ಹೆಸರು
|
ಶ್ರೀ ಥಾವರ್ ಚಂದ್ ಗೆಹ್ಲೋಟ್
|
ಪದನಾಮ
|
ಘನತೆವೆತ್ತ ರಾಜ್ಯಪಾಲರು, ಕರ್ನಾಟಕ ರಾಜ್ಯ
|
ತಂದೆ ಹೆಸರು
|
ಶ್ರೀ ರಾಮ್ ಲಾಲ್ ಗೆಹ್ಲೋಟ್
|
ತಾಯಿ ಹೆಸರು
|
ಶ್ರೀಮತಿ ಸುಮನ್ ಬಾಯಿ
|
ಜನ್ಮದಿನಾಂಕ
|
18/05/1948
|
ಜನ್ಮಸ್ಥಳ
|
ರುಪೇಟ ಗ್ರಾಮ, ನಾಗಡ ತಾಲ್ಲೂಕು , ಉಜ್ಜಯಿನಿ ಜಿಲ್ಲೆ, ಮಧ್ಯಪ್ರದೇಶ
|
ಪತ್ನಿ
|
ಶ್ರೀಮತಿ ಅನಿತಾ ಗೆಹ್ಲೋಟ್
|
ಮಕ್ಕಳು
|
ಮೂವರು ಪುತ್ರರು ಹಾಗೂ ಓರ್ವ ಪುತ್ರಿ
|
ವಿದ್ಯಾರ್ಹತೆ
|
ಬಿ.ಎ. ವಿಕ್ರಂ ವಿಶ್ವವಿದ್ಯಾಲಯ, ಉಜ್ಜಯಿನಿ, ಮಧ್ಯಪ್ರದೇಶ
|
ಗೌರವ ಪದವಿ
|
ಮಧ್ಯಪ್ರದೇಶದ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ ಆರ್ ಅಂಬೇಡ್ಕರ್ ಸಾಮಾಜಿಕ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 2016 ರಲ್ಲಿ ಡಿ.ಲಿಟ್ ಪದವಿ ಪ್ರದಾನ
|
ವೃತ್ತಿ
|
ವ್ಯಾಪಾರ
|
ಮೂಲ ವಿಳಾಸ
|
11-ಶ್ರೀ ಮನೋಹರ್ ವಾಟಿಕಾ, ನಗ್ಡಾ ಜಂಕ್ಷನ್, ಉಜ್ಜಯಿನಿ ಜಿಲ್ಲೆ, ಮಧ್ಯಪ್ರದೇಶ -456335: ದೂರವಾಣಿ. : 07366- 246635 (ಆರ್)
|
ಈಗಿನ ವಿಳಾಸ
|
ರಾಜಭವನ, ರಾಜಭವನ ರಸ್ತೆ, ಬೆಂಗಳೂರು, ಕರ್ನಾಟಕ -560001
|
ರಾಜಕೀಯ ಜವಾಬ್ದಾರಿಗಳು
|
1962-77
|
ಸದಸ್ಯ, ಭಾರತೀಯ ಜನಸಂಘ
|
1977-80
|
ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಜನತಾ ಪಕ್ಷ, ಉಜ್ಜಯಿನಿ ಜಿಲ್ಲೆ (ಮಧ್ಯ ಪ್ರದೇಶ)
|
1982-85
|
ಸೆನೆಟ್ ಸದಸ್ಯ, ವಿಕ್ರಂ ವಿಶ್ವವಿದ್ಯಾಲಯ, ಉಜ್ಜಯಿನಿ (ಮಧ್ಯ ಪ್ರದೇಶ)
|
1983-84
|
ಕಾರ್ಯದರ್ಶಿ, ಯುವ ಮೋರ್ಚಾ, ಭಾರತೀಯ ಜನತಾ ಪಕ್ಷ, ಮಧ್ಯಪ್ರದೇಶ
|
1985-86
|
ಉಪಾಧ್ಯಕ್ಷ, ಯುವ ಮೋರ್ಚಾ, ಭಾರತೀಯ ಜನತಾ ಪಕ್ಷ, ಮಧ್ಯಪ್ರದೇಶ
|
1986-88
|
ಅಧ್ಯಕ್ಷರು, ಭಾರತೀಯ ಜನತಾ ಪಕ್ಷ, ರತ್ಲಾಮ್ ಜಿಲ್ಲೆ, ಮಧ್ಯ ಪ್ರದೇಶ
|
1988-89
|
ಅಧ್ಯಕ್ಷರು, ಭಾರತೀಯ ಜನತಾ ಪಕ್ಷ, ಎಸ್ ಸಿ ಮೋರ್ಚಾ, ಮಧ್ಯಪ್ರದೇಶ
|
2002-04
|
ರಾಷ್ಟ್ರೀಯ ಕಾರ್ಯದರ್ಶಿ, ಭಾರತೀಯ ಜನತಾ ಪಕ್ಷ, ಮಧ್ಯಪ್ರದೇಶ
|
2004-06
|
ರಾಷ್ಟ್ರೀಯ ಉಪಾಧ್ಯಕ್ಷ, ಭಾರತೀಯ ಜನತಾ ಪಕ್ಷ ಮತ್ತು ಈಶಾನ್ಯ ರಾಜ್ಯಗಳ ಉಸ್ತುವಾರಿ (ಅಸ್ಸಾಂ ಹೊರತುಪಡಿಸಿ)
|
2006-14
|
· ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಭಾರತೀಯ ಜನತಾ ಪಕ್ಷ (4 ನೇ ಅವಧಿ)
· ಉಸ್ತುವಾರಿಗಳು, ಕರ್ನಾಟಕ, ದೆಹಲಿ ಮತ್ತು ಉತ್ತರಾಖಂಡ ರಾಜ್ಯಗಳು ಮತ್ತು ರಾಷ್ಟ್ರೀಯ ಎಸ್ ಸಿ ಮೋರ್ಚಾ, ಬಿಜೆಪಿ
|
2006 ರಿಂದ 07 ಜುಲೈ,2021
|
ಸದಸ್ಯರು, ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ, ಭಾರತೀಯ ಜನತಾ ಪಕ್ಷ, (5ನೇ ಅವಧಿ).
|
ಶಾಸಕಾಂಗ ಮತ್ತು ಸಂಸತ್ತಿನ ಜವಾಬ್ದಾರಿಗಳು
|
1980-84, 1990-92,
1993-96
|
ವಿಧಾನಸಭಾ ಸದಸ್ಯರು, ಆಲೋಟ್ ವಿಧಾನ ಸಭಾ ಕ್ಷೇತ್ರ, ಮಧ್ಯ ಪ್ರದೇಶ (3 ಅವಧಿ)
|
1982
|
ದೆಹಲಿಯ ಬ್ಯೂರೋ ಆಫ್ ಪಾರ್ಲಿಮೆಂಟರಿ ಸ್ಟಡೀಸ್ ಅಂಡ್ ಟ್ರೈನಿಂಗ್ (B.P.S.T.) ನಲ್ಲಿ ಮಧ್ಯಪ್ರದೇಶದ ವಿಧಾನಸಭೆಯ ಪ್ರತಿನಿಧಿಯಾಗಿದ್ದರು.
|
1990-92
|
ರಾಜ್ಯ ಸಚಿವ, ಜಲ ಸಂಪನ್ಮೂಲ, ನರ್ಮದಾ ಕಣಿವೆ ಅಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಅಂತ್ಯೋದಯ ಕಾರ್ಯಕ್ರಮ ಮತ್ತು 20 ಅಂಶಗಳ ಕಾರ್ಯಕ್ರಮದ ಅನುಷ್ಠಾನ, ಮಧ್ಯಪ್ರದೇಶ ಸರ್ಕಾರ
|
1995-96
|
1996 ರಲ್ಲಿ ಮಧ್ಯಪ್ರದೇಶ ವಿಧಾನಸಭೆಯಿಂದ ಅತ್ಯುತ್ತಮ ಶಾಸಕರ ಪ್ರಶಸ್ತಿ ಪ್ರದಾನ
|
1993-96
|
ಸದಸ್ಯರು, ಅಂದಾಜುಗಳ ಸಮಿತಿ ವಿಧಾನಸಭಾ ಮಧ್ಯಪ್ರದೇಶ
|
1996-97,1998-99,1999-2004, 2004-09
|
ಸಂಸದರು, ಲೋಕಸಭಾ(ನಾಲ್ಕು ಬಾರಿ)
|
1996-97 ಮತ್ತು 1999-2000
|
ಸದಸ್ಯರು, ಕೃಷಿ ಮತ್ತು ಸಮಾಲೋಚನಾ ಸಮಿತಿಯ ಶಾಶ್ವತ ಸಮಿತಿ, ಕಾರ್ಮಿಕ ಸಚಿವಾಲಯ
|
1996-97, 1998-99, 1999-2000 &
2000-01
|
ಸದಸ್ಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ
|
1998-99
|
ಸದಸ್ಯರು, ಕಾರ್ಮಿಕ ಮತ್ತು ಕಲ್ಯಾಣ ಸಂಸದೀಯ ಶಾಶ್ವತ ಸಮಿತಿ, ಕೈಗಾರಿಕಾ ಸಚಿವಾಲಯದ ಸಮಾಲೋಚನಾ ಸಮಿತಿ
|
1999
|
ವಿಪ್, ಬಿ.ಜೆ.ಪಿ. ಸಂಸದೀಯ ಪಕ್ಷ, ಲೋಕಸಭಾ
|
2000-01
|
ಸದಸ್ಯರು, ಮಹಿಳಾ ಸಬಲೀಕರಣ ಸಮಿತಿ
|
2000-04
|
ಸದಸ್ಯರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿ ಮತ್ತು ವ್ಯಾಪಾರ ಸಲಹಾ ಸಮಿತಿ
|
2004-09
|
ಸದಸ್ಯರು, ಅಧಿಕೃತ ಭಾಷೆ ಮತ್ತು ಶಾಶ್ವತ ಕಾರ್ಮಿಕ ಸಮಿತಿ
|
2012 to 07 ಜುಲೈ, 2021
|
ರಾಜ್ಯಸಭಾ ಸದಸ್ಯರು (ಮಧ್ಯಪ್ರದೇಶದಿಂದ) (2 ಅವಧಿ)
|
May, 2012 - May, 2014
|
ಸದಸ್ಯರು, ಕಾರ್ಮಿಕ ಕಾಯಂ ಸಮಿತಿ
ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ
|
August, 2012 - May, 2014
|
ಸದಸ್ಯರು, ರಸ್ತೆ ಸಾರಿಗೆ ಸಚಿವಾಲಯ ಮತ್ತು ಹೆದ್ದಾರಿಗಳ ಸಮಾಲೋಚನಾ ಸಮಿತಿ
|
August, 2012 - 2014
|
ಸದಸ್ಯರು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ರಚನೆಯಾಗಿರುವ ಕೇಂದ್ರ ಸಲಹಾ ಸಮಿತಿ
|
26 May, 2014 to 30 May, 2019
|
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವರು, ಭಾರತ ಸರ್ಕಾರ
|
January, 2015 to 07 July, 2021
|
ವಿಶೇಷ ಆಹ್ವಾನಿತ ಸದಸ್ಯರು, ನೀತಿ ಆಯೋಗ
|
30 May, 2019 to 07 July, 2021
|
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವರು, ಸರ್ಕಾರ ಭಾರತದ
|
Since 11 July, 2021
|
ರಾಜ್ಯಪಾಲರು, ಕರ್ನಾಟಕ ರಾಜ್ಯ
|
ಕಾರ್ಮಿಕ ಕ್ಷೇತ್ರದಲ್ಲಿ ಕಾರ್ಯ
|
· 1965-70ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿರುವ ನಾಗ್ಡಾ ಜಂಕ್ಷನ್ ನಲ್ಲಿ ಬಿರ್ಲಾ ಉದ್ಯೋಗ ಗ್ರಾಸಿಂ ಕೈಗಾರಿಕೆಯಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಣೆ
· 1965-75, ಗ್ರಾಸಿಂ ಇಂಜಿನಿಯರಿಂಗ್ ಶ್ರಮಿಕ್ ಸಂಘದಲ್ಲಿ ಕಾರ್ಯದರ್ಶಿಯಾಗಿ ಮತ್ತು ರಾಸಾಯನಿಕ ಶ್ರಮಿಕ್ ಸಂಘದಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದಾರೆ.
|
ಚಳುವಳಿ
|
· 1966 ರಿಂದ 1970 ರವರೆಗೆ, ಹಲವು ಬಾರಿ ವಿವಿಧ ಚಳುವಳಿಗಳಲ್ಲಿ ನ್ಯಾಯಾಂಗ ಬಂಧನ ಮತ್ತು ಜೈಲುವಾಸ ಮಾಡಿದ್ದಾರೆ.
· 1971 ರಲ್ಲಿ, ಉಜ್ಜಯಿನಿಯ ಭೈರವಗಡ ಜೈಲಿನಲ್ಲಿ 10 ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದರು.
· ಆಂತರಿಕ ಭದ್ರತಾ ಕಾಯಿದೆ ಅಡಿಯಲ್ಲಿ ತುರ್ತು ಪರಿಸ್ಥಿತಿಯಲ್ಲಿ (1975-76) ಉಜ್ಜಯಿನಿಯ ಭೈರವಗಡ ಜಿಲ್ಲಾ ಕಾರಾಗೃಹಕ್ಕೆ ಹೋದರು.
· ಉಜ್ಜಯಿನಿ, ಭೋಪಾಲ್ ಮತ್ತು ದೆಹಲಿಯಲ್ಲಿ ನಡೆದ ರಾಜಕೀಯ ಆಂದೋಲನಗಳಿಂದಾಗಿ ಅನೇಕ ಬಾರಿ ನ್ಯಾಯಾಂಗ ಬಂಧನದಲ್ಲಿದ್ದರು.
|
ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆ ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ
|
· ಮಧ್ಯಪ್ರದೇಶ ವಿಧಾನಸಭೆಯಿಂದ ಪ್ರಕಟಿಸಲಾದ ತ್ರೈಮಾಸಿಕ ಜರ್ನಲ್ - ವಿಧಾಯನಿಯಲ್ಲಿ ಇವರು ಲೇಖನಗಳು ಪ್ರಕಟವಾಗಿವೆ.
· ಬಲೈ ಸಮಾಜದ ಮೂಲಕ ಸಮಾಜದಲ್ಲಿನ ಸಾಮಾಜಿಕ ಮತ್ತು ಸಾಂಪ್ರದಾಯಿಕ ಅನಿಷ್ಟಗಳನ್ನು/ಆಚರಣೆಗಳನ್ನು ನಿಲ್ಲಿಸಲು ಪ್ರಯತ್ನಗಳನ್ನು ಮಾಡಿದ್ದಾರೆ.
· 1960 ರಿಂದ ಸಮಾಜದ ಉನ್ನತಿ ಮತ್ತು ಕಲ್ಯಾಣದ ಕೆಲಸಗಳಲ್ಲಿ ಸಕ್ರಿಯವಾಗಿದ್ದರು.
· 1962 ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು.
· ಈಜು, ಕಬಡ್ಡಿ, ವಾಲಿಬಾಲ್ ಮತ್ತು ಜಿಮ್ನಾಸ್ಟಿಕ್ಸ್ ನಲ್ಲಿ ಭಾಗವಹಿಸಿದ್ದಾರೆ
· ಪಧಾಧಿಕಾರಿ, ಕಬಡಿ ಅಸೋಸಿಯೇಷನ್, ಶಿವಾಜಿ ಕ್ರೀಡಾ ಮಂಡಳಿ, ನಾಗ್ಡಾ ತಾಲ್ಲೂಕು ಉಜ್ಜಯಿನಿ ಜಿಲ್ಲೆ
· ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಸಕ್ತಿ
· 1991 ರಲ್ಲಿ ಅಲೋಟ್ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕ್ಷರತೆಯನ್ನು ಉತ್ತೇಜಿಸಲು 11 ದಿನಗಳಲ್ಲಿ 310 ಕಿ.ಮೀ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದರು.
|
ವಿದೇಶ ಪ್ರವಾಸ
|
· ಯುಎಸ್ಎ: 1998 ಮತ್ತು 2007 ರಲ್ಲಿ ವಿಶ್ವಸಂಸ್ಥೆಗೆ ಭಾರತೀಯ ಸಂಸದೀಯ ನಿಯೋಗದ ಸದಸ್ಯರಾಗಿ ಪ್ರತಿನಿಧಿಸಿದ್ದಾರೆ.
· ಡರ್ಬನ್, ದಕ್ಷಿಣ ಆಫ್ರಿಕಾ, 2001: ವರ್ಣ ತಾರತಮ್ಯದ ವಿರುದ್ಧ ನಡೆದ ಸಮ್ಮೇಳನದಲ್ಲಿ ಭಾಗಿ.
· ಚೀನಾ: 2012 ರಲ್ಲಿ ಬಿಜೆಪಿ ನಿಯೋಗದೊಂದಿಗೆ ಅಧ್ಯಯನ ಪ್ರವಾಸ
· ಆಸ್ಟ್ರೇಲಿಯಾ: 2013 ರಲ್ಲಿ ಭಾರತೀಯ ಸಂಸದೀಯ ನಿಯೋಗದಿಂದ ಅಧ್ಯಯನ ಪ್ರವಾಸ ಕೈಗೊಂಡಿದ್ದರು.
· ಜೋರ್ಡಾನ್, ಇಸ್ರೇಲ್ ಮತ್ತು ಫಿಲಿಸ್ಟೈನ್: 2015 ರಲ್ಲಿ ಭಾರತದ ರಾಷ್ಟ್ರಪತಿಯೊಂದಿಗೆ ಅಧಿಕೃತ ಭೇಟಿಗಾಗಿ ತೆರಳಿದ್ದರು.
· ಅಕ್ಟೋಬರ್, 2016ರಲ್ಲಿ ಎಡಿನ್ಬರ್ಗ್ (ಸ್ಕಾಟ್ಲೆಂಡ್) ನಲ್ಲಿ 23 ನೇ ಅಂತರಾಷ್ಟ್ರೀಯ ಪುನರ್ವಸತಿ ಸಮಾವೇಶದಲ್ಲಿ ಭಾಗವಹಿಸಿದ್ದರು ಮತ್ತು ಲಂಡನ್ ನ ಡಾ. ಅಂಬೇಡ್ಕರ್ ಸ್ಮಾರಕಕ್ಕೆ ಭೇಟಿ ನೀಡಿದ್ದರು.
· 2017ರ ನವೆಂಬರ್ 27ರಿಂದ ಡಿಸೆಂಬರ್ 01 ರವರೆಗೆ ಬಿಜಿಂಗ್ ನಲ್ಲಿ ನಡೆದ ಏಷ್ಯನ್ ಮತ್ತು ಪೆಸಿಫಿಕ್ ಡಿಕೇಡ್ ಪಿಡಬ್ಲ್ಯೂಡಿಗಳ ಮಿಡ್‌ಪಾಯಿಂಟ್ ವಿಮರ್ಶೆಯ ಉನ್ನತ ಮಟ್ಟದ ಅಂತರ್ ಸರ್ಕಾರಿ ಸಭೆಯಲ್ಲಿ ಭಾಗವಹಿಸಿದರು.
· 2018ರ ಜುಲೈ 23-24ರಂದು ಲಂಡನ್‌ನಲ್ಲಿ ಯುನೈಟೆಡ್ ಕಿಂಗ್ ಡಂ ಮತ್ತು ಅಂತಾರಾಷ್ಟ್ರೀಯ ಅಂಗವೈಕಲ್ಯ ಅಲೆನ್ಸ್‌ನೊಂದಿಗೆ ಕೀನ್ಯಾ ಗಣರಾಜ್ಯವು ಜಂಟಿಯಾಗಿ ಆಯೋಜಿಸಿದ ಜಾಗತಿಕ ಅಂಗವೈಕಲ್ಯ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
· 2018ರ ಸೆಪ್ಟೆಂಬರ್ 5-7 ರಲ್ಲಿ ಕೊರಿಯಾದ ಸಿಯೋಲ್‌ನಲ್ಲಿ ಜಾಗತಿಕ ವಯಸ್ಸಾದ ಮತ್ತು ಹಿರಿಯರ ಮಾನವ ಹಕ್ಕುಗಳ ಕುರಿತು 3 ನೇ ಏಷ್ಯನ್-ಯುರೋಪ್ ಸಭೆಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
· 2019ರ ಜೂನ್ 6-8ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಜಾಗತಿಕ ಅಂಗವೈಕಲ್ಯ ಶೃಂಗಸಭೆ -2019 ರಲ್ಲಿ ಭಾಗವಹಿಸಿದ್ದರು
|