಯನ್ನು ನಿರ್ಧರಿಸುವುದಕ್ಕಾಗಿ ರಾಜ್ಯವು ತಾನು ಸೂಕ್ತವೆಂದು ಭಾವಿಸುವಂಥ ಯಾವುದೇ ಮಾನದಂಡಗಳನ್ನು ರೂಪಿಸಲು ಮುಕ್ತವಾಗಿರುತ್ತದೆ ಮತ್ತು ಅಂಥ ನಿಯಮವು ಅವು ನಿರಂಕುಶವಾಗಿವೆ ಎಂಬ ಅಥವಾ ಒಂದೇ ವರ್ಗಕ್ಕೆ ಸೇರುವ ನೌಕರನ ನಡುವೆ ಅಸಮಾನತೆ ಅವಕಾಶಗಳನ್ನು ಉಂಟು ಮಾಡುತ್ತದೆಂಬ ಸಂವಿಧಾನದ 14 ಅಥವಾ 16ನೇ ಅನುಚ್ಛೇದವನ್ನು ಉಲ್ಲಂಘಿಸಬಹುದೆಂಬ ಕಾರಣದ ಮೇಲೆ ಹೊರತು, ಅಂಥ ನಿಯಮವನ್ನು ಹೊಡೆದು ಹಾಕುವುದಕ್ಕೆ ನ್ಯಾಯಾಲಯವು ಸಕ್ಷಮವಾಗಿರುವುದಿಲ್ಲ; ಧಾನ್ ಸಿಂಗ್-ವಿರುದ್ಧ-ಹರಿಯಾಣ ರಾಜ್ಯ, (1991) 2 ಪೂರಕ ಎಸ್‍ಸಿಸಿ 190, ಕಂಡಿಕೆ 10.

ಬಡ್ತಿದಾರರು ಹೆಚ್ಚಿನಅರ್ಹತೆಯನ್ನು ಹೊಂದಿದ್ದಲ್ಲಿ ಅಥವಾ ಲೋಕಸೇವಾ ಆಯೋಗದಿಂದ ನೇಮಕಗೊಂಡಿದ್ದಲ್ಲಿ ಸರ್ಕಾರವು ಅವರಿಗೆ ಜ್ಯೇಷ್ಠತೆಯಲ್ಲಿ ಕೆಲವು ಕೃಪಾಂಕವನ್ನು ನೀಡಬಹುದು. ಇಲ್ಲಿ ಯಾವುದೇ ಅನುಚಿತ ತಾರತಮ್ಯವಾಗುವುದಿಲ್ಲ ಹಾಗೂ ನ್ಯಾಯಾಲಯವು ಸರ್ಕಾರದ ಅಂಥ ನೀತಿ ನಿರ್ಧಾರದಲ್ಲಿ ಮದ್ಯಪ್ರವೇಶಿಸುವಂತಿಲ್ಲ; ಆಂಧ್ರಪ್ರದೇಶ ರಾಜ್ಯ-ವಿರುದ್ಧ-ಮುರುಳಿಧರ್, ಎಐಆರ್ 1992, ಎಸ್‍ಸಿ 922.

ಒಬ್ಬ ವ್ಯಕ್ತಿಗೆ ನಿಯಮಗಳ ತಪ್ಪು ಅನ್ವಯದಿಂದಅಥವಾ ಯಾವುದೇ ಯುಕ್ತ ಕಾರಣವಿಲ್ಲದೆ ಜ್ಯೇಷ್ಠತೆ ನೀಡಲು ನಿರಾಕರಿಸಿದ್ದಲ್ಲಿ, ನ್ಯಾಯಾಲಯವು ತತ್ಪರಿಣಾಮವಾದ ಹಣಕಾಸಿನ ಪ್ರಯೋಜಗಳೊಂದಿಗೆ, ಆತನ ಕಿರಿಯ ಸಹೋದ್ಯೋಗಿಯನ್ನು ಯಾವಾಗ ಆ ಪದದಲ್ಲಿ ನಿಯೋಜಿಸಲಾಗಿತ್ತೋ ಆ ದಿನಾಂಕದಿಂದ ಪರಿಣಾಮಕಾರಿಯಾಗುವಂತೆ ಉನ್ನತ ದರ್ಜೆಯಲ್ಲಿ ಆತನನ್ನು ಇರಿಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬಹುದು; ಧರಮ್-ವಿರುದ್ಧ-ಆಡಳಿತಾಧಿಕಾರಿ, (1991) 17 ಎಟಿಸಿ 925, ಕಂಡಿಕೆ 4.

ಸಾಮಾನ್ಯವಾಗಿ, ನ್ಯಾಯಾಲಯವು ನಿಯಮಗಳು ಅಥವಾ ಕಾರ್ಯಾಂಗದ ಸೂಚನೆಗಳು ‘ಯುಕ್ತ, ನ್ಯಾಯಸಮ್ಮತ ಹಾಗೂ ನ್ಯಾಯೋಚಿತವಾಗಿದ್ದರೆ,” ಜ್ಯೇಷ್ಠತೆಯ ತತ್ವಗಳನ್ನು ರೂಪಿಸುವ ಅಂಥ ಕಾರ್ಯಾಂಗದ ಸೂಚನೆಗಳಲ್ಲೂ ಸಹ ಹಸ್ತಕ್ಷೇಪ ಮಾಡುವುದಿಲ್ಲ; ದೇವುಡು ಎ-ವಿರುದ್ಧ-ಮ‍ಧ‍್ಯಪ್ರದೇಶ ರಾಜ್ಯ, (1992) 19 ಎಟಿಸಿ 154 (ಎಸ್‍ಸಿ), ಕಂಡಿಕೆ 17.

ಒಂದೇ ಸೇವೆ ಅಥವಾ ವೃಂದದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ನಡುವಿನ ಜ್ಯೇಷ್ಠತೆಯನ್ನು 309ನೇ ಅನುಚ್ಛೇದ ಅಡಿಯಲ್ಲಿ ರಚಿಸಿದ ನಿಯಮಗಳ ಮೂಲಕ ನಿರ್ಧರಿಸತಕ್ಕದ್ದು. ಅಂಥ ನಿಯಮಗಳಲ್ಲಿ ಯಾವುದೇ ಅಸಂವಿಧಾನಿಕತೆ ಇಲ್ಲದಿದ್ದರೆ, ಅದರಲ್ಲಿ ಜ್ಯೇಷ್ಠತೆಯನ್ನು ಅಂಥ ನಿಯಮಗಳಲ್ಲಿ ನಿರೂಪಿಸಲಾದ ಮಾನದಂಡಗಳಿಗನುಗುಣವಾಗಿ ನಿರ್ಧರಿಸಬೇಕು, ಉದಾಹರಣೆಗೆ; ದರ್ಜೆ ಮತ್ತು ಅರ್ಹತೆ (ಲೋಕ ಸೇವಾ ಆಯೋಗದಿಂದ ಆಯ್ಕೆಯಾದಲ್ಲಿ); ನ್ಯಾಯಾಲಯವು ಯಾವುದೇ ಇತರ ಮಾನದಂಡಗಳನ್ನು ರೂಪಿಸುವಂತಿಲ್ಲ; ತಮಿಳುನಾಡು ರಾಜ್ಯ-ವಿರುದ್ಧ-ಪಾನ್ (1991) 3 ಎಸ್‍ಸಿಜೆ 302, ಕಂಡಿಕೆ 10 (3 ನ್ಯಾಯಾಧೀಶರು).

ಸಂವಿಧಾನಕ್ಕೆ ಅನುಗುಣವಾಗಿ ಕೋಟಾಕ್ಕೆ ಸಂಬಂಧಿಸಿದಂಥ ನಿಯಮಗಳ ಅರ್ಥವಿವರಣೆಯು ಕಷ್ಟಸಾಧ‍್ಯವಾದ ಕಾರ್ಯವಾಗಬಹುದು. ಈ ನಿಯಮಗಳಅಡಿಯಲ್ಲಿ ಒಬ್ಬ ವ್ಯಕ್ತಿಯು ಒಂದು ವೃಂದದ ಹುದ್ದೆಗೆ ಖಾಯಂ ಆಗಿ ನೇಮಕಗೊಳ್ಳುವವರೆಗೆ ಯಾವುದೇ ಜ್ಯೇಷ್ಠತೆಯ ಪ್ರಶ್ನೆ ಉದ್ಭವಿಸುವುದಿಲ್ಲ; ಚೋಪ್ರಾ-ವಿರುದ್ಧ- ಹರಿಯಾಣ ರಾಜ್ಯ, (1992) 19 ಎಟಿಸಿ 493 (ಎಸ್‍ಸಿ), ಕಂಡಿಕೆ 10-17.

ಒಬ್ಬ ವ್ಯಕ್ತಿಯು ಈ ನಿಯಮಗಳಿಗನುಗುಣವಾಗಿ ಒಂದು ಹುದ್ದೆಗೆ ನೇಮಕಗೊಂಡಿದ್ದಾಗ, ಆತನ ಜ್ಯೇಷ್ಠತೆಯನ್ನು ಆತನ ನೇಮಕಾತಿಯ ದಿನಾಂಕದಿಂದ ಪರಿಗಣಿಸಬೇಕಾಗುತ್ತದೆಯೇ ಹೊರತು, ಆತನ ಸ್ಥಿರೀಕರಣದ ದಿನಾಂಕಕ್ಕೆ ಅನುಗುಣವಾಗಿ ಅಲ್ಲ; ನೇರ ನೇಮಕಾತಿ, ವರ್ಗ – ಇಂಜಿನಿಯರ್ ಅಧಿಕಾರಗಳ ಸಂಘ-ವಿರುದ್ಧ-ಮಹಾರಾಷ್ಟ್ರ ರಾಜ್ಯ, (1990) 2 ಎಸ್‍ಸಿಜೆ 377, ಕಂಡಿಕೆ 13 (ಸಿಬಿ).

ಎರಡು ಮೂಲಗಳಿಂದ ನೇಮಕಾತಿಗಾಗಿ ಕೋಟಾ ಅಥವಾ ಅನುಪಾತವನ್ನು ನಿಗದಿಪಡಿಸುವ ನಿಯಮಗಳನ್ನು ರಚಿಸಿದ್ದರೆ, ಆಗ ಪರಸ್ಪರ ಜ್ಯೇಷ್ಠತೆಯನ್ನು ಕೋಟಾ ನಿಯಮಗಳ ಮೂಲಕ ಮಾರ್ಗದರ್ಶಿಯಾಗಿರುತ್ತವೆ. ಸಕ್ಸೇನಾ-ವಿರುದ್ಧ-ಉತ್ತರ ಪ್ರದೇಶ ರಾಜ್ಯ, (1992) 19 ಎಟಿಸಿ 96 (ಎಸ್‍ಸಿ), ಕಂಡಿಕೆಗಳು 6-7; ನೇರನೇಮಕಾತಿ ದರ್ಜೆ-II ಇಂಜಿನಿಯರ್ ಅಧಿಕಾರಿಗಳ ಸಂಘ-ವಿರುದ್ಧ-ಮಹಾರಾಷ್ಟ್ರ ರಾಜ್ಯ (1990) 2 ಎಸ್‍ಸಿಸಿ 715, ಕಂಡಿಕೆ 47.

ಸರ್ಕಾರವು ನಿಯತ ಆಧಾರದ ಮೇಲೆ ನೇಮಕಗೊಂಡ ವ್ಯಕ್ತಿಗಳನ್ನು ನಿಯತಗೊಳಿಸಿದ ವ್ಯಕ್ತಿಗಳ ಕೆಳಗೆ (ಜ್ಯೇಷ್ಠತೆಯಲ್ಲಿ) ಇರಿಸತಕ್ಕದ್ದು ಎಂದು ನಿರೂಪಿಸುವ ನಿಯಮಗಳನ್ನು ರಚಿಸಬಹುದು. ನ್ಯಾಯಾಲಯದ ಮಧ್ಯಸ್ಥಿಕೆ ಕೋರುವುದು ಕಾನೂನುಬಾಹಿರವಾಗಿರುವುದಿಲ್ಲ. ಹಿಂದಿನವರು (Former)ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ತರುವಾಯ ಸೇವೆಗೆ ಸೇರಬಹುದು; ಭರ್ನಾಗರ್‍-ವಿರುದ್ಧ-ಭಾರತ ಒಕ್ಕೂಟ, (1991) 1 ಎಸ್‍ಸಿಸಿ 544, ಕಂಡಿಕೆಗಳು 8,9 ಮತ್ತು 12 (ನ್ಯಾಯಾಧೀಶರು).

ನಿಯಮಗಳು ಸ್ವತಃ ನೇರ ಹಾಗೂ ಅಧೀನ ಸೇವೆಗಳಲ್ಲಿ ಪ್ರತ್ಯೇಕ ವೃಂದಗಳಾಗಿ ನೇಮಕಗೊಂಡ ವ್ಯಕ್ತಿಗಳ ನಡುವೆ ಭಿನ್ನತೆಯನ್ನು ಮಾಡಿದ್ದಲ್ಲಿ, ಅಂಥ ನಿಯಮಗಳನ್ನು ಅಸಂವಿಧಾನಿಕ ಎಂದು ಅಭಿಪ್ರಾಯಪಡುವಂತಿಲ್ಲ. ಎರಡು ವೃಂದಗಳ ನಡುವೆ ಸಾಮಾನ್ಯ ಜ್ಯೇಷ್ಠತೆಯನ್ನು ಕಾಪಾಡಬೇಕು ಎಂಬ ಕ್ಲೇಮು ಸಮರ್ಥನೀಯವಾದುದಲ್ಲ; ಸೋನಿ ರಾಜ್-ವಿರುದ್ಧ-ಹರಿಯಾಣ ರಾಜ್ಯ, (1990) 2 ಎಸ್‍ಸಿಜೆ I, ಕಂಡಿಕೆಗಳು 5-6.

 

 

ಸೇವಾ ವಿಷಯಗಳು: ನ್ಯಾಯಿಕ ಮಧ್ಯಪ್ರವೇಶ

ನ್ಯಾಯಾಲಯದ ಮುಂದೆ ಪ್ರಶ್ನಿಸಲಾದ ಕ್ರಮವು ಮೂಲಭೂತ ಹಕ್ಕುಗಳು, ಶಾಸನಬದ್ಧ ಉಪಬಂಧಗಳು, ನಿಯಮಗಳು ಮತ್ತು ಸೂಚನೆಗಳು, ನಿಷ್ಪಕ್ಷಪಾತ ಎಂಬ ಅಂಶದಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಮಾತ್ರ ಸೇವಾ ವಿಷಯಗಳಲ್ಲಿ ನ್ಯಾಯಿಕ ಮಧ‍್ಯಪ್ರವೇಶವನ್ನು ಕೋರಬಹುದು. ಹರಿಯಾಣ ರಾಜ್ಯ-ವಿರುದ್ಧ- ಪಿಯಾರ, (1992) 4 ಎಸ್‍ಸಿಸಿ 118, ಕಂಡಿಕೆ 21.

ತಾತ್ಕಾಲಿಕ ಸೇವೆ

ರಾಜ್ಯ, ಒಬ್ಬ ವ್ಯಕ್ತಿಯನ್ನು ದೀರ್ಘಾವಧಿಗಾಗಿ ತಾತ್ಕಾಲಿಕ ಅಥವಾ ತಾತ್ಫೂರ್ತಿಕ ಸೇವೆಯಲ್ಲಿ ಇಡಬಾರದು. ರಾಜ್ಯವು, ಆತನ ಸೇವೆಯನ್ನು ನಿಯತಗೊಳಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳತಕ್ಕದ್ದು; ಧಾರವಾಡ ಜಿಲ್ಲಾ ಪಿಡಬ್ಲ್ಯೂಡಿ ಸಾಕ್ಷರ ದಿನಗೂಲಿ ನೌಕರರ ಸಂಘ). ವೇತನ ಪಡೆಯುವ ನೌಕರ ಸಂಘ-ವಿರುದ್ಧ-ಕರ್ನಾಟಕ ರಾಜ್ಯ, (1990) 2 ಎಸ್‍ಸಿಸಿ 396, ಕಂಡಿಕೆ 23.

ಕೊನೆಗೊಳಿಸುವಿಕೆ

ಕೊನೆಗೊಳಿಸುವಕೆಯು (ಒಬ್ಬ ನೌಕರನ ಸೇವೆಯನ್ನು) ನಿರಂಕುಶವಾಗಿದ್ದರೆ, ನೌಕರನು ತಾತ್ಫೂರ್ತಿಕ, ತಾತ್ಕಾಲಿಕ ಅಥವಾ ಸ್ಥಾನಪನ್ನಾ ಸ್ಥಿತಿಯಲ್ಲಿದ್ದರೂ ಅಥವಾ ಸಾಂದರ್ಭಿಕ ನೌಕರನಾಗಿದ್ದರೂ ಸಹ, ಅದು 16ನೇ ಅನುಚ್ಛೇದದ ಉಲ್ಲಂಘನೆಯಾಗುತ್ತದೆ; ಶ್ರೀಲೇಖ-ವಿರುದ್ಧ-ಉತ್ತರ ಪ್ರದೇಶ ರಾಜ್ಯ, (1991, ಎಸ್‍ಸಿಸಿ 212).

ವರ್ಗಾವಣೆ

ಒಬ್ಬವ್ಯಕ್ತಿಯು ವರ್ಗಾವಣೀಯವಾದ ಸೇವೆ ಅಥವಾ ವೃಂದಕ್ಕೆ ಸೇರಿರುವಾಗ, ಆಗ ಯಾವುದೇ ಶಾಸನಬದ್ಧ ನಿರ್ಬಂಧಗಳು ಇಲ್ಲದಿರುವಲ್ಲಿ, ವೃಂದ ಅಥವಾ ಸೇವೆಗೆ ನೇಮಕಗೊಂಡ ವ್ಯಕ್ತಿಯನ್ನು ಸಾರ್ವಜನಿಕ ಸೇವೆಯ ಹಿತಾಸಕ್ತಿಯಲ್ಲಿ ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ವರ್ಗಾಯಿಸಬಹುದಾಗಿರುತ್ತದೆ. ಅಂಥ ಸಂದರ್ಭದಲ್ಲಿ, ವರ್ಗಾವಣೆಯು ಸೇವೆಯ ಒಂದು ಪ್ರಸಂಗವಾಗಿದ್ದು, ನೌಕರನು, (ಎ) ಕೆಲವು ಕಡ್ಡಾಯ ಶಾನಸಬದ್ಧ ನಿಯಮವನ್ನು ಉಲ್ಲಂಘಿಸಿ ಆದೇಶಿಸಿದ್ದಲ್ಲಿ, (ಬಿ) ಅದನ್ನು ದುರ್ಭಾವನೆಯಿಂದ ಮಾಡಿದ್ದರೆ, ಅಂದರೆ, ಆಡಳಿತದ ಹಿತಾಸಕ್ತಿಗಳನ್ನು ಹೊರತುಪಡಿಸಿ, ಕೆಲವು ಪಾರ್ಶ್ವಿಕ ಉದ್ದೇಶದಿಂದ ಮಾಡಿದ್ದರೆ, ಅಂಥ ಸಂದರ್ಭವನ್ನು ಹೊರತುಪಡಿಸಿ, ದೂರುವಂತಿಲ್ಲ. ಆದ್ದರಿಂದ, ವರ್ಗಾವಣೆಯನ್ನು ನೌಕರನ ಕೋರಿಕೆಯಲ್ಲಿ ಮಾಡಲಾಯಿತು ಮತ್ತು ಸಕ್ಷಮ ಪ್ರಾಧಿಕಾರವು ತೊಂದರೆಯನ್ನು ನಿವಾರಿಸುವುದಕ್ಕೆ ಅದನ್ನು ಮಂಜೂರು ಮಾಡಿತು ಎಂಬ ಕಾರಣದ ಮೇಲೆ ಮಾತ್ರವೇ ನ್ಯಾಯಾಲಯವು ಮಧ‍್ಯಪ್ರವೇಶ ಮಾಡುವಂತಿಲ್ಲ; ಶಿಲ್ಪಿ-ವಿರುದ್ಧ-ಬಿಹಾರ್ ರಾಜ್ಯ, (1991) ಪೂರಕ 2 ಎಸ್‍ಸಿಸಿ 659, ಕಂಡಿಕೆಗಳು 3-4.

ನೌಕರರನ್ನು ಸರ್ಕಾರಿ ಇಲಾಖೆಯಿಂದ ಒಂದು ಶಾಸನಬದ್ಧ ನಿಗಮಕ್ಕೆ ವರ್ಗಾಯಿಸಲಾಗಿದ್ದು, ವರ್ಗಾವಣೆಯಿಂದ ಅಸ್ತಿತ್ವದಲ್ಲಿರುವ ಅವರ ಸೇವಾ ಷರತ್ತುಗಳು ಪ್ರತಿಕೂಲವಾಗಿ ಪರಿಣಾಮ ಬೀರುವುದಿಲ್ಲ ಎಂಬುದನ್ನು ಪರಿನಿಯಮದ ಅಥವಾ (ಅದರಡಿಯಲ್ಲಿ ನೀಡಲಾದ ನಿರ್ದೇಶನಗಳಲ್ಲಿ) ಉಪಬಂಧ ಕಲ್ಪಿಸಿದ್ದಲ್ಲಿ, ನಿಗಮವು ನೌಕರರಅನನುಕೂಲತೆಗೆ ಸೇವಾ ಷರತ್ತುಗಳನ್ನು ಬದಲಾಯಿಸಲು ನಿಯಮಾವಳಿಗಳನ್ನು ರೂಪಿಸಿದ್ದರೆ, ಆಗ ನ್ಯಾಯಾಲಯವು ಮಧ‍್ಯಪ್ರವೇಶ ಮಾಡಬಹುದು. ಉದಾಹರಣೆಗೆ, ನಿವೃತ್ತಿ ವಯಸ್ಸಿನ ವಿಷಯದಲ್ಲಿ; ದುಬೆ ವಿರುದ್ಧ. ಎಂ.ಪಿಎಸ್‍.ಆರ್‍.7: ಸಿ, (1991) ಪೂರಕ I ಎಸ್‍ಸಿಸಿ 426 ಕಂಡಿಕೆ II.

ಖಾಲಿಸ್ಥಾನಗಳು

ರಾಜ್ಯವು ಖಾಲಿಸ್ಥಾನಗಳನ್ನು ಭರ್ತಿಮಾಡಲು ಬದ್ಧವಾಗಿರುವುದಿಲ್ಲ. ಆದರೆ, ಸದುದ್ದೇಶಗಳ ಕಾರಣಗಳಿಗಾಗಿ ಖಾಲಿಸ್ಥಾನವನ್ನು ಭರ್ತಿಮಾಡದಿರುವ ನಿರ್ಧಾರವನ್ನು ಪ್ರಾಮಾಣಿಕವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಹೆಸರು ಅರ್ಹತಾ ಪಟ್ಟಿಯಲ್ಲಿ ಬಂದಿದೆ ಎಂಬ ಕೇವಲ ವಾಸ್ತವಾಂಶವು ಆತನನ್ನು ನೇಮಕಮಾಡಿಕೊಳ್ಳುವ ಹಕ್ಕನ್ನು ನೀಡುವುದಿಲ್ಲ. ಆದರೆ ಖಾಲಿ ಸ್ಥಾನವನ್ನು ಭರ್ತಿಮಾಡಿದ್ದರೆ ತುಲನಾತ್ಮಕ ಅರ್ಹತೆ (ನೇಮಕಾತಿ ಪರೀಕ್ಷೆಯಲ್ಲಿ ಪ್ರತಿಬಿಂಬಸಲಾದಂತೆ)ಯನ್ನು ಗೌರವಿಸಬೇಕಾಗುತ್ತದೆ ಮತ್ತು ಯಾವುದೇ ತಾರತಮ್ಯತೆಯನ್ನು ಅನುಮತಿಸಲಾಗುವುದಿಲ್ಲ; ಶಂಕರನ್-ವಿರುದ್ಧ-ಭಾರತ ಒಕ್ಕೂಟ, (1991) 3 ಎಸ್‍ಸಿಸಿ 47, ಕಂಡಿಕೆ 7ಎ.

ಅನುಚ್ಛೇದ 316. ಲೋಕ ಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ:

(1) ಲೋಕಸೇವಾ ಆಯೋಗದ ಅಧ್ಯಕ್ಷನನ್ನು ಮತ್ತು ಇತರ ಸದಸ್ಯರನ್ನು ಒಕ್ಕೂಟ ಆಯೋಗದ ಅಥವಾ ಜಂಟಿ ಆಯೋಗದ ಸಂದರ್ಭದಲ್ಲಿ ರಾಷ್ಟ್ರಪತಿಯು ಮತ್ತು ರಾಜ್ಯದ ಆಯೋಗದ ಸಂದರ್ಭದಲ್ಲಿ ಆ ರಾಜ್ಯದ ರಾಜ್ಯಪಾಲನು ನೇಮಕ ಮಾಡತಕ್ಕದ್ದು:

ಪರಂತು, ಪ್ರತಿಯೊಂದು ಲೋಕಸೇವಾ ಆಯೋಗದ ಸದಸ್ಯರಲ್ಲಿ ಸಾಧ್ಯವಾಗಬಹುದಾದಮಟ್ಟಿಗೆ ಅರ್ಧದಷ್ಟು ಸದಸ್ಯರು, ಅವರು ಅನುಕ್ರಮವಾಗಿ ನೇಮಕಗೊಂಡ ದಿನಾಂಕಗಳಂದು ಭಾರತ ಸರ್ಕಾರದ ಅಧೀನದಲ್ಲಾಗಲಿ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಾಗಲಿ ಕನಿಷ್ಠಪಕ್ಷ ಹತ್ತು ವರ್ಷಗಳವರೆಗೆ ಪದಧಾರಣ ಮಾಡಿದವರಾಗಿರತಕ್ಕದ್ದು ಮತ್ತು ಈ ಹತ್ತು ವರ್ಷಗಳ ಅವಧಿಯನ್ನು ಲೆಕ್ಕ ಹಾಕುವಲ್ಲಿ, ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಭಾರತ ಸಾಮ್ರಾಟನ ಅಧೀನದಲ್ಲಿ ಅಥವಾ ಒಂದು ಭಾರತೀಯ ಸಂಸ್ಥಾನ ಸರ್ಕಾರದ ಅಧೀನದಲ್ಲಿ ಒಬ್ಬ ವ್ಯಕ್ತಿಯು ಪದಧಾರಣ ಮಾಡಿದ್ದ ಯಾವುದೇ ಅವಧಿಯನ್ನು ಸೇರಿಸಿಕೊಳ್ಳತಕ್ಕದ್ದು.

(1ಎ) ಆಯೋಗದ ಅಧ್ಯಕ್ಷನ ಪದವು ಖಾಲಿಯಾದರೆ ಅಥವಾ ಅಂಥ ಯಾರೇ ಅಧ್ಯಕ್ಷನು ತನ್ನ ಗೈರುಹಾಜರಿಯ ಕಾರಣದಿಂದಾಗಿ ಅಥವಾ ಇತರ ಯಾವುದೇ ಕಾರಣದಿಂದಾಗಿ ತನ್ನ ಪದದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥನಾದರೆ, ಹಾಗೆ ಖಾಲಿಯಾದ ಪದಕ್ಕೆ (1)ನೆಯ ಖಂಡದ ಮೇರೆಗೆ ನೇಮಕಗೊಂಡ ಯಾರೇ ವ್ಯಕ್ತಿಯು ಆ ಪದದ ಕರ್ತವ್ಯಗಳನ್ನು ವಹಿಸಿಕೊಳ್ಳುವವರೆಗೆ ಅಥವಾ ಸಂದರ್ಭಾನುಸಾರ ಅಧ್ಯಕ್ಷನೇ ತನ್ನ ಕರ್ತವ್ಯಗಳನ್ನು ಪುನಃ ವಹಿಸಿಕೊಳ್ಳುವವರೆಗೆ, ಒಕ್ಕೂಟ ಆಯೋಗದ ಅಥವಾ ಜಂಟಿ ಆಯೋಗದ ಸಂದರ್ಭದಲ್ಲಿ ರಾಷ್ಟ್ರಪತಿಯು ಅಥವಾ ರಾಜ್ಯ ಆಯೋಗದ ಸಂದರ್ಭದಲ್ಲಿ ಆ ರಾಜ್ಯದ ರಾಜ್ಯಪಾಲರು ಆ ಉದ್ದೇಶಕ್ಕಾಗಿ ನೇಮಕ ಮಾಡಬಹುದಾದಂಥ ಆ ಆಯೋಗದ ಇತರ ಸದಸ್ಯರುಗಳ ಪೈಕಿ ಒಬ್ಬ ಸದಸ್ಯನು ಅಂಥ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು.

(2) ಲೋಕಸೇವಾ ಆಯೋಗದ ಸದಸ್ಯನು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಆರು ವರ್ಷಗಳ ಅವಧಿಯವರೆಗೆ, ಅಥವಾ ಒಕ್ಕೂಟ ಆಯೋಗದ ಸಂದರ್ಭದಲ್ಲಿ ಅವನಿಗೆ ಅರವತ್ತೈದು ವರ್ಷಗಳು ತುಂಬುವವರೆಗೆ ಮತ್ತು ಒಂದು ರಾಜ್ಯ ಆಯೋಗದ ಅಥವಾ ಜಂಟಿ ಆಯೋಗದ ಸಂದರ್ಭದಲ್ಲಿ ಅವನಿಗೆ ಅರವತ್ತೆರಡು ವರ್ಷಗಳು ತುಂಬುವವರೆಗೆಈ ಎರಡು ಅವಧಿಗಳ ಪೈಕಿ ಯಾವುದು ಮೊದಲೋ ಆ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು:

ಪರಂತು,

(ಎ) ಲೋಕಸೇವಾ ಆಯೋಗದ ಯಾರೇ ಸದಸ್ಯನು, ಒಕ್ಕೂಟ ಆಯೋಗದ ಅಥವಾ ಜಂಟಿ ಆಯೋಗದ ಸಂದರ್ಭದಲ್ಲಿ, ರಾಷ್ಟ್ರಪತಿಗೆ ಮತ್ತು ರಾಜ್ಯ ಆಯೋಗದ ಸಂದರ್ಭದಲ್ಲಿ ಆ ರಾಜ್ಯದ ರಾಜ್ಯಪಾಲರಿಗೆ ತಾನು ಸಹಿ ಮಾಡಿದ ಪತ್ರವನ್ನು ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು;

(ಬಿ) ಲೋಕಸೇವಾ ಆಯೋಗದ ಯಾರೇ ಸದಸ್ಯನನ್ನು 317ನೆಯ ಅನುಚ್ಫೇದದ (1)ನೆಯ ಖಂಡದಲ್ಲಿ ಅಥವಾ (3)ನೆಯ ಖಂಡದಲ್ಲಿ ಉಪಬಂಧಿಸಿದ ರೀತಿಯಲ್ಲಿ ಅವನ ಪದದಿಂದ ತೆಗೆದುಹಾಕಬಹುದು.

(3) ಲೋಕಸೇವಾ ಆಯೋಗದ ಸದಸ್ಯನಾಗಿ ಪದಧಾರಣ ಮಾಡಿರುವ ವ್ಯಕ್ತಿಯ ಪದಾವಧಿಯು ಮುಕ್ತಾಯವಾದ ಮೇಲೆ ಆ ಪದಕ್ಕೆ ಪುನಃ ನೇಮಕಗೊಳ್ಳಲು ಅವನು ಅನರ್ಹನಾಗತಕ್ಕದ್ದು.

ಅನುಚ್ಛೇದ 316ನೇ ಕುರಿತು ಟಿಪ್ಪಣಿಗಳು

316ನೇ ಅನುಚ್ಛೇದದ ಪರಂತುಕದಲ್ಲಿನಅಗತ್ಯತೆಯಲ್ಲಿ ಅರ್ಧದಷ್ಟು ಸದಸ್ಯರು ಸರ್ಕಾರದ ಅಧೀನದಲ್ಲಿ ಅಧಿಕಾರವನ್ನು ಹೊಂದಿರುವಂಥ ವ್ಯಕ್ತಿಗಳಾಗಿರಬೇಕಾಗುತ್ತದೆ ಎಂಬುದು ನಿರ್ದೇಶಿಕೆಯಾಗಿದೆ. ಆದ್ದರಿಂದ ಹನ್ನೊಂದು ಜನ ಸದಸ್ಯರನ್ನು ಒಳಗೊಂಡಿರುವ ರಾಜ್ಯ ಲೋಕಸೇವಾ ಆಯೋಗದಲ್ಲಿ, ಏಳನೇಯ ಸದಸ್ಯರ ಸ್ಥಳವು(ಸೇವಾಯೇತರ ಪ್ರವರ್ಗಕ್ಕೆ ಸೇರಿರುವ) ಕಾನೂನಿನಲ್ಲಿ ಸಮರ್ಥನೀಯವಾಗಿರುವುದಿಲ್ಲ; ಜೈ ಶಂಕರ್ ಪ್ರಸಾದ್-ವಿ-ಬಿಹಾರ್ ರಾಜ್ಯ, (1993) 2 ಎಸ್‍ಸಿಸಿ 597.

ಅನುಚ್ಛೇದ317. ಲೋಕಸೇವಾ ಆಯೋಗದ ಸದಸ್ಯನನ್ನು ತೆಗೆದುಹಾಕುವುದು ಮತ್ತು ಅಮಾನತ್ತಿನಲ್ಲಿಡುವುದು:

(1) (3)ನೆಯ ಖಂಡದ ಉಪಬಂಧಗಳಿಗೊಳಪಟ್ಟು, ಲೋಕಸೇವಾ ಆಯೋಗದ ಅಧ್ಯಕ್ಷನನ್ನು ಅಥವಾ ಇತರ ಯಾವನೇ ಸದಸ್ಯನನ್ನು ದುರ್ವರ್ತನೆಯ ಕಾರಣದ ಮೇಲೆ, ರಾಷ್ಟ್ರಪತಿಯು ಆ ಸಂಬಂಧದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ಕೇಳಿ ಕಳುಹಿಸಿದ್ದ ಕೋರಿಕೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು 145ನೆಯ ಅನುಚ್ಫೇದದ ಮೇರೆಗೆ ನಿಯಮಿಸಲಾದ ಪ್ರಕ್ರಿಯೆಗೆ ಅನುಸಾರವಾಗಿ ವಿಚಾರಣೆ ನಡೆಸಿ, ಆ ಅಧ್ಯಕ್ಷನನ್ನು ಅಥವಾ ಸಂದರ್ಭಾನುಸಾರ ಅಂಥ ಇತರ ಯಾರೇ ಸದಸ್ಯನನ್ನು ಅಂಥ ಯಾವುದೇ ಕಾರಣದ ಮೇಲೆ ತೆಗೆದುಹಾಕತಕ್ಕದ್ದೆಂದು ವರದಿ ಮಾಡಿದ ತರುವಾಯ ರಾಷ್ಟ್ರಪತಿಯ ಆದೇಶದ ಮೂಲಕ ಮಾತ್ರವೇ ಅವನನ್ನು ಪದದಿಂದ ತೆಗೆದುಹಾಕತಕ್ಕದ್ದು.

(2) ಒಕ್ಕೂಟ ಆಯೋಗದ ಅಥವಾ ಜಂಟಿ ಆಯೋಗದ ಸಂದರ್ಭದಲ್ಲಿ ರಾಷ್ಟ್ರಪತಿಯು ಮತ್ತು ಒಂದು ರಾಜ್ಯದ ಆಯೋಗದ ಸಂದರ್ಭದಲ್ಲಿ ರಾಜ್ಯಪಾಲರು ಆಯೋಗದ ಯಾವ ಅಧ್ಯಕ್ಷನಿಗೆ ಅಥವಾ ಇತರ ಯಾವ ಸದಸ್ಯನಿಗೆ ಸಂಬಂಧಿಸಿದಂತೆ (1)ನೆಯ ಖಂಡದ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ಕೇಳಿ ಕೋರಿಕೆಯನ್ನು ಕಳುಹಿಸಲಾಗಿದೆಯೋ ಆ ಅಧ್ಯಕ್ಷನನ್ನು ಅಥವಾ ಇತರ ಸದಸ್ಯನನ್ನು ಅಂಥ ಅಭಿಪ್ರಾಯ ಕೋರಿಕೆಯ ಮೇಲೆ ಸರ್ವೋಚ್ಚ ನ್ಯಾಯಾಲಯದ ವರದಿಯನ್ನು ಸ್ವೀಕರಿಸಿದ ತರುವಾಯ ರಾಷ್ಟ್ರಪತಿಯು ಆದೇಶಗಳನ್ನು ಮಾಡುವವರೆಗೆ ಅಮಾನತ್ತಿನಲ್ಲಿಡಬಹುದು.

(3) (1)ನೆಯ ಖಂಡದಲ್ಲಿ ಏನೇ ಇದ್ದಾಗ್ಯೂ, ಲೋಕಸೇವಾ ಆಯೋಗದ ಅಧ್ಯಕ್ಷನು ಅಥವಾ ಸಂದರ್ಭಾನುಸಾರ ಇತರ ಯಾರೇ ಸದಸ್ಯನು,-

(ಎ) ದಿವಾಳಿಯೆಂದು ನ್ಯಾಯನಿರ್ಣೀತನಾದರೆ; ಅಥವಾ

(ಬಿ) ಅವನ ಪದಾವಧಿಯಲ್ಲಿ ಅವನ ಪದದ ಕರ್ತವ್ಯಗಳಲ್ಲದ ಬೇರೆ ಯಾವುದೇ ಸಂಬಳದ ಉದ್ಯೋಗದಲ್ಲಿ ತೊಡಗಿದ್ದರೆ; ಅಥವಾ

(ಸಿ) ಮಾನಸಿಕ ಅಥವಾ ಶಾರೀರಿಕ ದೌರ್ಬಲ್ಯದ ಕಾರಣದ ಮೇಲೆ ಪದದಲ್ಲಿ ಮುಂದುವರಿಯಲು ಯೋಗ್ಯನಾಗಿಲ್ಲವೆಂದು ರಾಷ್ಟ್ರಪತಿಯು ಅಭಿಪ್ರಾಯಪಟ್ಟರೆ

- ಅಂಥ ಅಧ್ಯಕ್ಷನನ್ನು ಅಥವಾ ಆ ಯಾರೇ ಇತರ ಸದಸ್ಯನನ್ನು ರಾಷ್ಟ್ರಪತಿಯು ಆದೇಶದ ಮೂಲಕ ಪದದಿಂದ ತೆಗೆದುಹಾಕಬಹುದು.

(4) ಲೋಕಸೇವಾ ಆಯೋಗದ ಅಧ್ಯಕ್ಷನು ಅಥವಾ ಇತರ ಯಾರೇ ಸದಸ್ಯನು, ಭಾರತ ಸರ್ಕಾರವು ಮಾಡಿಕೊಂಡ ಅಥವಾ ಅದರ ಪರವಾಗಿ ಮಾಡಿಕೊಂಡ ಅಥವಾ ಒಂದು ರಾಜ್ಯ ಸರ್ಕಾರವು ಮಾಡಿಕೊಂಡ ಅಥವಾ ಅದರ ಪರವಾಗಿ ಮಾಡಿಕೊಂಡ ಯಾವುದೇ ಕರಾರು ಅಥವಾ ಒಪ್ಪಂದದಲ್ಲಿ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿದ್ದರೆ ಅಥವಾ ಹಿತಾಸಕ್ತಿ ಉಳ್ಳವನಾಗಿದ್ದರೆ ಅಥವಾ ಅದರ ಲಾಭದಲ್ಲಿ ಅಥವಾ ನಿಗಮಿತ ಕಂಪನಿಯ ಸದಸ್ಯನಾಗಿಯಲ್ಲದೆ ಮತ್ತು ಅದರ ಇತರ ಸದಸ್ಯರೊಂದಿಗೆ ಒಡಗೂಡಿಯಲ್ಲದೆ, ಅನ್ಯಥಾ ಅದರಿಂದ ಉದ್ಭವಿಸುವ ಯಾವುದೇ ಪ್ರಯೋಜನದಲ್ಲಿ ಅಥವಾ ಉಪಲಬ್ಧಿಯಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಂಡರೆ ಅವನು (1)ನೆಯ ಖಂಡದ ಉದ್ದೇಶಗಳಿಗಾಗಿ ದುರ್ವರ್ತನೆಯ ತಪ್ಪಿತಸ್ಥನಾಗಿದ್ದಾನೆಂದು ಭಾವಿಸತಕ್ಕದ್ದು.

ಅನುಚ್ಛೇದ 317ನೇ ಕುರಿತು ಟಿಪ್ಪಣಿಗಳು

ಲೋಕಸೇವಾ ಆಯೋಗಗಳಿಗೆ ಸಂಬಂಧಿಸಿದ ಪ್ರಮುಖ ತೀರ್ಪುಗಳು ಈ ಕೆಳಕಂಡಂತಿವೆ:

 

 

ಅನುಪಾತ

ಒಬ್ಬ ನಿರ್ದಿಷ್ಟ ಸದಸ್ಯನ ನೇಮಕಾತಿಯ ಸಿಂಧುತ್ವವನ್ನು ಆತನು ಶೇ.50 ರಷ್ಟು ಅನುಪಾತವನ್ನು ಸರಿದೂಗಿಸಲು ಅಗತ್ಯವಾದ ಪ್ರವರ್ಗಕ್ಕೆ ಸೇರಿರುವುದಿಲ್ಲ ಎಂಬ ಕಾರಣದ ಮೇಲೆ ಪ್ರಶ್ನಿಸುವಂತಿಲ್ಲ; ಜೈ-ವಿರುದ್ಧ-ಬಿಹಾರ ರಾಜ್ಯ, (1993) 2 ಎಸ್‍ಎಸ್‍ಸಿ 597, ಕಂಡಿಕೆಗಳು 9-12.

ದುರ್ನಡತೆ

ಅನುಚ್ಛೇದ 124(4)ರಲ್ಲಿ, ‘ಸಾಬೀತಾದ’ ಎಂಬ ಪದವು ದುರ್ನಡತೆ ಎಂಬ ಪದವನ್ನು ನಿರೂಪಿಸುತ್ತದೆ, ಆದರೆ, ಆ ದೃಡೀಕರಣವು ಅನುಚ್ಛೇದ 317 (1)ರಲ್ಲಿ ಇರುವುದಿಲ್ಲ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಪ್ರಕರಣದಲ್ಲಿ ಅಂಥ ರುಜುವಾತು, ನ್ಯಾಯಾಧೀಶರ (ವಿಚಾರಣ) ಅಧಿನಿಯಮ, 1968ರ ಅಡಿಯಲ್ಲಿ ಮಾಡಲಾದ ವಿಚಾರಣೆ (124ನೇ ಅನುಚ್ಛೇದದ (5)ನೇ ಖಂಡದಲ್ಲಿ ಸಂಸತ್ತು ಅಧಿನಿಯಮಿತಗೊಳಿಸಿದ ಕಾನೂನು)ಯಿಂದ ದೊರೆಯುತ್ತದೆ. ಅದು ಲೋಕಸೇವಾ ಆಯೋಗದ ಸದಸ್ಯರ ಪ್ರಕರಣದಲ್ಲಿ ಇರುವುದಿಲ್ಲ. ಲೋಕಸೇವಾ ಆಯೋಗದ ಸದಸ್ಯರ ಪ್ರಕರಣದಲ್ಲಿ, ದುರ್ವರ್ತನೆಯ ವಿಚಾರಣೆ ಮತ್ತು ರುಜುವಾತನ್ನು ಸರ್ವೋಚ್ಚ ನ್ಯಾಯಾಲಯವು ಮಾಡತಕ್ಕದ್ದು. ಆದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಪ್ರಕರಣದಲ್ಲಿ, ಅದನ್ನು ನ್ಯಾಯಾಧೀಶರ (ವಿಚಾರಣೆ) ಅಧಿನಿಯಮ, 1968ರ ಅಡಿಯಲ್ಲಿ ರಚಿಸಲಾದ ಸಮಿತಿಯು ಮಾಡಬೇಕಾಗುತ್ತದೆ; ಉಪಸಮಿತಿ-ವಿರುದ್ಧ- ಭಾರತ ಒಕ್ಕೂಟ, ಎಐಆರ್‍ 1992 ಎಸ್‍ಸಿ 320, ಕಂಡಿಕೆ 45.

ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ ಮತ್ತೊಬ್ಬ ಸದಸ್ಯನು ಕಪಾಳಮೋಕ್ಷ ಮಾಡಿದರೆ, ಅದು 317(1)ನೇ ಅನುಚ್ಛೇದದ ಅಡಿಯಲ್ಲಿ ದುರ್ವರ್ತನೆಯ ಪ್ರಕರಣವಾಗುತ್ತದೆ. 317(3)ನೇ (ಸಿ) ಅನುಚ್ಛೇದದ ಅಡಿಯಲ್ಲಿ ಅಂಥ ದುರ್ನಡತೆಯ ಸದಸ್ಯನನ್ನು ಆತನ ಪ್ರಕಾರ್ಯಗಳ ದಕ್ಷ ನಿರ್ವಹಣೆಯಿಂದ ಅನರ್ಹಗೊಳಿಸತಕ್ಕದ್ದು ಮತ್ತು ನೇಮಕಾತಿಯ ಮೂಲಸ್ಥಾನದಲ್ಲಿ ಇರಿಸತಕ್ಕದ್ದು. ವಿಶ್ವವಿದ್ಯಾಲಯದ ಪ್ರಾಧ್ಯಾಪಕನನ್ನು ರಾಜ್ಯ ಲೋಕಸೇವಾ ಆಯೋಗದ ಸದಸ್ಯನನ್ನಾಗಿ ನೇಮಕ ಮಾಡಿದ್ದು, ಆತನು ಅಂಧನೆಂದು ತಿಳಿದು ಬಂದಲ್ಲಿ, ದುರ್ಬಲತೆಯ ಆಧಾರದ ಮೇಲೆ ಆತನನ್ನು ತೆಗೆದುಹಾಕುವಂತಿಲ್ಲ; ಜೈ ಶಂಕರ್ ಪ್ರಸಾದ್-ವಿರುದ್ಧ-ಬಿಹಾರ ರಾಜ್ಯ, (1993) 2 ಎಸ್‍ಸಿಸಿ 597.

316ನೇ ಅನುಚ್ಛೇದದ (ಬಿ) ಪರಂತುಕದ ಉಪಬಂಧಗಳು ಮತ್ತು 317ನೇ ಅನುಚ್ಛೇದದ “ಮಾತ್ರವೇ” ಎಂಬ ಪದವು ಲೋಕಸೇವಾ ಆಯೋಗದ ಸದಸ್ಯನನ್ನು ತೆಗೆದುಹಾಕುವ ಅಧಿಕಾರವು ವಿಶೇಷವಾಗಿ ರಾಷ್ಟ್ರಪತಿಯವರಲ್ಲಿ ನಿಹಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಆದ್ದರಿಂದ, ಯಾವುದೇ ನ್ಯಾಯಾಲಯವು ಅಧಿಕಾರ ಪ್ರಶ್ನಕ (Quo warranto) ರಿಟ್‍ ಮೂಲಕ ಸಹ ಈ ಅಧಿಕಾರವನ್ನು ಚಲಾಯಿಸುವಂತಿಲ್ಲ. ಒಬ್ಬ ಸದಸ್ಯನನ್ನು ದುರ್ಬಲತೆಯ ಕಾರಣದ ಮೇಲೆ ತೆಗೆದುಹಾಕಬೇಕೆ ಹಾಗೂ ಅಂಥ ದುರ್ಬಲತೆಯು ಒಬ್ಬ ನಿರ್ದಿಷ್ಟ ಸದಸ್ಯನು ತನ್ನ ಅಧಿಕಾರದ ಪ್ರಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಅಡ್ಡಿಯಾಗುವಂಥ ದುರ್ಬಲತೆಯಾಗಿದೆಯೇ ಎಂಬ ನಿರ್ಧಾರವನ್ನು ರಾಷ್ಟ್ರಪತಿಯವರ ವಿಷಯಾತ್ಮಕ ಮನವರಿಕೆಗೆ ಬಿಡಲಾಗಿದೆ; ಜೈ-ವಿರುದ್ಧ-ಬಿಹಾರ ರಾಜ್ಯ, (1993) 2 ಎಸ್‍ಸಿಸಿ 597 ಕಂಡಿಕೆಗಳು 13, 15 ಮತ್ತು 18.

ಮಣಿಪುರ ರಾಜ್ಯ ಲೋಕಸೇವಾ ಆಯೋಗದ ಅಧ‍್ಯಕ್ಷರ ವಿರುದ್ಧ ಮಾಡಿದ ಆಪಾದನೆಗಳ ಕುರಿತ ವಿಚಾರಣೆ ಮತ್ತು ವರದಿಯನ್ನು ವಿನಿಯಮಿಸುವ 317ನೇ ಅನುಚ್ಛೇದದ ಅಡಿಯಲ್ಲಿ ಮಾಡಿದ ಉಲ್ಲೇಖದಲ್ಲಿ, ಸರ್ವೋಚ್ಚ ನ್ಯಾಯಾಲಯವು, ಉಲ್ಲೇಖಕ್ಕೆ ಸಂಬಂಧಿಸಿದ ನೇರ ಸಾಕ್ಷ್ಯವನ್ನು ಉಚ್ಚ ನ್ಯಾಯಾಲಯದ ಪೀಠಾಸೀನ ನ್ಯಾಯಾಧೀಶರು ದಾಖಲಿಸಿಕೊಳ್ಳಬೇಕೆಂದು ನಿರ್ದೇಶಿಸಿದೆ; ಜೆಟಿ (1994) 2 ಎಸ್‍ಸಿ 63.

ರಾಜ್ಯ ಲೋಕಸೇವಾ ಆಯೋಗದ ಸದಸ್ಯರು ಅಧ್ಯಕ್ಷರಿಗೆ ಸಮಾನರಾಗಿರುವುದಿಲ್ಲ ಹಾಗೂ ಅಧ್ಯಕ್ಷರಿಗಿರುವಂಥ ಅಂಥದ್ದೇ ಸೌಲಭ್ಯಗಳನ್ನು ಕ್ಲೇಮು ಮಾಡುವಂತಿಲ್ಲ; ಬಿಹಾರ ಲೋಕಸೇವಾ ಆಯೋಗ-ವಿರುದ್ಧ-ಡಾ|| ಶಿವ ಜತನ್ ಠಾಕುರ್, ಜೆಟಿ (1994) ಎಸ್‍ಸಿ 681.

ಅನುಚ್ಛೇದ 318. ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯರು ಮತ್ತು ಸಿಬ್ಬಂದಿಗಳ ಸೇವಾ ಷರತ್ತುಗಳ ಬಗ್ಗೆ ವಿನಿಯಮಗಳನ್ನು ರಚಿಸಲು ಅಧಿಕಾರ.

ಒಕ್ಕೂಟಆಯೋಗದಅಥವಾಜಂಟಿಆಯೋಗದಸಂದರ್ಭದಲ್ಲಿರಾಷ್ಟ್ರಪತಿಯುಮತ್ತುಒಂದುರಾಜ್ಯಆಯೋಗದಸಂದರ್ಭದಲ್ಲಿಆರಾಜ್ಯದರಾಜ್ಯಪಾಲರುವಿನಿಯಮಗಳಮೂಲಕ,-

(ಎ) ಆಯೋಗದಸದಸ್ಯರಸಂಖ್ಯೆಯನ್ನುಮತ್ತುಅವರಸೇವಾಷರತ್ತುಗಳನ್ನುನಿರ್ಧರಿಸಬಹುದು; ಮತ್ತು

(ಬಿ) ಆಯೋಗದಸಿಬ್ಬಂದಿಯಸಂಖ್ಯೆಮತ್ತುಅವರಸೇವಾಷರತ್ತುಗಳಬಗ್ಗೆಉಪಬಂಧಕಲ್ಪಿಸಬಹುದು:

ಪರಂತು, ಲೋಕಸೇವಾಆಯೋಗದಸದಸ್ಯನಸೇವಾಷರತ್ತುಗಳನ್ನು, ಅವನನೇಮಕದತರುವಾಯಅವನಿಗೆಅನನುಕೂಲವಾಗುವಂತೆವ್ಯತ್ಯಸ್ತಗೊಳಿಸತಕ್ಕದ್ದಲ್ಲ.

ಅನುಚ್ಛೇದ333. ರಾಜ್ಯಗಳ ವಿಧಾನಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ ಅಥವಾ ನಾಮನಿರ್ದೇಶನ.

170ನೆಯ ಅನುಚ್ಫೇದದಲ್ಲಿ ಏನೇ ಇದ್ದಾಗ್ಯೂ, ಒಂದು ರಾಜ್ಯದ ರಾಜ್ಯಪಾಲರು ಆ ರಾಜ್ಯದ ವಿಧಾನಸಭೆಯಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಪ್ರಾತಿನಿಧ್ಯವು ಅವಶ್ಯವೆಂದು ಮತ್ತು ಆ ಸಭೆಯಲ್ಲಿ ಅದಕ್ಕೆ ಸಾಕಷ್ಟು ಪ್ರಾತಿನಿಧ್ಯವಿಲ್ಲವೆಂದು ಅಭಿಪ್ರಾಯಪಟ್ಟರೆ ಅವನು ಆ ಸಮುದಾಯದ ಒಬ್ಬ ಸದಸ್ಯನನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಬಹುದು.

ಅನುಚ್ಛೇದ 361. ರಾಷ್ಟ್ರಪತಿಗೆ ಮತ್ತು ರಾಜ್ಯಪಾಲರಿಗೆ ಹಾಗೂ ರಾಜಪ್ರಮುಖರಿಗೆ ಸಂರಕ್ಷಣೆ:

(1) ರಾಷ್ಟ್ರಪತಿಯು ಅಥವಾ ಒಂದು ರಾಜ್ಯದ ರಾಜ್ಯಪಾಲರು ಅಥವಾ ರಾಜಪ್ರಮುಖನು ತನ್ನ ಪದದ ಅಧಿಕಾರಗಳ ಚಲಾವಣೆಯ ಬಗ್ಗೆ ಮತ್ತು ಕರ್ತವ್ಯಗಳ ನೆರವೇರಿಕೆಯ ಬಗ್ಗೆ ಅಥವಾ ಆ ಅಧಿಕಾರಗಳ ಚಲಾವಣೆಯಲ್ಲಿ ಮತ್ತು ಕರ್ತವ್ಯಗಳ ನೆರವೇರಿಕೆಯಲ್ಲಿ ತಾನು ಮಾಡಿದ ಅಥವಾ ಮಾಡಿದಂತೆ ತಾತ್ಪರ್ಯವಾಗುವ ಯಾವುದೇ ಕಾರ್ಯದ ಬಗ್ಗೆ ಯಾವುದೇ ನ್ಯಾಯಾಲಯಕ್ಕೆ ಜವಾಬ್ದಾರನಾಗತಕ್ಕದ್ದಲ್ಲ:

ಪರಂತು, ರಾಷ್ಟ್ರಪತಿಯ ವರ್ತನೆಯು, 61ನೆಯ ಅನುಚ್ಫೇದದ ಮೇರೆಗಿನ ಆರೋಪದ ತನಿಖೆಗಾಗಿ ಸಂಸತ್ತಿನ ಯಾವುದಾದರೊಂದು ಸದನದಿಂದ ನೇಮಕಗೊಂಡ ಅಥವಾ ಹೆಸರಿಸಲಾದ ಯಾವುದೇ ನ್ಯಾಯಾಲಯದ, ನ್ಯಾಯಾಧಿಕರಣದ ಅಥವಾ ನಿಕಾಯದ ಪುನರವಲೋಕನಕ್ಕೆ ಒಳಪಡಬಹುದು:

ಮತ್ತೂ ಪರಂತು, ಈ ಖಂಡದಲ್ಲಿ ಇರುವುದು ಯಾವುದೂ, ಭಾರತ ಸರ್ಕಾರದ ಅಥವಾ ಒಂದು ರಾಜ್ಯ ಸರ್ಕಾರದ ವಿರುದ್ಧ ಸಮುಚಿತ ವ್ಯವಹರಣೆಗಳನ್ನು ಹೂಡಲು ಯಾರೇ ವ್ಯಕ್ತಿಗಿರುವ ಹಕ್ಕನ್ನು ನಿರ್ಬಂಧಿಸುವುದಾಗಿ ಅರ್ಥೈಸತಕ್ಕದ್ದಲ್ಲ.

(2) ರಾಷ್ಟ್ರಪತಿಯ ಅಥವಾ ಒಂದು ರಾಜ್ಯದ ರಾಜ್ಯಪಾಲರ ಪದಾವಧಿಯಲ್ಲಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ವ್ಯವಹರಣೆಗಳನ್ನು ಯಾವುದೇ ನ್ಯಾಯಾಲಯದಲ್ಲಿ ಹೂಡತಕ್ಕದ್ದಲ್ಲ ಅಥವಾ ಮುಂದುವರಿಸತಕ್ಕದ್ದಲ್ಲ.

(3) ರಾಷ್ಟ್ರಪತಿಯ ಅಥವಾ ಒಂದು ರಾಜ್ಯದ ರಾಜ್ಯಪಾಲರ ಪದಾವಧಿಯಲ್ಲಿ ಅವರನ್ನು ದಸ್ತಗಿರಿ ಮಾಡಲು ಅಥವಾ ಕಾರಾಗೃಹದಲ್ಲಿರಿಸಲು ಯಾವುದೇ ನ್ಯಾಯಾಲಯವು ಯಾವುದೇ ಆದೇಶಿಕೆಯನ್ನು ಹೊರಡಿಸತಕ್ಕದ್ದಲ್ಲ.

(4) ರಾಷ್ಟ್ರಪತಿಯಾಗಿ ಅಥವಾ ಒಂದು ರಾಜ್ಯದ ರಾಜ್ಯಪಾಲರಾಗಿ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ಅಥವಾ ವಹಿಸಿಕೊಂಡ ತರುವಾಯ ಅವರು ವೈಯಕ್ತಿಕವಾಗಿ ಮಾಡಿದ ಅಥವಾ ಮಾಡಿದಂತೆ ತಾತ್ಪರ್ಯವಾಗುವ ಯಾವುದೇ ಕಾರ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯ ಅಥವಾ ಅಂಥ ರಾಜ್ಯದ ರಾಜ್ಯಪಾಲರ ವಿರುದ್ಧ ಪರಿಹಾರವನ್ನು ಯಾವ ಸಿವಿಲ್ ವ್ಯವಹರಣೆಗಳಲ್ಲಿ ಕ್ಲೇಮು ಮಾಡಬಹುದೋ ಆ ಯಾವುವೇ ಸಿವಿಲ್ ವ್ಯವಹರಣೆಗಳನ್ನು ಅವರ ಪದಾವಧಿಯಲ್ಲಿ ಯಾವುದೇ ನ್ಯಾಯಾಲಯದಲ್ಲಿ, ಆ ವ್ಯವಹರಣೆಗಳ ಸ್ವರೂಪ, ಅದರ ವ್ಯಾಜ್ಯ ಕಾರಣ, ಅಂಥ ವ್ಯವಹರಣೆಗಳನ್ನು ಹೂಡುವ ಪಕ್ಷಕಾರನ ಹೆಸರು, ವರ್ಣನೆ, ನಿವಾಸಸ್ಥಾನ ಮತ್ತು ಅವನು ಕ್ಲೇಮು ಮಾಡುವ ಪರಿಹಾರ ಇವನ್ನು ತಿಳಿಸುವ ಲಿಖಿತ ನೋಟೀಸನ್ನು ರಾಷ್ಟ್ರಪತಿಗೆ ಅಥವಾ ಸಂದರ್ಭಾನುಸಾರ ಆ ರಾಜ್ಯಪಾಲರಿಗೆ ತಲುಪಿಸಿದ ಬಳಿಕ ಅಥವಾ ಕಚೇರಿಯಲ್ಲಿ ಕೊಟ್ಟ ಅನಂತರ, ಎರಡು ತಿಂಗಳು ಮುಗಿಯುವವರೆಗೆ ಹೂಡತಕ್ಕದ್ದಲ್ಲ.

ಅನುಚ್ಛೇದ 361ಎ. ಸಂಸತ್ತು ಮತ್ತು ರಾಜ್ಯ ವಿಧಾನಮಂಡಲಗಳ ವ್ಯವಹರಣೆಗಳ ಪ್ರಕಟಣೆಯ ಸಂರಕ್ಷಣೆ:

(1) ಸಂಸತ್ತಿನ ಯಾವುದೇ ಸದನದ ಅಥವಾ ಒಂದು ರಾಜ್ಯದ ವಿಧಾನಸಭೆಯ ಅಥವಾ ಸಂದರ್ಭಾನುಸಾರ ವಿಧಾನಮಂಡಲದ ಯಾವುದೇ ಸದನದ ಯಾವುದೇ ವ್ಯವಹರಣೆಗಳ ಬಗ್ಗೆ ಸಾರಭೂತವಾಗಿ ನಿಜವಾದ ವರದಿಯನ್ನು ವೃತ್ತಪತ್ರಿಕೆಯಲ್ಲಿ ಪ್ರಕಟಿಸಿದುದಕ್ಕೆ ಸಂಬಂಧಿಸಿದಂತೆ, ಆ ಪ್ರಕಟಣೆಯನ್ನು ದ್ವೇಷಪೂರ್ವಕವಾಗಿ ಮಾಡಲಾಗಿದೆಯೆಂದು ರುಜುವಾತುಪಡಿಸಿದ ಹೊರತು, ಯಾರೇ ವ್ಯಕ್ತಿಯು ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವ್ಯವಹರಣೆಗಳಿಗೆ ಗುರಿಯಾಗತಕ್ಕದ್ದಲ್ಲ:

ಪರಂತು, ಈ ಖಂಡದಲ್ಲಿರುವುದಾವುದೂ, ಸಂಸತ್ತಿನ ಯಾವುದೇ ಸದನದ ಅಥವಾ ಒಂದು ರಾಜ್ಯದ ವಿಧಾನಸಭೆಯ ಅಥವಾ ಸಂದರ್ಭಾನುಸಾರ ವಿಧಾನಮಂಡಲದ ಯಾವುದೇ ಸದನದ ರಹಸ್ಯ ಉಪವೇಶನದ ವ್ಯವಹರಣೆಗಳ ಯಾವುದೇ ವರದಿಯ ಪ್ರಕಟಣೆಗೆ ಅನ್ವಯವಾಗತಕ್ಕದ್ದಲ್ಲ.

 

(2) ವೃತ್ತಪತ್ರಿಕೆಯಲ್ಲಿ ಪ್ರಕಟಿಸಿದ ವರದಿಗಳ ಅಥವಾ ವಿಷಯಗಳ ಸಂಬಂಧದಲ್ಲಿ (1)ನೆಯ ಖಂಡವು ಅನ್ವಯವಾಗುವಂತೆಯೇ ಪ್ರಸಾರ ಕೇಂದ್ರದ ಮೂಲಕ ಬಿತ್ತರಿಸಿದ ಯಾವುದೇ ಕಾರ್ಯಕ್ರಮದ ಅಥವಾ ಸೇವೆಯ ಅಂಗವಾಗಿ, ವೈರ್‌ಲೆಸ್ ಟೆಲಿಗ್ರಾಫ್ ಮೂಲಕ ಪ್ರಸಾರ ಮಾಡಿದ ವರದಿಗಳ ಅಥವಾ ವಿಷಯಗಳ ಸಂಬಂಧದಲ್ಲಿಯೂ ಆ ಖಂಡವು ಅನ್ವಯವಾಗತಕ್ಕದ್ದು.

×
ABOUT DULT ORGANISATIONAL STRUCTURE PROJECTS