ಶ್ರೀ ಥಾವರ್‌ ಚಂದ್‌ ಗೆಹ್ಲೋಟ್
ಘನತೆವೆತ್ತ ರಾಜ್ಯಪಾಲರು

Back
ಹಿಂದಿನ ರಾಜ್ಯಪಾಲರು

 

                     

 

         ಶ್ರೀ ವಜುಭಾಯಿ ರುಡಾಭಾಯಿ ವಾಲಾ

   (01-09-2014 ರಿಂದ 10-07-2021ರ ವರೆಗೆ)

 

 

 

ಶ್ರೀ ವಜುಭಾಯಿ ವಾಲಾ ಅವರು ಹುಟ್ಟು ನೇತಾರರು. ಅವರು ತಮ್ಮ ಶಾಲಾ ದಿನಗಳಲ್ಲಿಯೇ ಆರ್‌.ಎಸ್‌. ಎಸ್‌ ನ ಸ್ವಯಂ ಸೇವಕರಾಗಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.ತಮ್ಮ ಸಹಪಾಠಿಗಳ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಶಾಲಾ ದಿನಗಳಲ್ಲಿ ತಮ್ಮ ಮುಂದಾಳತ್ವದ ಗುಣಗಳನ್ನು ಪ್ರದರ್ಶಿಸಿದರು. ಈ ರೀತಿ ಬಾಲ್ಯದಿಂದಲೇ ಅವರೊಬ್ಬ ನಾಯಕರಾಗಿ ಹೊರಹೊಮ್ಮಿದರು.ತಮ್ಮ ಕಾಲೇಜು ದಿನಗಳಲ್ಲಿ ಅವರು ಜಿಮ್ಚಾನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಶ್ರೀ ವಜುಭಾಯಿ ವಾಲಾ ಅವರು ಒಬ್ಬ ನಾಯಕರಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಹೆಚ್ಚಿನಪ್ರಾಶಸ್ತ್ಯವನ್ನು ನೀಡುತ್ತಾರೆ. ಅವರಿಗೆ ಸಮಾಜದ ದೀನ ದಲಿತ ಹಾಗೂ ನಿರ್ಗತಿಕರ ಕಡೆಗೆ ಸಹಾನುಭೂತಿ ಹಾಗೂ ಕರುಣೆಇದೆ.ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ ಹಾಗೂ ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಾರೆ. ಅವರು ತಮ್ಮ ಉದಾರ, ವಿನಮ್ರ, ವಾತ್ಸಲ್ಯಭರಿತ ಹಾಗೂ ಸೌಜನ್ಯಪೂರ್ಣ ವರ್ತನೆಯಿಂದ ಜನರ ಮನದಲ್ಲಿ ಒ೦ದು ವಿಶೇಷ ಸ್ಥಾನವನ್ನು ಪಡೆದಿದ್ದಾರೆ.ಶ್ರೀ ವಜುಭಾಯಿ ವಾಲಾ ಅವರಲ್ಲಿರುವ ಸಂಯಮ ಗುಣದಿಂದಾಗಿ ಅವರು ಕೋಪದ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿದ್ದಾರೆ. ಆದುದರಿಂದ ಅವರನ್ನು ಸಂಯಮ ಮತ್ತು ಕರುಣೆಯ ಮೂರ್ತಿಯೆಂದು ಕರೆಯಬಹುದು. ಈ ಗುಣಗಳೊಂದಿಗೆ ಅವರು ಸದಾ ಸೇವೆಯಲ್ಲಿ ತೊಡಗಿರುತ್ತಾರೆ. ಅವರ ಸರಳ ಮತ್ತು ಸ್ನೇಹಪರ ಸ್ವಭಾದಿ೦ದಾಗಿ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ.ಶ್ರೀ ವಜುಭಾಯಿ ವಾಲಾ ಅವರು ಸಾರ್ವಜನಿಕ ನಾಯಕರಾಗಿ, 1971 ರಿಂದ ಭಾರತದ ಒಂದು ಪ್ರಮುಖ ಸಹಕಾರಿ ಬ್ಯಾಂಕ್‌-ರಾಜಕೋಟ್‌ ನಾಗರಿಕ ಸಹಕಾರಿ ಬ್ಯಾಂಕ್‌ನ ಸಾ೦ಗತ್ಯದಲ್ಲಿದ್ದಾರೆ. ಅವರು 1975-76, 1981-82 ಮತ್ತು 1987 ರಿಂದ 1990ರ ಅವಧಿಯಲ್ಲಿ ಈ ಬ್ಯಾಂಕಿನ ಅಧ್ಯಕ್ಷರಾಗಿದ್ದರು.ಅವರ ಅಧಿಕಾರಾವಧಿಯಲ್ಲಿ ಅವರಿಗೆ ಸಹಕಾರಿ ಕಾನೂನುಗಳ ಬಗ್ಗೆ ಇದ್ದ ಅಗಾಧ ಜ್ಞಾನದ ಮೂಲಕ ಬ್ಯಾಂಕಿನ ಸೇವೆಯ ಯೋಜನೆ, ಸಂಘಟನೆ ಹಾಗೂ ಅಭಿವೃದ್ಧಿಯನ್ನು ಮಾಡಿದರು. ಇದರಿಂದಾಗಿ ಅವರು ಬ್ಯಾಂಕಿನ ಎಲ್ಲಾ ಸದಸ್ಯರು ಹಾಗೂ ಗ್ರಾಹಕರ ನಡುವೆ ಬಹಳ ಜನಪ್ರಿಯರಾದರು.ಶ್ರೀ ವಜುಭಾಯಿ ವಾಲಾ ಅವರು ರಾಜಕೋಟ್‌ ನಗರದ ವಾರ್ಡ ಸಂಖ್ಯೆ-6ರಿಂದ 1975ರಲ್ಲಿ ಕೌನ್ಸಿಲರ್‌ ಆಗಿ ಚುನಾಯಿತರಾಗಿ 1993ರವರೆಗೆ ಜನಸೇವೆಯನ್ನು ಮುಂದುವರೆಸಿದರು. ಈ ಅವಧಿಯಲ್ಲಿಅವರು ಮನರಂಜನೆ ಮತ್ತು ಸಮಾಜಕಲ್ಯಾಣ ಸಮಿತಿಯ ಅಧ್ಯಕ್ಷರೂ ಆಗಿದ್ದರು.1975ರ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಅವರು 11 ತಿಂಗಳು ಸಾಬರಮತಿಯ ಸೆರೆಮನೆಯಲ್ಲಿದ್ದರು.ಅವರು 1983-88 ಮತ್ತು 1991-93ರ ಅವಧಿಗೆ ರಾಜಕೋಟ್‌ ನಗರಪಾಲಿಕೆಯ ಮೇಯರ್‌ ಆಗಿದ್ದು, ರಾಜ್‌ಕೋಟ್‌ ನಗರದ ಜನತೆಯ ಸೇವೆಯನ್ನು ಸಲ್ಲಿಸಿದರು. 1985 ರಲ್ಲಿ ಅವರು ರಾಜಕೋಟ್‌ -- 2 ಮತ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1986ರಲ್ಲಿ ನೀರಿನ ಹಾಹಾಕಾರ ಉಂಟಾದಾಗಅವರು ಪ್ರಶಂಸನೀಯ ಕಾರ್ಯವನ್ನು ಕೈಗೊಂಡರು. ಒಬ್ಬ ಸಮರ್ಥ ಮೇಯರ್‌ ಹಾಗೂ ಶಾಸಕರಾಗಿ ರಾಜಕೋಟ್‌ನಲ್ಲಿ ಉಂಟಾದ ನೀರಿನ ಸಮಸ್ಯೆಯನ್ನು ರಾಜ್ನ್ಞ ಸರ್ಕಾರದ ಮುಂದೆ ವಿಶ್ವಾಸಾರ್ಹವಾಗಿ ಪ್ರತಿಪಾದಿಸಿ, ಅಂತಿಮವಾಗಿ ರಾಜ್‌ಕೋಟ್‌ ನಗರದ ಹತ್ತಿರದ. ಮತ್ತು ದೂರದ ಮೂಲಗಳಿಂದ ನೀರು ಪೂರೈಸುವ ವ್ಯವಸ್ಥೆಯನ್ನು ಮಾಡುವುದರಲ್ಲಿ ಸಫಲರಾದರು... ಈ ನಿರ್ಣಾಯಕ ಸನ್ನಿವೇಶದ ಎರುದ್ಧ ಹೋರಾಡಿ, ನೀರಿನ ಸಮಸ್ಯೆಯ ಕಾರಣದಿಂದಾಗಿ ನಗರವನ್ನು ತೊರೆಯದಿರುವಂತೆ. ರಾಜ್‌ಕೋಟ್‌ನ ಜನತೆಗೆ ನೀಡಿದ್ದ ವಚನವನ್ನು ಪರಿಪಾಲಿಸಿದರು. ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದ ಕಾರಣದಿಂದಾಗಿ ಇವರು ರಾಜ್‌ಕೋಟ್‌ ಜನತೆಯಲ್ಲಿ ಅತ್ಯಂತ ಜನಪ್ರಿಯರಾದರು. ರಾಜ್‌ಕೋಟ್‌ ನಗರದ ಹತ್ತಿರ ಒ೦ದು ದೂರದರ್ಶನ ಕೇಂದ್ರವನ್ನು ಪ್ರಾರಂಭಿಸುವ ಪ್ರಸ್ತಾವನೆಯು ಶ್ರೀ ವಜುಭಾಯಿ ವಾಲಾ ಅವರ ಗಮನಕ್ಕೆ ಬಂದಿತು. ಅವರು ಇದನ್ನು ನಗರದ ಅಭಿವೃದ್ಧಿಯ ಅವಕಾಶವೆಂದು ಭಾವಿಸಿದರು. ಮೇಯರ್‌ ಆಗಿ ಇವರು ನೇತೃತ್ವವನ್ನು ವಹಿಸಿಕೊಂಡು, 12ನೇ ಏಪ್ರಿಲ್‌ 1983ರಂದು ರಾಜ್‌ಕೋಟ್‌ ನಗರಪಾಲಿಕೆಯಲ್ಲಿ ನಿರ್ಣಯವನ್ನು ಮಂಡಿಸಿ, ಅನುಮೋದಿಸಿದರು. ಗಮನಾರ್ಹವಾದ ಸಂಗತಿಯೆಂದರೆ, 24 ಗ೦ಟೆಗಳೊಳಗೆ 37,0000 ಘನ ಮೀಟರ್‌ಗಳ ಅಳತೆಯ ಭೂಮಿಯನ್ನು ದೂರದರ್ಶನ ಕೇಂದ್ರಕ್ಕೆ ಶುಲ್ಕರಹಿತವಾಗಿ ಹಸ್ತಾಂತರ ಮಾಡಿದರು. ಇವರ ಪ್ರಾಮಾಣಿಕ ಪ್ರಯತ್ನದಿಂದಾಗಿ ರಾಜ್‌ಕೋಟ್‌ ನಗರದಲ್ಲಿ ದೂರದರ್ಶನ ಕೇಂದ್ರ ಸ್ಥಾಪಿಸಲ್ಪಟ್ಟಿತು. ಕ್ರಿಕೆಟ್‌ ಸ್ಪೇಡಿಯ೦ ಅನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಶ್ರೀ ವಜುಭಾಯ್‌ ವಾಲಾರವರು ದಿನಾಂಕ: 9ನೇ ಅಕ್ಟೋಬರ್‌ 1984ರಂದು ಅನುಮೋದಿಸಿದರು. ಅವರು ರಾಜ್‌ಕೋಟ್‌ ನಗರದ ರೇಸ್‌ಕೋರ್ಸ್‌ ಪ್ರದೇಶದಲ್ಲಿ 67,500 ಸ್ಕ್ವೇರ್‌ ಮೀಟರ್‌ಗಳ ಭೂಮಿಯನ್ನು ಮಂ೦ಜೂರು ಮಾಡಿದರು. ಇದರೊಂದಿಗೆ ಪಾರ್ಕಿಂಗ್‌ ಸೌಲಭ್ಯದ ಸಲುವಾಗಿ 10 ಎಕರೆ ಭೂಮಿಯನ್ನು ಮೀಸಲಿರಿಸಿದರು.ಇವರು ರಾಜಕೋಟ್‌ ನಾಗರಿಕ ಪೂರೈಕೆ ಸಲಹಾ ಸಮಿತಿ ಮತ್ತು ಗುಜರಾತ್‌ ರಾಜ್ಯ ಸಾರಿಗೆ ಪ್ರಾಧಿಕಾರ ಸಮಿತಿಯ ಸದಸ್ಯರಾಗಿದ್ದರು. ಪ್ರಪ್ರಥಮ ಬಾರಿಗೆ ಇವರು ರಾಜಕೋಟ್‌ ನಗರ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಿ, 1985 ರಲ್ಲಿ 7ನೇ ಗುಜರಾತ್‌ ವಿಧಾನಸಭೆಗೆ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದರು. 1985 ರಲ್ಲಿ ಅವರು ಗುಜರಾತ್‌ ವಿಧಾನಸಭೆಯ ಆಯವ್ಯಯ ಸಮಿತಿಯ ಸದಸ್ಯರಾಗಿದ್ದರು. ಅಲ್ಲಿಂದ ಅವರು ಸತತವಾಗಿ ಎಂಟು, ಒಂಭತ್ತು , ಹತ್ತು, ಹನ್ನೊಂದು, ಹನ್ನೆರಡು ಮತ್ತು ಹದಿಮೂರನೇ ವಿಧಾನ ಸಭೆಯ ಸದಸ್ಯರಾಗಿ 1985 ರಿಂದ 2012ರ ವರೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ರೀತಿ ರಾಜ್‌ಕೋಟ್‌ ವಿಧಾನ ಸಭಾ ಕ್ಷೇತ್ರದಿಂದ ಏಳು ಬಾರಿ ಸತತವಾಗಿ ಶಾಸಕರಾಗಿ ಆಯ್ದೆಯಾದರು.1990 ರಿಂದ 2012 ರ ಅವಧಿಯಲ್ಲಿ ಅವರು ಗುಜರಾತ್‌ ರಾಜ್ಯ ಸರ್ಕಾರದ ಕೆಳಕಂಡ ವಿವಿಧ ಸಚಿವ ಖಾತೆಗಳ ಸಚಿವ ಪದವಿಯನ್ನು ಉತ್ತಮವಾಗಿ ನಿರ್ವಹಿಸಿ, ಗುಜರಾತ್‌ನ ಜನತೆಯ ಕಲ್ಯಾಣಕ್ಕಾಗಿ ಗಮನಾರ್ಹವಾದ ಕೊಡುಗೆಯನ್ನು ನೀಡಿದ್ದಾರೆ.

 

         ಕ್ರಸಂ. ‌                                                 ಹೊಂದಿದ್ದ ಸಚಿವ ಖಾತೆಗಳು ಅವಧಿ
            1                                   ನಗರಾಭಿವೃದ್ಧಿ ಹಾಗೂ ವಸತಿ ಸಚಿವರು 1990 ರಿಂದ 1990
            2                                   ಇಂಧನ, ಪೆಟ್ರೊಕೆಮಿಕಲ್ಸ್‌ ಮತ್ತು ಸಹಕಾರ ಸಚಿವರು 1995
            3                                  ಹಣಕಾಸು ಮತ್ತು ಇಂಧನ ಸಚಿವರು 1995 ರಿಂದ 1996
            4                                 ಹಣಕಾಸು, ಕಂದಾಯ ಮತ್ತು ಪೆಟ್ರೊಕೆಮಿಕಲ್ಸ್‌ ಸಚಿವರು 1998 ರಿಂದ 2001
            5                                ಹಣಕಾಸು ಸಚಿವರು 2002 ರಿಂದ 2005
            6                                 ಹಣಕಾಸು ಸಚಿವರು 13-12-2006 ರಿಂದ 25-12-2007
            7                                  ಹಣಕಾಸು, ಕಾರ್ಮಿಕ ಮತ್ತು ಉದ್ಯೋಗ, ಸಾರಿಗೆ ಸಚಿವರು 04-01-2008 ರಿಂದ 26-12-2012

 

1996-1998 ಮತ್ತು 2005-2006ರ ಅವಧಿಯಲ್ಲಿ ಭಾರತೀಯ ಜನತಾ ಪಕ್ಷ, ಗುಜರಾತ್‌ನ ಅಧ್ಯಕ್ಷ ಪದವಿಯ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಈ ರೀತಿ ಎರಡು ಬಾರಿ ಗುಜರಾತ್‌ನ ಭಾರತಿಯ ಜನತಾ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ನಗರಾಭಿವೃದ್ದಿ ವ್ಯವಹಾರಗಳ ಬಗ್ಗೆ ಅವರು ಹೊಂದಿದ್ದ ಆಳವಾದ ಜ್ಞಾನದಿ೦ದಾಗಿ ನಗರಾಭಿವೃದ್ಧಿ ಖಾತೆಯ ಅಭಿವೃದ್ಧಿಗಾಗಿ ಅಪಾರ ಕೊಡುಗೆಯನ್ನು ನೀಡಿರುತ್ತಾರೆ.ಅವರು ಕಂದಾಯ ಸಚಿವರಾಗಿದ್ದಾಗ ನಗರ ಭೂ ಪರಿಮಿತಿ ಕಾಯಿದೆಯನ್ನು ರದ್ದುಗೊಳಿಸಿದರು. ಪ್ರಾಕೃತಿಕ ವಏಿಕೋಪಗಳಾದಂತಹ ಭೂಕಂಪ ಮತ್ತು ಬರಗಾಲದಂತಹ ಸಂದರ್ಭಗಳಲ್ಲಿ ಕಂದಾಯ ಮತ್ತು ಹಣಕಾಸು ಸಚಿವರಾಗಿ ಅವರು ಶ್ಲಾಘನೀಯ ಸೇವೆಯನ್ನು ಸಲ್ಲಿಸಿದ್ದಾರೆ. ಮೌಲ್ಯಾಧಾರಿತ ತೆರಿಗೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಉನ್ನತಾಧಿಕಾರ ಸಮಿತಿಯ ಸಭೆಯ ಕಲಾಪಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ಅವರ ಪ್ರಯತ್ನಗಳಿಂದಾಗಿಯೇ ಉದ್ಯಮಿಗಳಿಗೆ ಹೆಚ್ಚಿನ ಹೊರೆಯಾಗದಂತೆ ಮೌಲ್ಯಾಧಾರಿತ ತೆರಿಗೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಯಿತು. ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದಿ೦ದ ಆಕ್ಟಾಯ್‌ ಪದ್ಧತಿಯನ್ನು ತೆಗೆದು ಹಾಕುವ ಆಶ್ವಾಸನೆಯನ್ನು ಗುಜರಾತ್‌ನ ಜನತೆಗೆ ನೀಡಲಾಗಿತ್ತು. ಗುಜರಾತ್‌ ಸರ್ಕಾರವು ಇದನ್ನು ಅನುಷ್ಠಾನಗೊಳಿಸುವುದಕ್ಕಾಗಿ ಶ್ರೀ ವಜುಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು... ಸಮಿತಿಯು ವಿವಿಧ ಪಾಲುದಾರರು, ಮಹಾಪೌರರು ಹಾಗೂ ನಗರಪಾಲಿಕೆಯ ಆಯುಕ್ತರುಗಳೊಂದಿಗೆ ವಿಶದವಾಗಿ ಚರ್ಚೆ ನಡೆಸಿತು. ಶ್ರೀ ವಜುಭಾಯಿ ವಾಲಾ ಸಮಿತಿಯ ಶಿಫಾರಸಿನ ಮೇರೆಗೆ ಸರ್ಕಾರವು ಒಂದು ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡು, ದಿನಾಂಕ 15-11-2007ರಿಂದ ಆಕ್ಟಾಯ್‌ ಪದ್ಧತಿಯನ್ನು ರದ್ದುಪಡಿಸಿ, ಸಾರ್ವಜನಿಕರ ಹೊರೆಯನ್ನು ತಗ್ಗಿಸಿತು.ಹಣಕಾಸು ಸಚಿವರಾಗಿ ಅವರು ದಿನಾಂಕ 23-02-2007 ರಂದು ವಿಧಾನ ಸಭೆಯಲ್ಲಿ 12 ನೆಯ ಬಾರಿಗೆ ರಾಜ್ಯ ಆಯವ್ಯವನ್ನು ಮಂಡಿಸಿ ದಾಖಲೆಯನ್ನು ಸ್ಥಾಪಿಸಿದ್ದಾರೆ. ಈ ಎಲ್ಲಾ ಹನ್ನೆರಡು ಆಯವ್ಯಯಗಳಲ್ಲಿ ಗಮನಾರ್ಹ ಅಂಶವೆಂದರೆ, ಈ ಯಾವುದೇ 12 ಆಯವ್ಯಯಗಳಲ್ಲಿ ಯಾವುದೇ ರೀತಿಯ ಕರಗಳನ್ನು ಹೆಚ್ಚಿಸಿರುವುದಿಲ್ಲ. ಅವರು ದಿನಾಂಕ 24-02-2012ರಂದು 18ನೆಯ ಬಾರಿಗೆ ಆಯವ್ಯಯ ಮಂಡಿಸಿ, ತಮ್ಮದೇ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸ್ಥಾಪಿಸಿದರು.ಅವರು ಮೋಟಾರು ವಾಹನ ಕಾಯಿದೆಯ ಕರದ ಹಂತವನ್ನು ತಗ್ಗಿಸಿ ಅದನ್ನು ಸರಳೀಕರಿಸಿದರು. ಮೊದಲಿಗೆ 67 ಹಂತಗಳಿತ್ತು, ಅದನ್ನು 18 ಹಂ೦ತಗಳವರೆಗೆ ತಗ್ಗಿಸಿದರು. ವಾಹನ ಪರವಾನಗಿಗಳನ್ನು ವಿತರಿಸಲು ಏಕ ಗವಾಕ್ಷಿ ಪದ್ದತಿಯನ್ನು ಪ್ರಾರಂಭಿಸಲಾಯಿತು. ನೋಂದಣಿ ಪುಸ್ತಕಗಳು, ಗುರುತಿನ ಚೀಟಿ ಮತ್ತು ಅಂತರರಾಜ್ಯ ಚೆಕ್‌ಪೋಸ್ಟ್‌ಗಳನ್ನು ಗಣಕೀಕರಣಗೊಳಿಸಲಾಯಿತು.ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಗುಜರಾತ್‌ ರಾಜ್ಯವು ಭಾರತದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈ ದಾಖಲೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ. ಔದ್ಯಮೀಕರಣವನ್ನುತೀವೃಗೊಳಿಸಲು ನುರಿತ ಕಾರ್ಯಪಡೆಯನ್ನು ಒದಗಿಸುವ ಸಲುವಾಗಿ, ಪ್ರಮುಖ ಕಂಪನಿಗಳಾದ ಎಲ್‌ಆಂಡ್‌ಟಿ, ಬಿ.ಎಂ.ಡಬ್ಲ್ಯು, ಷವರ್ಲೆ, ಹಿಂದೂಸ್ತಾನ್‌ ಮೋಟಾರ್ಸ್‌ ಮತ್ತು ಸ್ಕೋಡಾ ಇತ್ಯಾದಿ ಕಂಪೆನಿಗಳೊಡನೆ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ದುರ್ಬಲ ವರ್ಗ ಮತ್ತು ಮಹಿಳೆಯರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಸ್ಟಾವಲಂಬಿಗಳನ್ನಾಗಿಸುವ ಸಲುವಾಗಿ ಎರಡು ವರ್ಷಗಳ ಅವಧಿಯಲ್ಲಿ 399 ಕೌಶಲ್ಯ ವರ್ಧನ ಕೇಂದ್ರಗಳನ್ನು ಪ್ರಾರಂಭಿಸಲಾಯಿತು.ಪ್ರಸ್ತುತ ಶ್ರೀ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ದಿನಾಂಕ 01-09-2014 ರಂದು ಪ್ರಮಾಣವಚನ ಸ್ವೀಕರಿಸಿ, ಕರ್ನಾಟಕ ಜನತೆಯ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಶ್ರೀ ವಜುಭಾಯಿ ವಾಲಾ ಅವರು ದಿನಾ೦ಕ 26-12-2012 ರಂದು ಗುಜರಾತ್‌ ವಿಧಾನ ಸಭೆಯ ಹಂಗಾಮಿ ಅಧ್ಯಕ್ಷರಾಗಿ (ಸ್ಪೀಕರ್‌) ಕಾರ್ಯನಿರ್ವಹಿಸಲು ನಿಯುಕ್ತಿಗೊಂಡರು. ತದನ೦ತರ ದಿನಾಂಕ 23-01-2013ರಂದು ಸರ್ವಾನುಮತದಿಂದ ಅವರು ಗುಜರಾತ್‌ ವಿಧಾನ ಸಭೆಯ ಅಧ್ಯಕ್ಷರಾಗಿ (ಸ್ಪೀಕರ್‌) ಆಯ್ಕೆಯಾದರು. ಅವರು ದಿನಾ೦ಕ 30-08-2014ರವರೆಗೆ ಸದನದ ಕಾರ್ಯಕಲಾಪಗಳನ್ನು ಸುಲಲಿತವಾಗಿ ನಡೆಸಿಕೊಂಡು ಬಂದರು.ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆ ಹೊಸದಿಲ್ಲಿ, ಇವರ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿ, ಶ್ರೀ ವಾಲಾ ಅವರಿಗೆ “ಭಾರತದ ಸರ್ವೋತ್ತಮ ನಾಗರಿಕ-2906” ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಈ ಪ್ರಶಸ್ತಿಗೆ ಗುಜರಾತ್‌ ರಾಜ್ಯದಿ೦ದ ಆಯ್ಕೆಯಾದ ಏಕೈಕ ವ್ಯಕ್ತಿ ಇವರಾಗಿದ್ದಾರೆ.“ಐ೦ಡಿಯಾ ಇಂಟರ್‌ನ್ಯಾಶನಲ್‌ ಫ್ರೆಂಡ್‌ಶಿಪ್‌ ಸೊಸೈಟಿ'ಹೊಸದಿಲ್ಲಿ ಇವರಿಂದ ದಿನಾ೦ಕ 9ನೆಯ ಜೂನ್‌ 2007 ರಂದು ಮುಂಬಯಿಯಲ್ಲಿ ನಡೆದ “ಆರ್ಥಿಕ ಬೆಳವಣಿಗೆ ಮತ್ತು ರಾಷ್ಟೀಯ ಐಕ್ಕತೆ'ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಇವರಿಗೆ “ಭಾರತ ಗೌರವ ಪುರಸ್ಕಾರ” ನೀಡಿ ಸನ್ಮಾನಿಸಲಾಯಿತು.ಶ್ರೀ ವಾಲಾ ಅವರು ಕಟ್ಟಾ ಪುಸ್ತಕ ಪ್ರೇಮಿಯಾಗಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಓದುತ್ತಾರೆ. ಅಗಾಧ ಓದಿನ ಪರಿಣಾಮವಾಗಿ ಭಾಷೆಯ ಮೇಲೆ ಅವರಿಗೆ ಪ್ರಭುತ್ಥವಿದೆ ಅಲ್ಲದೆ ಜನರ ಮನೋಭಾವನೆಗಳನ್ನು ಅವರು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ. ಹಾಸ್ಯಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದಾಗಿ ಅವರು ಒತ್ತಡದ ಸನ್ನಿವೇಶವನ್ನು ನಿಭಾಯಿಸುವ ವಿಶಿಷ್ಟ ಕಲೆಯನ್ನು ಹೊಂದಿದ್ದಾರೆ. ಅವರೊಬ್ಬ ಸವ್ಯಸಾಚಿ. ಅವರು ಬೃಹತ್‌ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ತಜ್ಞರೊಂದಿಗೂ, ಜನಸಾಮಾನ್ಯರೊಂದಿಗೂ ಚರ್ಚಿಸುತ್ತಾರೆ.ಇವರಿಗೆ ಕ್ರೀಡಾ ಪ್ರಪಂಚದಲ್ಲಿ ಬಹಳ ಅಭಿರುಚಿಯಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಬಂಧಿತ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಾನಪದ ಸಾಹಿತ್ಯ, ಜಾನಪದ ಪದ್ಧತಿ, ಜಾನಪದ ಸಂಗೀತ ಸ೦ಬ೦ಧಿ ಕಾರ್ಯಕ್ರಮಗಳಲ್ಲಿ ಅಭಿರುಚಿಯನ್ನು ಹೊಂದಿರುತ್ತಾರೆ. ಅದರಲ್ಲೂ “ಡಾಯರಾ” ಅಂದರೆ ಪಂಚಪ್ರಾಣ. ಇಂತಹ ಕಾರ್ಯಕ್ರಮಗಳನ್ನು ಅವರು ತಡರಾತ್ರಿಯವರೆಗೆ ಕುಳಿತು ನೋಡಿಆನಂದಿಸುತ್ತಾರೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿನ ಗಮನಾರ್ಹ ಸೇವೆಯಿಂದಾಗಿ ಇವರು ರಾಜಕೋಟ್‌ ನಗರ, ಸೌರಾಷ್ಟ್ರ ವಿಭಾಗ ಮತ್ತು ಗುಜರಾತ್‌ ರಾಜ್ಯದಲ್ಲಿಯೇ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.

 ================================================================================================================================================

                        

           ಡಾ. ಕೆ. ರೋಸಯ್ಯ

     (29-06-2014 ರಿಂದ 31-08-2014ರ ವರೆಗೆ)

ಶ್ರೀಯುತ ಕೋನಿಜೆಟ್ಟಿ ರೋಸಯ್ಯ ಅವರು 1933ರ ಜುಲೈ 4ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವೇಮೂರಿನ ಮಧ್ಯಮ ವರ್ಗದ ಕೃಷಿಕ ಕುಟುಂಬದಲ್ಲಿ ಜನಿಸಿದರು. ಶ್ರೀಯುತರ ತಂದೆ ದಿವಂಗತ ಸುಬ್ಬಯ್ಯನವರು ಕೃಷಿಕರಾಗಿದ್ದರು. ಗುಂಟೂರಿನ ಹಿಂದೂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದು, ವಿದ್ಯಾರ್ಥಿದಿಸೆಯಲ್ಲಿಯೇ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿ 1952ರಲ್ಲಿ ‘ಗುಂಟೂರು ಹಿಂದೂ ಕಾಲೇಜು ವಿದ್ಯಾರ್ಥಿಗಳ ಯೂನಿಯನ್’ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಶ್ರೀಯುತರು ಖ್ಯಾತ ಸ್ವಾತಂತ್ರ್ಯ ಯೋಧರಾದ ಶ‍್ರೀ ಎನ್‌.ಜಿ. ರಂಗ ಅವರ ಕಟ್ಟಾ ಅನುಯಾಯಿಯಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. 1968 ಮತ್ತು 1974ರಲ್ಲಿ ಆಂಧ್ರಪ್ರದೇಶದ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು. 1977ರಿಂದ1979 ರವರೆಗೆ ಆಂಧ್ರಪ್ರದೇಶದ ಕೈಗಾರಿಕಾ ಮೂಲಸೌಲಭ್ಯಗಳ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು 1978 ರಿಂದ 1979ರ ಮೇ ವರೆಗೆ ಆಂಧ್ರ ಪ್ರದೇಶ ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕರಾಗಿದ್ದರು. ಡಾ. ಎಂ. ಚನ್ನಾರೆಡ್ಡಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಶ್ರೀ ಕೆ. ರೋಸಯ್ಯ ಅವರಿಗೆ ರಸ್ತೆ ಮತ್ತು ಕಟ್ಟಡಗಳ ಖಾತೆಯನ್ನು ಹಂಚಿಕೆ ಮಾಡಿದ್ದರು. ಸದರಿ ಖಾತೆಯನ್ನು 1979ರಿಂದ 1980ರವರೆಗೆ ನಿರ್ವಹಿಸಿದರು. 1980-81ರಲ್ಲಿ ಶ್ರೀ. ಟಿ. ಆಂಜಯ್ಯ ಅವರ ಸಚಿವ ಸಂಪುಟದಲ್ಲಿ ವಸತಿ ಮತ್ತು ಸಾರಿಗೆ ಸಚಿವರಾಗಿ1982ರ ಸೆಪ್ಟೆಂಬರ್ ನಿಂದ 1983ರ ಜನವರಿಯವರೆಗೆ ಶ್ರೀ. ಕೆ. ವಿಜಯಭಾಸ್ಕರ್ ರೆಡ್ಡಿ ಅವರ ಸಚಿವಸಂಪುಟದಲ್ಲಿ ಗೃಹ ಸಚಿವರಾಗಿ, 1983ರಿಂದ 1989ರಲ್ಲಿ ವಿಧಾನಪರಿಷತ್ತು ವಿಸರ್ಜನೆಯಾಗುವವರೆಗೆ ಆಂಧ್ರ ಪ್ರದೇಶದ ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. 1989ರ ಡಿಸೆಂಬರಿನಲ್ಲಿ ಡಾ. ಎಮ್. ಚನ್ನಾರೆಡ್ಡಿಯವರು ಎರಡನೆಯ ಬಾರಿಗೆ ಮುಖ್ಯಮಂತ್ರಿಗಳಾದಾಗ ಶ್ರೀಯುತರಿಗೆ ಮತ್ತೊಮ್ಮೆ ಅವರ ಸಚಿವ ಸಂಪುಟದಲ್ಲಿ ಆರ್ಥಿಕ, ಇಂಧನ, ಸಾರಿಗೆ, ಉನ್ನತ ಶಿಕ್ಷಣ, ಕೈಮಗ್ಗ, ಜವಳಿ ಮತ್ತು ಕಾನೂನು ವ್ಯವಹಾರಗಳ ಖಾತೆಯನ್ನು ಹಂಚಿಕೆ ಮಾಡಿದ್ದರು. 1990ರ ಡಿಸೆಂಬರ್‍ ವರೆಗೆ ಸಚಿವರಾಗಿ ಕಾರ್ಯನಿರ್ವಹಿಸಿದ ತರುವಾಯ, ಕೆ. ರೋಸಯ್ಯ ಅವರು 1919-92ರಲ್ಲಿ ಶ್ರೀ ಎನ್. ಜನಾರ್ಧನ ರೆಡ್ಡಿಯವರ ಸಚಿವ ಸಂಪುಟದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಚಿವರಾಗಿ ಖಾತೆಯನ್ನು ವಹಿಸಿಕೊಂಡಿದ್ದರು.

1992-94ರಲ್ಲಿ ಆಗಿನ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆ. ವಿಜಯಭಾಸ್ಕರ ರೆಡ್ಡಿ ಅವರು ಶ್ರೀ ಕೆ. ರೋಸಯ್ಯ ಅವರಿಗೆ ತಮ್ಮ ಸಚಿವ ಸಂಪುಟದಲ್ಲಿ ಹಣಕಾಸು, ಇಂಧನ ಮತ್ತು ವೈದ್ಯಕೀಯ ಮತ್ತು ಆರೋಗ್ಯ ಖಾತೆಯನ್ನು ಹಂಚಿಕೆ ಮಾಡಿದ್ದರು.1995 ರಿಂದ 1997ರವರೆಗೆ ಶ್ರೀ ಕೆ. ರೋಸಯ್ಯ ಅವರು ಆಂಧ್ರ ಪ್ರದೇಶದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 1998ರಲ್ಲಿ ಇವರು ನರಸರಾವ್ ಪೇಟೆ ವಿಧಾನಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಹಾಗೂ ವಿವಿಧ ಸಂಸದೀಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 2004-2009ರವರೆಗೆ ಡಾ. ವೈ.ಎಸ್. ರಾಜಶೇಖರರೆಡ್ಡಿ ಅವರ ಸಚಿವ ಸಂಪುಟದಲ್ಲಿ ಹಣಕಾಸು, ಯೋಜನೆ, ಕಾನೂನು ವ್ಯವಹರಣೆಗಳು, ಆರೋಗ್ಯ ಮತ್ತು ವೈದ್ಯಕೀಯಹಾಗೂ ಕುಟುಂಬ ಕಲ್ಯಾಣ ಖಾತೆಯನ್ನು ಹೊಂದಿದ್ದರು. ಅವರು 2009 ರಲ್ಲಿ ವಿಧಾನಸಭಾ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು ಮತ್ತು ಅವರು ಮತ್ತೆ ಡಾ. ವೈ.ಎಸ್.ರಾಜಶೇಖರ ರೆಡ್ಡಿ ಅವರ ಸಚಿವ ಸಂಪುಟಕ್ಕೆಸೇರ್ಪಡೆಗೊಂಡು ಮೇ 2009 ರಿಂದ ಸೆಪ್ಟೆಂಬರ್ 3, 2009 ರವರೆಗೆ ಹಣಕಾಸು, ಯೋಜನೆ ಮತ್ತು ಕಾನೂನು ವ್ಯವಹಾರಗಳ ಸಚಿವರಾಗಿದ್ದರು. ಆಗಿನ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿಯವರ ಹಠಾತ್ ನಿಧನದಿಂದಾಗಿ ಡಾ. ಕೆ. ರೋಸಯ್ಯ ಅವರು 3ನೇ ಸೆಪ್ಟೆಂಬರ್ 2009 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ 24 ನವೆಂಬರ್ 2010 ರವರೆಗೆ ಮುಂದುವರೆದರು.

7 ವರ್ಷಗಳ ಕಾಲ 16 ಬಾರಿ ಸತತವಾಗಿ ರಾಜ್ಯ ಬಜೆಟ್ ಮಂಡಿಸುವ ಸೌಭಾಗ್ಯ ಅವರದಾಗಿತ್ತು. ಅಕ್ಟೋಬರ್ 2007 ರಲ್ಲಿ ಪ್ರಾಮಾಣಿಕತೆ, ನಿಷ್ಠೆ, ನೇರ ನಡವಳಿಕೆ, ಆಂಧ್ರ ಪ್ರದೇಶದ ಜನರ ಕಲ್ಯಾಣಕ್ಕಾಗಿ ಶ್ರೀಯುತರ ಸಮರ್ಪಣೆಯನ್ನು ಪರಿಗಣಿಸಿ, ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯವು ಕೆ.ರೋಸಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು.

5 ದಶಕಗಳ ಕಾಲ ಆಂಧ್ರಪ್ರದೇಶದ ಜನರಿಗೆ ಸಚಿವರಾಗಿ ಮತ್ತು ಮುಖ್ಯಮಂತ್ರಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಂತರ ಡಾ. ಕೆ. ರೋಸಯ್ಯ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿ 31ನೇ ಆಗಸ್ಟ್ 2011 ರಂದು ತಮಿಳುನಾಡಿನ 23ನೇ ರಾಜ್ಯಪಾಲರಾಗಿ ಪದಧಾರಣ ಮಾಡಿದರು. ಅವರು ಜ್ಞಾನದಾಹಿಗಳಾಗಿದ್ದರು ಮತ್ತು ಪ್ರತಿದಿನ 10ಕ್ಕೂ ಹೆಚ್ಚು ಸುದ್ದಿಪತ್ರಿಕೆಗಳನ್ನು ಓದುವ ಹವ್ಯಾಸವಿತ್ತು. ಅವರು ಶ್ರೀಮತಿ ಶಿವಲಕ್ಷ್ಮಿ ಯವರನ್ನು ವಿವಾಹವಾಗಿದ್ದು ಅವರಿಗೆಇಬ್ಬರುಪುತ್ರರು ಮತ್ತು ಒಬ್ಬಳು ಪುತ್ರಿ ಇದ್ದಾರೆ.

==================================================================================================================================================

                      

                ಡಾ. ಹಂಸರಾಜ್ ಭಾರಧ್ವಜ್

    (24-06-2009 ರಿಂದ 29-06-2014ರ ವರೆಗೆ)

 

ವ್ಯಕ್ತಿ ವಿವರ:

ಡಾ. ಹಂಸರಾಜ್ಭಾರದ್ವಾಜ್ಅ ವರು 1937ರ ಮೇ 17ರಂದು ಹರಿಯಾಣದ ರೋಹ್ಟಕ್ಜಿಲ್ಲೆಯಗರ್ಹಿಸಂಪ್ಲಾ ಗ್ರಾಮದಲ್ಲಿಜನಿಸಿದರು. ಅವರ ತಂದೆ ದಿವಂಗತ ಪಂಡಿತ್ ಜಗನ್ನಾಥ್ಪ್ರಸಾದ್ ಅವರು ಭಾರತದ ಮೊದಲ ಪ್ರಧಾನಿ ಪಂಡಿತ್ಜವಾಹರ್ಲಾಲ್ನೆಹರು ಅವರ ಭದ್ರತಾ ಅಧಿಕಾರಿಗಳಲ್ಲಿ ಒಬ್ಬರಾಗಿ ಸೇವೆಸಲ್ಲಿಸಿದ್ದರು. ಅವರ ತಾಯಿ ದಿವಂಗತ ಶ್ರೀಮತಿ ಸಾರ್ತಿದೇವಿ ಒಬ್ಬ ಧಾರ್ಮಿಕ ಮಹಿಳೆಯಾಗಿದ್ದರು. ಡಾ. ಭಾರದ್ವಾಜ್ ಅವರುಫೆಬ್ರವರಿ, 1960 ರಲ್ಲಿ ಶ್ರೀಮತಿ ಪ್ರಫುಲತಾ ಭಾರದ್ವಾಜ್ಅ ವರನ್ನುವಿವಾಹವಾಗಿದ್ದ ಅವರಿಗೆ ಒಬ್ಬ ಪುತ್ರ ಮತ್ತುಇಬ್ಬರು ಪುತ್ರಿಯರಿದ್ದಾರೆ. ಡಾ.ಭಾರದ್ವಾಜ್ಅವರ ಪತ್ನಿ, ಮಗ ಮತ್ತು ಮಗಳು ವೃತ್ತಿಯಲ್ಲಿ ವಕೀಲರಾಗಿದ್ದಾರೆ.

ಡಾ. ಭಾರದ್ವಾಜ್ಅವರು ತಮ್ಮಆರಂಭಿಕ ಶಿಕ್ಷಣವನ್ನುರೋಹ್ಟಕ್‌ನ ಜಿಬಿಸಿ ಹೈಸ್ಕೂಲ್‌ನಲ್ಲಿಪಡೆದರು. ಅವರು ಹಿಮಾಚಲ ಪ್ರದೇಶದ ಶಿಮ್ಲಾದ ಬಿ.ಎಂ. ಕಾಲೇಜ್‍ನಿಂದ ಪದವಿಯನ್ನುಮತ್ತುಪಂಜಾಬ್ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನುಪಡೆದ ನಂತರ ಆಗ್ರಾವಿಶ್ವವಿದ್ಯಾನಿಲಯದಿಂದ (ಉತ್ತರಪ್ರದೇಶ) ಕಾನೂನು ಪದವಿಪಡೆದರು. ಡಾ. ಭಾರದ್ವಾಜ್ಅವರು ಕಾನೂನು, ಕಾನೂನು ನೆರವು ಮತ್ತು ನ್ಯಾಯಕ್ಷೇತ್ರದಲ್ಲಿ ಸಲ್ಲಿಸಿದ ಅವರ ಶ್ಲಾಘನೀಯ ಕೊಡುಗೆಯನ್ನು ಗುರುತಿಸಿ ಹಲವಾರು ವಿಶ್ವವಿದ್ಯಾಲಯಗಳು ಪ್ರಶಸ್ತಿಗಳು ಮತ್ತುಗೌರವ ಡಾಕ್ಟರೇಟ್ಪದವಿಗಳನ್ನು ನೀಡಿ ಗೌರವಿಸಿವೆ.  ಡಾ. ಹೆಚ್.ಆರ್. ಭಾರದ್ವಾಜ್ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ಹಿರಿಯವಕೀಲರಾಗಿದ್ದಾರೆ ಮತ್ತು ಅವರ ಯಶಸ್ವಿವೃತ್ತಿ ಜೀವನದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನುಅಲಂಕರಿಸಿದ್ದಾರೆ. ಅವರು 1972 ರಿಂದ 77ರ ವರೆಗೆ ದೆಹಲಿ ಆಡಳಿತಕ್ಕೆಪಬ್ಲಿಕ್ಪ್ರಾಸಿಕ್ಯೂಟರ್ಆಗಿ ಮತ್ತು 1980 ರಿಂದಮಾರ್ಚ್ 1982 ರವರೆಗೆ ಉತ್ತರ ಪ್ರದೇಶ ರಾಜ್ಯದ ಹಿರಿಯ ಸ್ಥಾಯಿ ವಕೀಲರಾಗಿ ನೇಮಕಗೊಂಡಿದ್ದರು. ಅವರು ಪ್ರಧಾನಮಂತ್ರಿಯಾಗಿದ್ದ ಭಾರತರತ್ನ ದಿವಂಗತ ಶ್ರೀಮತಿ ಇಂದಿರಾಗಾಂಧಿಅವರ ಪರ ವಕೀಲರಲ್ಲಿಒಬ್ಬರಾಗಿ,ಅಂದಿನ ಪ್ರಧಾನಿ ಶ್ರೀಮೊರಾರ್ಜಿದೇಸಾಯಿ ನೇತೃತ್ವದ ಜನತಾ ಪಕ್ಷ ಸರ್ಕಾರ ಸ್ಥಾಪಿಸಿದ ವಿಶೇಷ ನ್ಯಾಯಾಲಯಗಳಲ್ಲಿ ಹಾಜರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ವಿಭಜನೆಯಿಂದ ಉದ್ಭವಿಸಿದ ಪ್ರಕರಣವನ್ನು ಯಶಸ್ವಿಯಾಗಿ ವಾದಿಸಿದರು.

ರಾಜಕೀಯ ವೃತ್ತಿ ಮತ್ತು ಸಾರ್ವಜನಿಕ ಜೀವನ:

ಶ್ರೀಯುತರು 1982ನೇ ಏಪ್ರಿಲ್ನಲ್ಲಿ ಮಧ್ಯಪ್ರದೇಶ ರಾಜ್ಯದಿಂದ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು. ಅವರು 1988, 1994 ಮತ್ತು 2000 ರಲ್ಲಿಅದೇ ರಾಜ್ಯದಿಂದ ಮರು ಆಯ್ಕೆಯಾದರು. ಹರಿಯಾಣ ರಾಜ್ಯ 2006 ರಲ್ಲಿಐದನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು.

ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರವಹಿಸಿಕೊಳ್ಳುವುದಕ್ಕೂ ಮೊದಲು ಅವರು ಜೂನ್ 26, 2009 ರಂದು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ  ನೀಡಿದರು.

ಡಾ. ಭಾರದ್ವಾಜ್ಅವರು ಹಕ್ಕುಬಾಧ್ಯತಾ ಸಮಿತಿ, ಗೃಹವ್ಯವಹಾರಗಳ ಸ್ಥಾಯಿ ಸಮಿತಿ, ರಾಜ್ಯಸಭೆಯ ಕಾರ್ಯಕಲಾಪಗಳ ಸಲಹಾಸಮಿತಿಯಂತಹ ಹಲವಾರು ಸಂಸದೀಯ ಸಮಿತಿಗಳ ಸದಸ್ಯರೂ ಕೂಡ ಆಗಿದ್ದರು.

ಡಾ. ಭಾರದ್ವಾಜ್ಅವರು 31ನೇ ಡಿಸೆಂಬರ್, 1984 ರಿಂದ ನವೆಂಬರ್, 1989 ರವರೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವರಾಗಿ ಮಂತ್ರಿಮಂಡಲಕ್ಕೆ ಸೇರ್ಪಡೆಗೊಂಡರು, 21 ಜೂನ್ 1991 ರಿಂದ ಜುಲೈ 2, 1992 ರವರೆಗೆ ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯದಲ್ಲಿ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ), 1992 ರಿಂದ ಮೇ 1996 ರವರೆಗೆ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ರಾಜ್ಯ ಸಚಿವರು, ಮೇ 2004 ರಿಂದ ಮೇ 2009 ರವರೆಗೆ ಕಾನೂನು ಮತ್ತು ನ್ಯಾಯದ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಮ್ಮೇಳನ ಮತ್ತು ಸೆಮಿನಾರ್‌ಗಳಲ್ಲಿ ಭಾಗವಹಿಸುವಿಕೆ:

ಡಾ.ಭಾರದ್ವಾಜ್ಅವರು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸಮ್ಮೇಳನಗಳು ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಅವರು ಮಾರಿಷಸ್‍, ಮಲೇಷಿಯಾ, ಘಾನಾ (ದಕ್ಷಿಣಆಫ್ರಿಕಾ) ಸ್ಕಾಟ್ಲೆಂಡ್ (ಯುಕೆ) ನಲ್ಲಿ ನಡೆದ ಕಾಮನ್‌ವೆಲ್ತ್ಕಾನೂನು ಮಂತ್ರಿಗಳ ಸಮ್ಮೇಳನಗಳಿಗೆ ಭಾರತೀಯ ನಿಯೋಗದ ಮುಂದಾಳತ್ವವನ್ನು ವಹಿಸಿದ್ದರು. ಅವರು 1989 ರಲ್ಲಿ ಕೊರಿಯಾ ಗಣರಾಜ್ಯಕ್ಕೆ ಸಂಸದೀಯ ನಿಯೋಗದ ನಾಯಕರಾಗಿ ಭಾರತವನ್ನು ಪ್ರತಿನಿಧಿಸಿದರು. ಅವರು ಬ್ಯಾಂಕಾಕ್, ಟೋಕಿಯೊ, ಹವಾಯಿ, ಹಾಂಗ್ಕಾಂಗ್, ಮನಿಲಾ, ಬೋಸ್ಟನ್ (ಯು.ಎಸ್.ಎ.) ನಲ್ಲಿರುವ ಟಫ್ಟ್ಸ್ವಿಶ್ವವಿದ್ಯಾಲಯದಲ್ಲಿ ಫ್ಲೆಚರ್ಸ್ಕೂಲ್ಆಫ್ಡಿಪ್ಲೋಮಸಿಯಲ್ಲಿ ನಡೆದ ಕಾನೂನು ಸಮ್ಮೇಳನಗಳು ಮತ್ತು ಸೆಮಿನಾರ್‌ಗಳಲ್ಲಿ ಭಾಗವಹಿಸಿದ್ದರು. ಅವರು ನಿಕೋಸಿಯಾದಲ್ಲಿಸೈಪ್ರಸ್‌ನಎಡೆಕ್ಸಮಾಜವಾದಿ ಪಕ್ಷದ 4 ನೇ ಕಾಂಗ್ರೆಸ್ ನಲ್ಲಿ, 1986 ರಲ್ಲಿಸಿಯೋಲ್ಮತ್ತು 1988 ರಲ್ಲಿವಾರ್ಸಾದಲ್ಲಿನಡೆದಇಂಟರ್ ನ್ಯಾಷನಲ್ಲಾಅಸೋಸಿಯೇಷನ್ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು.

ಡಾ. ಭಾರದ್ವಾಜ್ಅವರು ಭಾರತ ಮತ್ತು ವಿದೇಶಗಳಲ್ಲಿನ ಹಲವಾರು ಶೈಕ್ಷಣಿಕ ಮತ್ತು ವೃತ್ತಿಪರ ಸಂಸ್ಥೆಗಳಿಗೆ ಸಕ್ರಿಯ ಸದಸ್ಯರಾಗಿದ್ದಾರೆ. ಅವರು ಇಂಟರ್ ನ್ಯಾಷನಲ್ಸೆಂಟರ್ಫಾರ್ಆಲ್ಟರ್ನೇಟಿವ್ಡಿಸ್ಪ್ಯೂಟ್ರೆಸಲ್ಯೂಷನ್ (ಐಸಿಎಡಿಆರ್), ನವದೆಹಲಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ, ಇದುಹೈದರಾಬಾದ್ಮತ್ತು ಬೆಂಗಳೂರಿನಲ್ಲಿ ತನ್ನ ಶಾಖೆಗಳನ್ನುಹೊಂದಿದೆ. ಅವರು ಆಗಾಗ ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖ ಸ್ಥಾನಗಳನ್ನು ಸಹ ಅಲಂಕರಿಸಿದ್ದರು. ಅವರು ಜಿಲ್ಲಾ ನ್ಯಾಯಾಲಯದ ಬಾರ್ಅಸೋಸಿಯೇಷನ್ಮತ್ತು ದೆಹಲಿಯ ದೆಹಲಿ ಉಚ್ಚನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ಸದಸ್ಯರಾಗಿದ್ದಾರೆ. ಅವರುಏಷ್ಯನ್ಗೇಮ್ಸ್ 1982, ಶಿಕ್ಷಣ ಮತ್ತು ಸಂಸ್ಕೃತಿಯ ಇಂಡೋ-ಯುಎಸ್ಉಪ ಆಯೋಗದ ಕಾನೂನು  ವ್ಯವಹಾರಗಳ ಸಮಿತಿಯ ಸದಸ್ಯರಾಗಿದ್ದರು. ಅವರು ಲಾಏಷ್ಯಾ, ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ (ಐ.ಎಲ್.ಎ) ಮತ್ತು ಯುನೈಟೆಡ್ ಇಂಟರ್ ನ್ಯಾಷನಲ್ ಅಡ್ವೊಕೇಟ್ಸ್ (ಯುಐಎ), ಪ್ಯಾರಿಸ್ ನ ಸಕ್ರಿಯಸದಸ್ಯರಾಗಿದ್ದಾರೆ.

ವಿಶೇಷ ಆಸಕ್ತಿ ಮತ್ತು ಕಳೆದ ಸಮಯಗಳು:

ಶ್ರೀಯುತರು ಸಂಗೀತ, ಸಿನಿಮಾ ಮತ್ತು ರಂಗಭೂಮಿಯಂತಹ ಅನೇಕ ವಿಷಯಗಳ ಬಗ್ಗೆಆಸಕ್ತಿಯುಳ್ಳವರಾಗಿದ್ದಾರೆ.ಭಾರತೀಯ ತತ್ವಶಾಸ್ತ್ರ ಮತ್ತು ಸಂಸ್ಕೃತಿ, ಅಪರಾಧನ್ಯಾಯ, ಪರ್ಯಾಯ ವಿವಾದ ಪರಿಹಾರಗಳು, ಪುಸ್ತಕಗಳನ್ನುಓದುವುದು ಮತ್ತು ಬರೆಯುವುದರಲ್ಲಿ ವಿಶೇಷ ಆಸಕ್ತಿ ಅವರದಾಗಿದೆ.ಸಮಾಜದ ನಿರ್ಗತಿಕರಿಗೆ ಮತ್ತು ವಂಚಿತ ವರ್ಗಗಳಿಗೆ ಸಹಾಯಮಾಡುವುದು, ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನುಪ್ರಚಾರಮಾಡುವುದು ಮತ್ತು ಪರಿಸರ ಸಂರಕ್ಷಣೆ ಅವರ ನೆಚ್ಚಿನ ಆಸಕ್ತಿಯಾಗಿದೆ.

 

 

 

ಪ್ರಕಟಣೆಗಳು:

ಡಾ. ಭಾರದ್ವಾಜ್ಅವರು ನೆಹರೂ ಅವರ ಜಾತ್ಯಾತೀಯ ದೃಷ್ಟಿಕೋನದ ಕಟ್ಟಾ ಅನುಯಾಯಿಯಾಗಿದ್ದು, ಅನೇಕ ಪುಸ್ತಕಗಳನ್ನುಬರೆದಿದ್ದಾರೆ ಅವುಗಳೆಂದರೆ:-

  1. ಲಾ, ಲಾಯರ‍್ಸ್ ಅಂಡ್ ಜಡ್ಜಸ್‍
  2. ಸೋಲ್ ಆಫ್ ಇಂಡಿಯಾ
  3. ಕ್ರೈಂ, ಕ್ರಿಮಿನಲ್ ಜಸ್ಟಿಸ್ ಅಂಡ್ ಹ್ಯೂಮನ್ ರೈಟ್ಸ್‍
  4. ಇಂಡಿಯಾ – ಎ ಫೆಲೋಶಿಫ್ ಆಫ್ ಫೇತ್ಸ್‍

ವಿದೇಶ ಪ್ರವಾಸಗಳು:

ಡಾ.ಭಾರದ್ವಾಜ್ಅವರು ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕ ಪ್ರವಾಸ ಮಾಡಿದ್ದಾರೆ. ಅವರು ಇದುವರೆಗೆ ಯುನೈಟೆಡ್ಕಿಂಗ್‌ಡಮ್, ಯುನೈಟೆಡ್ಸ್ಟೇಟ್ಸ್ಆಫ್ಅಮೇರಿಕಾ, ಮೆಕ್ಸಿಕೊ, ಜಪಾನ್, ಫಿಲಿಪೈನ್ಸ್, ಹಾಂಗ್ಕಾಂಗ್, ಥೈಲ್ಯಾಂಡ್, ಸೈಪ್ರಸ್, ಜರ್ಮನಿ, ಅಲ್ಜೀರಿಯಾ, ಫ್ರಾನ್ಸ್, ಲಿಬಿಯಾ, ಪೋಲೆಂಡ್, ನೆದರ್ ಲ್ಯಾಂಡ್, ಮಲೇಷ್ಯಾ, ಸೌತ್ಕೊರಿಯ ಗಣರಾಜ್ಯ, ಸ್ವಿಟ್ಜರ್ಲೆಂಡ್‌, ಫಿನ್ ಲ್ಯಾಂಡ್, ಆಸ್ಟ್ರಿಯಾ, ಮಾರಿಷಸ್ಮತ್ತು ದಕ್ಷಿಣಆಫ್ರಿಕಾ ಮುಂತಾದ ದೇಶಗಳಿಗೆಭೇಟಿನೀಡಿದ್ದಾರೆ.

ಡಾ. ಭಾರದ್ವಾಜ್ಅವರು ಜೂನ್ 29, 2009 ರಂದು ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರವಹಿಸಿಕೊಂಡಿದ್ದರು.

==============================================================================================================================================

                          

           ಗೌರವಾನ್ವಿತ ಶ್ರೀ ರಾಮೇಶ್ವರ್ ಥಾಕೂರ್

     (21-07-2007 ರಿಂದ 28-06-2009ರ ವರೆಗೆ)

 

ಜನ್ಮ ದಿನಾಂಕ

28ನೇ ಜುಲೈ 1927

ವ್ಯಕ್ತಿ ಮತ್ತು ಶೈಕ್ಷಣಿಕ ವಿವರಗಳು

ಶ್ರೀ ರಾಮೇಶ್ವರ್ ಥಾಕೂರ್ (ಜಾರ್ಖ‌೦ಡಿನ ಗೊಡ್ಡಾ ಜಿಲ್ಲಯಲ್ಲಿನ ಥಾಕೂರ್ ಗಂಗ್ಟಿ ಗ್ರಾಮದಲ್ಲಿ 28ನೇ ಜುಲೈ 1927ರಲ್ಲಿ ಜನಿಸಿದರು). ಶ್ರೀಮತಿ ನರ್ಮದಾ ಥಾಕೂರ್ ಅವರನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಬಾಗಲ್ಪುರ, ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಪಡೆದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಎಂ.ಎ., ಹಾಗೂ ಎಲ್.ಎಲ್.ಬಿ. ಪದವಿಯನ್ನು, ನವದೆಹಲಿಯ ಇನ್ಸ್ಟಿಟ್ಯೂಟ್ಆಫ್ಚಾರ್ಟರ್ಡ್ಅಕೌಂಟೆಂಟ್ಸ್ಆಫ್ಇಂಡಿಯಾ, ದಿಂದಎಫ್.ಸಿ.ಎ.ಯನ್ನು ಪಡೆದರು. ಅವರು 1950 ರ ದಶಕದ ಆರಂಭದಲ್ಲಿ ಚಾರ್ಟರ್ಡ್ಅ ಕೌಂಟೆಂಟ್ಆಗಿದ್ದರು. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ಮ್ಯಾನೇಜ್ಮೆಂಟ್ಸ್ಟಡೀಸ್ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ರಾಷ್ಟ್ರೀಯ ಚಳವಳಿ

ಶ್ರೀ ಠಾಕೂರ್ ಅವರು 1942ರ ಕ್ವಿಟ್‍ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಸಂತಾಲ್ ಪರಗಣಸ್‍ (ಜಾರ್ಖಂಡ್) ನಲ್ಲಿರುವ ರಾಜ್‍ ಮಹಲ್ ಬೆಟ್ಟಗಳಲ್ಲಿ ಸುಮಾರು ಆರು ತಿಂಗಳ ಕಾಲ ಭೂಗತರಾಗಿದ್ದರು. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 1946ರಲ್ಲಿ ಅವರನ್ನು ಬಂಧಿಸಿ ಕಲ್ಕತ್ತಾದ ಸೆಂಟ್ರಲ್ ಜೈಲಿನಲ್ಲಿ (ಡಮ್ ಡಮ್) ಬಂಧಿಸಲಾಯಿತು. ಶ್ರೀಯುತರು ಸಂತಾಲ್ ಪರಗಣಗಳಲ್ಲಿ ಸಾಮಾಜಿಕ ಸುಧಾರಣೆಗಳು, ಪುನಶ್ಚೇತನ ಕಾರ್ಯಚಟುವಟಿಕೆಗಳಲ್ಲಿ ವಿಶೇಷವಾಗಿ ಸಕ್ರಿಯವಾಗಿ ಭಾಗವಹಿಸಿದರು.

 

ಸಾಮಾಜಿಕ ಸಂಘ ಸಂಸ್ಥೆಗಳು

ಶ್ರೀಠಾಕೂರ್ ಅವರು ರಾಷ್ಟ್ರೀಯ ಏಕೀಕರಣಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿಯ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ. ಅವರು ಗೊಡ್ಡಾ ಜಿಲ್ಲೆಯ (ಸಂತಾಲ್ಪರಗಣಸ್) ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಗ ದಾಧರ್ಮಿಶ್ರಸ್ಮಾರಕ ನಿಧಿ ಹಾಗೂ ಹರಿ ದೇವಿ ಸ್ಮಾರಕ ನಿಧಿಯ ಸ್ಥಾಪಕ ಟ್ರಸ್ಟಿಯಾಗಿದ್ದಾರೆ ಮತ್ತು ಗೊಡ್ಡಾಜಿಲ್ಲೆಯಲ್ಲಿ ಹರಿದೇವಿ ಗ್ರಾಮೀಣ ರೆಫರಲ್ಆ ಸ್ಪತ್ರೆ ಎಂದು ಹೆಸರಿಸಲಾದ 30 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ.

ಸಮಿತಿಗಳು ಮತ್ತು ಧರ್ಮಾರ್ಥಗಳು    

ಶ್ರೀಠಾಕೂರ್ ಅವರು ಕಾಲಕಾಲಕ್ಕೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು. ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಅವರು ಭಾರತೀಯ ಚಾರ್ಟರ್ಡ್ಅ ಕೌಂಟೆಂಟ್ಸ್ಸಂಸ್ಥೆ; ಹಿಂದಿನ ಭಾರತೀಯ ಸ್ಕೌಟ್ಸ್&ಗೈಡ್ಸ್ಫೆಲೋಶಿಪ್; ಅಖಿಲ ಭಾರತ ಭಾರತ್ಸ್ಕೌಟ್ಸ್ & ಗೈಡ್ಸ್; ಭಾರತಸರ್ಕಾರದ ಬ್ಯಾಂಕಿಂಗ್ಆಯೋಗದ   ಮೂಲಕ ಸ್ಥಾಪಿತವಾದ ಬ್ಯಾಂಕಿಂಗ್ವೆಚ್ಚಗಳ ಅಧ್ಯಯನ ಸಮೂಹ; ನವದೆಹಲಿಯ ಠಾಕೂರ್ ಸಂಶೋಧನಾ ಪ್ರತಿಷ್ಠಾನ; ಅಸೋಸಿಯೇಟೆಡ್ಜರ್ನಲ್ಸ್ (ನ್ಯಾಷನಲ್ಹೆರಾಲ್ಡ್ಗ್ರೂಪ್ಆಫ್ಪೇಪರ್ಸ್)- ಈ ಎಲ್ಲವುಗಳಿಗೂ ಅಧ್ಯಕ್ಷರಾಗಿದ್ದರು ಮತ್ತು 1968 ರಲ್ಲಿಏಷ್ಯನ್ಮತ್ತುಪೆಸಿಫಿಕ್ಪ್ರದೇಶದ ಅಧ್ಯಕ್ಷರಾಗಿದ್ದರು; 4 ವರ್ಷಗಳಕಾಲ ಯುನಿಟ್ಟ್ರಸ್ಟ್ಆಫ್ಇಂಡಿಯಾದ ನಿರ್ದೇಶಕರಾಗಿದ್ದರು; 3 ವರ್ಷಗಳ ಕಾಲ ಎಕ್ಸ್ ಪೋರ್ಟ್ ಕ್ರೆಡಿಟ್ಮತ್ತು ಗ್ಯಾರಂಟಿ ಕಾರ್ಪೊರೇಷನ್ನ ನಿರ್ದೇಶಕರಾಗಿದ್ದರು; 1978-82ರ ಅವಧಿಯಲ್ಲಿ ಪಂಜಾಬ್ನ್ಯಾಷನಲ್ಬ್ಯಾಂಕ್ನ ನಿರ್ದೇಶಕರಾಗಿದ್ದರು; 3 ವರ್ಷಗಳಕಾಲ ಪಂಜಾಬ್, ಹರಿಯಾಣ ಮತ್ತು ದೆಹಲಿ ಚೇಂಬರ್ಸ್ಆಫ್ಕಾಮರ್ಸ್ನ ನಿರ್ದೇಶಕರಾಗಿದ್ದರು. ಅವರು ಆರ್.ಬಿ.ಐ.ನ ಉತ್ಪಾದಕತೆ, ಕಾರ್ಯದಕ್ಷತೆ ಮತ್ತು ಲಾಭದಾಯಕ ಸಮಿತಿಯ ಸಂಚಾಲಕರಾಗಿದ್ದರು; ಮತ್ತು ಅವರು 1986 ರಿಂದ ಸಂಜಯ್ಗಾಂಧಿ ಸ್ಮಾರಕಟ್ರಸ್ಟ್ನ ಕಾರ್ಯದರ್ಶಿಯಾಗಿದ್ದರು. ಅವರು ಗುರ್ ಗಾವ್ ನ ಮ್ಯಾನೇಜ್ಮೆಂಟ್ಡೆವಲಪ್ಮೆಂಟ್ಇ ನ್ಸ್ಟಿಟ್ಯೂಟ್ ನ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಗ್ರಾಮೀಣಾಭಿವೃದ್ಧಿಯಲ್ಲಿ ಸ್ವಯಂ ಪ್ರೇರಿತ ಭಾಗವಹಿಸುವಿಕೆ ಕುರಿತಾದ ಯೋಜನಾ ಆಯೋಗದ ಸಮಿತಿಯ ಸದಸ್ಯರು(1978-79); ಕೇಂದ್ರ ಪ್ರತ್ಯಕ್ಷ ತೆರಿಗೆ ಸಲಹಾ ಸಮಿತಿ; ಬಿಹಾರ ರಾಜ್ಯ ಯೋಜನಾ ಮಂಡಳಿ; ಉತ್ತರಪ್ರದೇಶ ರಾಜ್ಯ ಯೋಜನಾ ಮಂಡಳಿ; ವಾಣಿಜ್ಯ ಎಐಸಿಟಿಇ; ಆಡಳಿತ ಮಂಡಳಿ, ಗ್ರಾಮೀಣಾಭಿವೃದ್ಧಿ ಗಾಗಿ ಪೀಪಲ್ಸ್ಆಕ್ಷನ್ (ಭಾರತಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ); 1984 ರಲ್ಲಿ ಜಿನೀವಾದಲ್ಲಿ ನಡೆದ ಭಾರತೀಯ ಸಂಸದೀಯ ಒಕ್ಕೂಟ ಸಮ್ಮೇಳನ; 1986-90ರ ಅವಧಿಯಲ್ಲಿ ರಾಜ್ಯ ಸಭೆಯ ಹಕ್ಕು ಭಾದ್ಯತೆಗಳ ಸಮಿತಿ; 1986-89ರ ಅವಧಿಯಲ್ಲಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಈ ಎಲ್ಲವುಗಳ ಆಡಳಿತ ಮಂಡಳಿ ಯಸದಸ್ಯರಾಗಿದ್ದರು. ಅವರು 1964 ರಲ್ಲಿ ಬ್ರಸೆಲ್ಸ್‌ನವರ್ಲ್ಡ್ಕಾಂಗ್ರೆಸ್ಆಫ್ಸ್ಕೌಟ್ಸ್‌ ಗೆ ಭಾರತೀಯ ನಿಯೋಗದ ಮುಖ್ಯಸ್ಥರಾಗಿದ್ದರು; 1982 ರಲ್ಲಿ ಮೆಕ್ಸಿಕೋದ ಇಂಟರ್ ನ್ಯಾಷನಲ್ಕಾಂಗ್ರೆಸ್ಆಫ್ಅಕೌಂಟೆಂಟ್ಸ್; 1984 ರಲ್ಲಿಕೊಲಂಬೊದ ಏಷ್ಯಾ ಪೆಸಿಫಿಕ್ಕೂಟ; 1987 ರಲ್ಲಿ ಲಂಡನ್ನಿನ 17ನೇ ಜನರಲ್ಅಸೆಂಬ್ಲಿಕೋವೆಂಟ್ರಿಗೆ ಭಾರತೀಯ ನಿಯೋಗ- ಈ ಎಲ್ಲವುಗಳ ಸ್ಥಾಪನೆ ಮತ್ತು ಸಮೂಹ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಸಾರ್ವಜನಿಕ ಜೀವನ

ಶ್ರೀಠಾಕೂರ್ ಅವರು ಏಪ್ರಿಲ್ 1984 ರಿಂದ 1990 ರವರೆಗೆ ರಾಜ್ಯ ಸಭೆಗೆ ಮೊದಲ ಬಾರಿಗೆ ಚುನಾಯಿತರಾಗಿದ್ದರು. ಅವರುಏಪ್ರಿಲ್, 1990 ರಿಂದ 1996 ರವರೆಗೆ ರಾಜ್ಯ ಸಭೆಗೆ ಮರು ಆಯ್ಕೆಯಾಗಿದರು. ಅವರು ಕೇಂದ್ರ ಹಣಕಾಸು (ಕಂದಾಯ) ಸಚಿವರಾಗಿದ್ದರು; ಜೂನ್, 1991 ರಿಂದ ಡಿಸೆಂಬರ್, 1994 ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು.

ವಿದೇಶ ಪ್ರವಾಸ

ಶ್ರೀಠಾಕೂರ್ ಅವರು ವ್ಯಾಪಕ ಪ್ರವಾಸ ಕೈಗೊಳ್ಳುತ್ತಿದ್ದ ವ್ಯಕ್ತಿಯಾಗಿದ್ದು ಅವರು ರಷ್ಯಾ, ಪೋಲೆಂಡ್, ಬೆಲ್ಜಿಯಂ, ಫ್ರಾನ್ಸ್, ಪಶ್ಚಿಮ ಜರ್ಮನಿ, ಇಟಲಿ, ಯುನೈಟೆಡ್ಕಿಂಗ್‌ಡಮ್, ಸ್ವಿಟ್ಜರ್ಲೆಂಡ್, ಈಜಿಪ್ಟ್, ಯುನೈಟೆಡ್ಸ್ಟೇಟ್ಸ್, ಮೆಕ್ಸಿಕೊ ಮತ್ತು ಶ್ರೀಲಂಕಾದಂತಹ ಹಲವಾರು ದೇಶಗಳಿಗೆಭೇಟಿನೀಡಿದ್ದಾರೆ.

ವಿಶೇಷ ಆಸಕ್ತಿ

ಶಿಕ್ಷಣ, ಸಾಮಾಜಿಕ ಸೇವೆ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು, ಹರಿಜನ ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಜನರ ಉನ್ನತಿಗಾಗಿ ಶ್ರಮಿಸಿದ್ದಾರೆ.

ಸಂವಿಧಾನಿಕ ಹುದ್ದೆ

17ನೇ ನವೆಂಬರ್, 2004 ರಂದು ಶ್ರೀಠಾಕೂರ್ ಅವರು ಒರಿಸ್ಸಾದ ಗವರ್ನ ರ್ಆಗಿ ನೇಮಕಗೊಂಡು, 29ನೇಜನವರಿ, 2006 ರಿಂದ 22ನೇಆಗಸ್ಟ್, 2007 ರವರೆಗೆ ಆಂಧ್ರ ಪ್ರದೇಶದ ಪ್ರಭಾರವನ್ನೂ ಸಹ ಹೊಂದಿದ್ದರು.

===============================================================================================================================================

                       

                 ಶ್ರೀ  ಟಿ.ಎನ್. ಚತುರ್ವೇದಿ

ಜನ್ಮ ದಿನಾಂಕ

18ನೇ ಜನವರಿ 1928

ಶೈಕ್ಷಣಿಕ ವಿದ್ಯಾರ್ಹತೆಗಳು

ಎಂ.ಎ., ಎಲ್.ಎಲ್.ಬಿ., ತೀರ್ವದ ಎ.ಕೆ.ಕೆ. ಪ್ರೌಢ ಶಾಲೆ, ಕನೂಜ್‍ನ ಎಸ್.ಎನ್. ಇಂಟರ್ ಕಾಲೇಜ್, ಖಾನ್‍ಪುರದ ಕ್ರೈಸ್ಟ್ ಚರ್ಚ್ ಕಾಲೇಜ್ ಮತ್ತು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದರು. 

ವೃತ್ತಿ

 

ನಾಗರಿಕ ಸೇವೆ

1992ನೇ ಜುಲೈನಲ್ಲಿ ರಾಜ್ಯಸಭೆಗೆ ಆಯ್ಕೆಯಾದರು

ಧಾರಣ ಮಾಡಿದ ಹುದ್ದೆಗಳು

1994-95

ಭದ್ರತೆಗಳು ಮತ್ತು ಬ್ಯಾಂಕಿಂಗ್ ವ್ಯವಹರಣೆಗಳಲ್ಲಿ ಅವ್ಯವಹಾರಗಳ ಕುರಿತು ತನಿಖೆ ನಡೆಸುವ ಜಂಟಿ ಸಂಸದೀಯ ಸಮಿತಿಯ ಸದಸ್ಯರು ಹಾಗೂ ಹಣಕಾಸು ಸಮಿತಿಯ ಸದಸ್ಯರು.

1994-95 ಮತ್ತು 1997ರಿಂದ

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಹಕ್ಕುಬಾಧ್ಯತೆಗಳ ಸಮಿತಿಯ ಸದಸ್ಯರು

1995ರಿಂದ

ಆಂತರಿಕ ವ್ಯವಹಾರಗಳ ಸಮಿತಿಯ ಸದಸ್ಯರು

1996-97

ರಾಜ ಭಾಷಾ ಸಮಿತಿಯ ಸದಸ್ಯರು

1996 ಮತ್ತು 18ನೇ ಆಗಸ್ಟ್ 1998ರಿಂದ

ರಾಜ್ಯಸಭಾ ಉಪಾಧ್ಯಕ್ಷರ ಪ್ಯಾನಲ್ ನ ಸದಸ್ಯರು

1998ರ ಜುಲೈ

ರಾಜ್ಯಸಭೆಗೆ ಮರು ಆಯ್ಕೆಯಾದರು

1998ನೇ ಆಗಸ್ಟ್ ನಿಂದ

ಸಾಮಾನ್ಯ ಉದ್ದೇಶಗಳ ಸಮಿತಿಯ ಸದಸ್ಯರು

ರಕ್ಷಣಾ ಮಂತ್ರಾಲಯಕ್ಕೆ ಸಂಬಂಧಿಸಿದ ಸಲಹಾ ಸಮಿತಿಯ ಸದಸ್ಯರು

ಸರ್ಧಾರ್ ಪಟೇಲ್ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರು

1999ನೇ ಡಿಸೆಂಬರ್ ನಿಂದ

ಪೇಟೆಂಟ್ ಗಳ (ಎರಡನೇ ತಿದ್ದುಪಡಿ) ವಿಧೇಯಕ, 1999ಕ್ಕೆ ಸಂಬಂಧಿಸಿದ ಜಂಟಿ ಸಮಿತಿಯ ಅಧ್ಯಕ್ಷರು

ಅಕ್ರಮ ಹಣ ಸಕ್ರಮಗೊಳಿಸುವಿಕೆ ನಿರ್ಬಂಧ ವಿಧೇಯಕ, 1999ರ ಆಯ್ಕೆ ಸಮಿತಿಯ ಸದಸ್ಯರು

2000ರ ಜನವರಿ ಯಿಂದ

ಸಂಸತ್ ಸದಸ್ಯರ ಸಂಬಳಗಳು ಮತ್ತು ಭತ್ಯೆಗಳ ಜಂಟಿ ಸಮಿತಿಯ ಸದಸ್ಯರು

2000ರ ಫೆಬ್ರವರಿ ಯಿಂದ

ರಕ್ಷಣಾ ಸ್ಥಾಯೀ ಸಮಿತಿಯ ಸದಸ್ಯರು

2000ರ ಆಗಸ್ಟ್ ನಿಂದ

ಮಹಿಳೆ ಮತ್ತು ಮಕ್ಕಳ ಪ್ರಯೋಜನಕ್ಕಾಗಿ ಉದ್ದೇಶಿಸಲಾದ ಸರ್ಕಾರಿ ಸ್ಕೀಮುಗಳು ಮತ್ತು ಕಾನೂನುಗಳ ಪುನರವಲೋಕನ ಕಾರ್ಯಪಡೆಯ ಸದಸ್ಯರು

2000ರ ಅಕ್ಟೋಬರ್ ನಿಂದ

ಕೇಂದ್ರ ಸಾಮಾಜಿಕ ಕಲ್ಯಾಣ ಮಂಡಳಿಯ ಕಾರ್ಯ ಪರಿಶೀಲನಾ ಏಕಸದಸ್ಯ ಸಮಿತಿ

2001ರ ಸೆಪ್ಟೆಂಬರ್ ನಿಂದ

ಅಧ್ಯಕ್ಷರು, ಹಿಂದಿ ಭವನ, ನವ ದೆಹಲಿ

2001ರ ನವೆಂಬರ್ ನಿಂದ

ಸದಸ್ಯರು, ಕಾರ್ಯನಿರ್ವಹಣಾ ಮಂಡಳಿ, ಯುನಿಸ್ಕೋ, ಪ್ಯಾರೀಸ್

2001ರ ಡಿಸೆಂಬರ್ ನಿಂದ

ಸಂಸತ್ ಭವನ ಸಂಕೀರ್ಣದ ಭದ್ರತೆಗಾಗಿ ಜಂಟಿ ಸಮಿತಿಯ ಸದಸ್ಯರು;

ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಗ್ರಂಥಾಲಯದ ಉಪಾಧ್ಯಕ್ಷರು

ಮತ್ತು ನೆಹರು ಸ್ಮಾರಕ ಮ್ಯೂಸಿಯಂ ಮತ್ತು ಗ್ರಂಥಾಲಯದ ಕಾರ್ಯನಿರ್ವಹಣಾ ಪರಿಷತ್ತಿನ ಅಧ್ಯಕ್ಷರೂ ಸಹ ಆಗಿದ್ದರು.

2002ರ‌ ಮಾರ್ಚ್ನಿಂದ

ದೆಹಲಿ ಸಾರ್ವಜನಿಕ ಗ್ರಂಥಾಲಯದ ಅಧ್ಯಕ್ಷರು

2002ರ ಏಪ್ರಿಲ್ ನಿಂದ

ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಪರಿಷತ್ತಿನ ಸದಸ್ಯರು;

ಇಂಡಸ್ಟ್ರೀ ಟ್ರಸ್ಟೀ (1) ಲಾಲಾ ದೇವನ್ ಚಂದ್ ಟ್ರಸ್ಟ್; (2) ಭಾರತೀಯ ಜ್ಞಾನಪೀಠದ ಇಲಾಖಾ ಸಂಬಂಧಿತ ಸಂಸದೀಯ ಸ್ಥಾಯೀ ಸಮಿತಿಯ ಅಧ್ಯಕ್ಷರು.

2002ರ ಜೂನ್ ನಿಂದ

ಸಂಸತ್ ಭವನದಲ್ಲಿ ರಾಷ್ಟ್ರೀಯ ನಾಯಕರ ಮತ್ತು ಸಂಸತ್ ಪಟುಗಳ ಭಾವಚಿತ್ರಗಳು ಹಾಗೂ ಪ್ರತಿಮೆಗಳನ್ನು ನಿಲ್ಲಿಸುವ ಜಂಟಿ ಸಮಿತಿಯ ಸದಸ್ಯರು.

2002ರ ಆಗಸ್ಟ್ ನಿಂದ

21ನೇ ಆಗಸ್ಟ್ 2002ರಂದು ಕರ್ನಾಟಕದ ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದರು

ಪ್ರಕಟಿತ ಪುಸ್ತಕಗಳು

(1) ಟ್ರಾನ್ಸ್‍ಫರ್ ಆಫ್ ಟೆಕ್ನಾಲಜಿ ಅಮಾಂಗ್ ಡೆವಲಪಿಂಗ್ ಕಂಟ್ರೀಸ್; (2) ಕಂಪಾರಿಟಿವ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಹಿಂದಿಯಲ್ಲಿಯೂ ಸಹ); ಮತ್ತು (3) ಆಡಳಿತ ಮತ್ತು ಅಭಿವೃದ್ಧಿಯ ವಿವಿಧ ಅಂಶಗಳ ಕುರಿತು ಹಲವಾರು ಪ್ರಕಟಣೆಗಳನ್ನು ಸಂಪಾದಿಸಿದ್ದಾರೆ/ಸಹ ಸಂಪಾದಿಸಿದ್ದಾರೆ; 1970-1998ರ ಅವಧಿಯಲ್ಲಿ 28 ವರ್ಷಗಳ ಕಾಲ ಸಾರ್ವಜನಿಕ ಆಡಳಿತದ ಭಾರತೀಯ ಜರ್ನಲ್ ನ ಸಂಪಾದಕರೂ ಸಹ ಆಗಿದ್ದರು; ಹಲವಾರುಇತರವೃತ್ತಿಪರಮತ್ತುವಿದ್ವತ್ಪೂರ್ಣ ಜರ್ನಲ್ ಗಳ ಸಲಹಾಮಂಡಳಿಗಳ ಸದಸ್ಯರಾಗಿದ್ದರು.

================================================================================================================================================

                         

                  ಶ್ರೀಮತಿ ವಿ.ಎಸ್. ರಮಾದೇವಿ

ಕರ್ನಾಟಕದ ರಾಜ್ಯಪಾಲರು: 1999ನೇ ಡಿಸೆಂಬರ್ 2ರಂದು ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರವನ್ನು ವಹಿಸಿಕೊಂಡರು.

ಹಿಮಾಚಲ ಪ್ರದೇಶದ ರಾಜ್ಯಪಾಲರು: 1997ನೇ ಜುಲೈ 26ರಂದು ರಾಜ್ಯಪಾಲರ ಹುದ್ದೆಯ ಉಸ್ತುವಾರಿ ವಹಿಸಿಕೊಂಡು 1999ರ ಡಿಸೆಂಬರ್ 2ರವರೆಗೆ ಆ ಹುದ್ದೆಯನ್ನು ಅಲಂಕರಿಸಿದ್ದರು.

ವಿದ್ಯಾರ್ಹತೆ: ಎಂ.ಎ., ಎಲ್.ಎಲ್.ಎಂ.,

ನ್ಯಾಯವಾದಿ: ಆಂಧ್ರಪ್ರದೇಶದ ಉಚ್ಚನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದರು.

ನಾಗರಿಕ ಸೇವೆ: ‘ಎ’ ಗುಂಪಿಗೆ ಸೇರಿದ ಅಧಿಕಾರಿಯಾಗಿ ಕೇಂದ್ರ ಸರ್ಕಾರದ ಸೇವೆಗೆ ಸೇರಿದರು ಮತ್ತು ವಿಧಾಯೀ ಇಲಾಖೆಯಲ್ಲಿ ಭಾರತೀಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾಗಿಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ತರುವಾಯ, ಈ ಕೆಳಕಂಡ ಸೇವೆಗಳನ್ನು ಸಹ ಸಲ್ಲಿಸಿದ್ದಾರೆ.

ನ್ಯಾಯಿಕ ಅನುಭವ:

          ಆರ್ಥಿಕ ಮಂತ್ರಾಲಯದ (ಕಂದಾಯ ಇಲಾಖೆ) ಅಡಿಯಲ್ಲಿನ ಮೊದಲ ತಂಡದಲ್ಲಿ ಸೀಮಾಸುಂಕ, ಅಬಕಾರಿ ಮತ್ತು ಚಿನ್ನ ನಿಯಂತ್ರಣ ಅಪೀಲು ಪ್ರಾಧಿಕಾರದ ನ್ಯಾಯಿಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ವಿಶೇಷ ಆಸಕ್ತಿ:

ಪ್ರಕಟಣೆಗಳು:

ವ್ಯಕ್ತಿಗತ ವಿವರಗಳು:

೧೯೩೪ ರ ಜನವರಿ ೧೫ ರಂದು ಶ್ರೀಮತಿ ರಮಾದೇವಿಯವರು ಶ್ರೀವಿ.ವಿ.ಸುಬ್ಬಯ್ಯ ಮತ್ತು ಶ್ರೀಮತಿ ವಿ. ವೆಂಕಟರತ್ನಮ್ಮ ದಂಪತಿಗಳಿಗೆ ಆಂಧ್ರ ಪ್ರದೇಶದ ಚೆಬ್ರೊಲ್ ಎಂಬಲ್ಲಿ ಜನಿಸಿದರು.ಇವರು ಎಲೂರು ಮತ್ತು ಹೈದ್ರಾಬಾದಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಶ್ರೀ ವಿ.ಎಸ್. ರಾಮಾವತಾರ್ ಎಂಬುವವರನ್ನು ವಿವಾಹವಾಗಿ, ಇವರಿಗೆ ಒಬ್ಬ ಪುತ್ರ ಹಾಗೂ ಇಬ್ಬರೂ ಪುತ್ರಿಯರಿದ್ದಾರೆ. ಇವರ ಬಿಡುವಿನ ವೇಳೆಯ ನೆಚ್ಚಿನ ಆಸಕ್ತಿಗಳು, ಓದುವುದು, ಎಡೆಬಿಡದ ನಡಿಗೆಯಲ್ಲಿ ಹೋಗುವುದು ಹಾಗೂ ಪ್ರಕೃತಿಯ ವೀಕ್ಷಣೆ.

ಖಾಯಂ ವಿಳಾಸ:

2-2-18/63/ಬಿ

ಬಗಾಂಬರ್ ಪೇಟ್,

ದುರ್ಗಾ ಬಾಯಿ ದೇಶ್ ಮುಖ್ ಕಾಲೋನಿ,

ಹೈದರಾಬಾದ್-500013

(ಆಂಧ್ರ ಪ್ರದೇಶ)‌

==============================================================================================================================================

                           

                       ಶ್ರೀ ಖುರ್ಷಿದ್ ಅಲಂ ಖಾನ್

       (06.01.1991ರಿಂದ 02.12.1999ರ ವರೆಗೆ)

ಶ್ರೀ ಖುರ್ಷೇದ್ ಆಲಂ ಖಾನ್ ಇವರು 1919ರ 5ನೇ ಫೆಬ್ರವರಿ ರಂದು ಉತ್ತರ ಪ್ರದೇಶದ ಫರೂಖಾಬಾದ್ ಜಿಲ್ಲೆಯ ಕೈಮ್‍ಗಂಜ್‍ನಲ್ಲಿ ಜನಿಸಿದರು.

ಅವರು ತಮ್ಮ ಆರಂಭಿಕ ಶಿಕ್ಷಣದ ನಂತರ, ಪ್ರತಿಷ್ಠಿತ ಸೇಂಟ್ ಜಾನ್ಸ್ ಕಾಲೇಜಿನ ವಿದ್ಯಾರ್ಥಿಯಾಗಿ ಆಗ್ರಾ ವಿಶ್ವವಿದ್ಯಾನಿಲಯಲಕ್ಕೆ ಸೇರ್ಪಡೆಗೊಂಡರು. ಅಲ್ಲಿ ಅವರು ಡಿಸ್ಟಿಂಗ್ಷನ್ ನೊಂದಿಗೆ ಪದವಿ ಗಳಿಸಿಕೊಂಡು, ನಂತರ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಯುಎಸ್ಎಯ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಸಹ ಆಗಿದ್ದರು, ಶ್ರೀಯುತರು ಯು.ಎಸ್.ಎ. ನಲ್ಲಿ ಮ್ಯಾನೇಜ್‌ಮೆಂಟ್ ಸ್ಟಡೀಸ್‌ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಶ್ರೀ ಖಾನ್ ಅವರು ಶಿಕ್ಷಣದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. ಅವರು ನವದೆಹಲಿಯ ಡಾ.ಜಾಕೀರ್ ಹುಸೇನ್ ಸ್ಮಾರಕ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಅವರು ಫರಿದಾಬಾದ್‌ನ ವೈಎಂಸಿಎ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಗ್ಗೆ ಅವರು ಅತೀವ ಆಸಕ್ತಿಯುಳ್ಳವರಾಗಿದ್ದರು.

ಖಾನ್ ಅವರ ನಿರಂತರ ಪ್ರಯತ್ನಗಳ ಫಲವಾಗಿ, ಸಂಸತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾವನ್ನು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಘೋಷಿಸುವುದರ ಮೂಲಕ ಕಾನೂನನ್ನು ಜಾರಿಗೆ ತಂದಿತು. ಶ್ರೀ ಖುರ್ಷೇದ್ ಆಲಂ ಖಾನ್ ಇವರು ಪ್ರಸ್ತುತ ಈ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ. ಇವರು ಕೌನ್ಸಿಲ್ಆಫ್ಇಂಡಿಯನ್ಇನ್‌ಸ್ಟಿಟ್ಯೂಟ್ಆಫ್ಟೆಕ್ನಾಲಜಿಯ ಸದಸ್ಯರೂ ಕೂಡ ಆಗಿದ್ದಾರೆ.

ಶ್ರೀಖುರ್ಷೇದ್ ಆಲಂ ಖಾನ್ ಅವರುರಾಜ್ಯಸಭೆಮತ್ತುಲೋಕಸಭೆಯಸದಸ್ಯರಾಗಿ 15 ವರ್ಷಗಳಕಾಲಪ್ರತಿಷ್ಠಿತಸಂಸದೀಯಪಟುಎಂಬಹೆಗ್ಗಳಿಕೆಯನ್ನುಹೊಂದಿದ್ದಾರೆ.ಅವರು ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ ವಿದೇಶಾಂಗ ವ್ಯವಹಾರಗಳು, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ಜವಳಿ ಮತ್ತು ವಾಣಿಜ್ಯ ಖಾತೆಗಳಂತಹ ವಿವಿಧ ಖಾತೆಗಳನ್ನು ನಿಭಾಯಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವರಾಗಿ, ಅವರು ಪ್ರಪಂಚದಾದ್ಯಂತ ವ್ಯಾಪಕವಾಗಿಪ್ರವಾಸ ಮಾಡಿದ್ದಾರೆ. ಅವರು ಹಲವಾರು ಸಂದರ್ಭಗಳಲ್ಲಿ ವಿಶ್ವಸಂಸ್ಥೆ ಹಾಗೂ ಭದ್ರತಾ ಮಂಡಳಿಯಲ್ಲಿ ಭಾಷಣ ಮಾಡಿದ ಹಿರಿಮೆಯನ್ನು ಸಹಅವರುಹೊಂದಿದ್ದಾರೆ. ದೆಹಲಿ ಮತ್ತು ಲುವಾಂಡಾದಲ್ಲಿ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳ ಸಮ್ಮೇಳನವು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 1988 ರಲ್ಲಿ ಅವರು ಅಮೆರಿಕದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಅವರು 18ನೇ ಜುಲೈ 1989 ರಂದು ಗೋವಾ ರಾಜ್ಯಪಾಲರಾಗಿ ನೇಮಕಗೊಂಡಾಗ ಅವರು ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸಹ ಪ್ರಭಾರದಲ್ಲಿದ್ದರು. ಅವರು 6 ಜನವರಿ 1991 ರಿಂದ ಕರ್ನಾಟಕದ ರಾಜ್ಯಪಾಲರಾಗಿದ್ದರು. ಆಗ ಅವರು ಕೇರಳದ ರಾಜ್ಯಪಾಲರ ಪ್ರಭಾರವನ್ನು ಸಹ ಹೊಂದಿದ್ದರು.

ಶಿಕ್ಷಣ, ಪ್ರವಾಸೋದ್ಯಮ, ಸಾರಿಗೆ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳುಶ್ರೀಖುರ್ಷೇದ್ ಆಲಂ ಖಾನ್ ಅವರ ವಿಶೇಷ ಆಸಕ್ತಿಯ ಕ್ಷೇತ್ರಗಳಾಗಿವೆ. ಓದುವುದು ಮತ್ತು ತೋಟಗಾರಿಕೆಯು ಅವರ ಬಿಡುವಿನ ವೇಳೆಯ ನೆಚ್ಚಿನ ಹವ್ಯಾಸವಾಗಿವೆ. ಶ್ರೀ ಖುರ್ಷೇದ್ ಆಲಂ ಖಾನ್ ಭಾರತದ ಪ್ರಖ್ಯಾತ ರಾಷ್ಟ್ರಪತಿಗಳಲ್ಲೊಬ್ಬರಾದ ಡಾ. ಜಾಕಿರ್ ಹುಸೇನ್ ಅವರ ಅಳಿಯ. ದೇಶ ಸೇವೆಯನ್ನು ಸಲ್ಲಿಸುವ ಕೌಟುಂಬಿಕ ಸಂಪ್ರದಾಯವು ಮೂರನೇ ತಲೆಮಾರಿಗೂ ಮುಂದುವರಿದಿದ್ದು,ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಶ್ರೀ ಸಲ್ಮಾನ್ ಖುರ್ಷೇದ್, ಮಾಜಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದು, ಅವರು ಖುರ್ಷೇದ್ ಆಲಂ ಖಾನ್ ಅವರ ಪುತ್ರ.‌

===============================================================================================================================================

                      

                 ಶ್ರೀ ಭಾನು ಪ್ರತಾಪ್ ಸಿಂಗ್

           (08.05.1990 ರಿಂದ 06.01.1991)

================================================================================================================================================

                             

                 ಶ್ರೀ ವೆಂಕಟಸುಬ್ಬಯ್ಯ ಪೆಂಡೇಕಾಂತಿ

      (26.02.1988 ರಿಂದ 05.02.1990ರ ವರೆಗೆ)

==========================================================================================================================

                              

                           ಶ್ರೀ  ಎ.ಎನ್. ಬ್ಯಾನರ್ಜಿ

       (16-04-1983 ರಿಂದ 25-02-1988ರ ವರೆಗೆ)

=====================================================================================================================

                         

                     ಶ್ರೀ  ಗೋವಿಂದ ನರೈನ್

     (02.08.1977 ರಿಂದ 15.04.1983ರ ವರೆಗೆ)

====================================================================================================================

                          

                      ಶ್ರೀ ಉಮಾಶಂಕರ ದೀಕ್ಷಿತ್

    (10-01-1976 ರಿಂದ 02-08-1977ರ ವರೆಗೆ)

===============================================================================================================================

                      

           ಶ್ರೀ  ಮೋಹನ್ ಲಾಲ್ ಸುಖಾಡಿಯಾ

     (01-02-1972ರಿಂದ 10-01-1976ರವರೆಗೆ)

======================================================================================================================

                          

                          ಶ್ರೀ ಧರ್ಮವೀರ

      (23.10.1969 ರಿಂದ 01-02-1972ರ ವರೆಗೆ)

==================================================================================================================================

                     

            ಶ್ರೀ ಗೋಪಾಲ್ ಸ್ವರೂಪ್ ಪಾಠಕ್

      (13.05.1967 ರಿಂದ 30.08.1969ರ ವರೆಗೆ)

====================================================================================================================================================

                      

                      ಶ್ರೀ    ವಿ.ವಿ. ಗಿರಿ

     (02.04.1965 ರಿಂದ 13.05.1967ರ ವರೆಗೆ)

 

ಶ್ರೀ ವಿ.ವಿ. ಗಿರಿ ಅವರು 10ನೇ ಆಗಸ್ಟ್ 1894ರಂದು ಬರ್ಹಾಂಪುರ, ಗಂಜಾಂ ಜಿಲ್ಲೆ, ಒರಿಸ್ಸಾದಲ್ಲಿ ಜನಿಸಿದರು.  ಮದ್ರಾಸ್ ಮತ್ತು ಐರ್ಲೆ‌೦ಡಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು. 1917ರಲ್ಲಿ ಬಳ್ಳಾರಿ ಜಿಲ್ಲೆಯವರಾದ ಸರಸ್ವತಿ ಬಾಯಿಯವರನ್ನು ವಿವಾಹವಾದರು. 1916ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಲಕ್ನೋ ಅಧಿವೇಶನದಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 1921ರಲ್ಲಿ ಅವರನ್ನು ದಸ್ತಗಿರಿ ಮಾಡಲಾಯಿತು.

ರೈಲ್ವೆ ಕಾರ್ಮಿಕರಕಲ್ಯಾಣಕ್ಕಾಗಿಬಂಗಾಳನಾಗಪುರರೈಲ್ವೇಅಸೋಸಿಯೇಶನ್ಸ್ಥಾಪಿಸಿದರು. ಅಖಿಲ ಭಾರತ ರೈಲ್ವೇ ಕಾರ್ಮಿ‌ಕರ ಒಕ್ಕೂಟದ ಅಧ್ಯಕ್ಷರಾಗಿದ್ದರು. ಅವರು ಎರಡು ಬಾರಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು. 1934ರಲ್ಲಿ ಕೇಂದ್ರ ವಿಧಾನಮಂಡಲಕ್ಕೆ ಆಯ್ಕೆಯಾದರು. ಇವರು ಮದ್ರಾಸ್ ಸರ್ಕಾರದಲ್ಲಿ 1938-39ರ ನಡುವೆ ಕಾರ್ಮಿಕ, ಕೈಗಾರಿಕೆ ಮತ್ತು ಸಹಕಾರೀ ಸಚಿವರಾಗಿದ್ದರು.

1946-47ರಲ್ಲಿ ಶ್ರೀ ಪ್ರಕಾಶಮ್ ಅವರ ಸಚಿವ ಸಂಪುಟದಲ್ಲಿ ಮದ್ರಾಸ್ ರಾಜ್ಯದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1947 ಮತ್ತು 1951ರ ನಡುವೆ ಸಿಲೋನಿನ ಭಾರತೀಯ ಹೈ ಕಮೀಷನರ್ ಆಗಿದ್ದರು, 1952-57ರ ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದು, 1952-54ರ ಅವಧಿಯಲ್ಲಿ ಕೇಂದ್ರ ಕಾರ್ಮಿಕ ಸಚಿವರಾಗಿದ್ದರು.

1961-65ರ ಅವಧಿಯಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾಗಿ, 1961-65ರ ಅವಧಿಯಲ್ಲಿ ಕೇರಳದ ರಾಜ್ಯಪಾಲರಾಗಿ ಹಾಗೂ 1965 ಮತ್ತು 67ರ ಅವಧಿಯಲ್ಲಿ ಹಿಂದಿನ ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದರು. 1967ನೇ ಮೇ 13 ರಿಂದ 1969ನೇ ಮೇ 3ರವರೆಗೆ ಭಾರತದ ಉಪರಾಷ್ಟ್ರಪತಿಯಾಗಿ ಮತ್ತು ೧೯೬೯ನೇ ಆಗಸ್ಟ್ 24 ರಿಂದ ೧೯೭೪ನೇ ಆಗಸ್ಟ್ 23ರವರೆಗೆ ಭಾರತದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಅವರು ಉತ್ತಮ ಬರಹಗಾರ ಮತ್ತು ಭಾಷಣಕಾರರಾಗಿದ್ದರು. ಆಯಾಯ ಕ್ಷೇತ್ರದಲ್ಲಿ ಅಧಿಕೃತವೆಂದು ಪರಿಗಣಿತವಾದ ‘ಕೈಗಾರಿಕಾ ಸಂಬಂಧಗಳು’, ‘ಭಾರತೀಯ ಕೈಗಾರಿಕೆಯಲ್ಲಿ ಕಾರ್ಮಿಕ ಸಮಸ್ಯೆಗಳು’ ಮತ್ತು ಇತರ ಪುಸ್ತಕಗಳನ್ನು ಬರೆದಿದ್ದಾರೆ.

================================================================================================================================

                           

               ಜನರಲ್ ಎಸ್.ಎಮ್. ಶ್ರೀ ನಾಗೇಶ್

      (04.05.1964 ರಿಂದ 02.04.1965ರವರೆಗೆ)

 

============================================================================================================================================

                      

             ಶ್ರೀ ಜಯಚಾಮರಾಜ ಒಡೆಯರ್

          (01.11.1956-15.05.1959,

           01.07.1959-16.04.1960,

           02.07.1960-10.04.1961,

           24.06.1961-19.04.1962,

          20.07.1962-07.08.1963,

          07.10.1963-04.05.1964)

ಮೈಸೂರು ಪ್ರಾಂತ್ಯದ ಕೊನೆಯ ರಾಜ (1940-50). ತತ್ವಜ್ಞಾನಿ, ಸಂಗೀತಜ್ಞ, ರಾಜನೀತಿಜ್ಞ, ಸಮಾಜ ಸೇವಾ ನಿರತ;

18-07-1919ರಂದು ಜನಿಸಿದ ಇವರು ಕಂಠೀರವ ನರಸಿಂಹರಾಜ ಒಡೆಯರ್ ಮತ್ತು ಕೆಂಪು ಚಲುವಾಜಮ್ಮಣ್ಣಿಯವರ ಏಕೈಕ ಪುತ್ರ;

1938ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಇವರಿಗೆ ಐದು ಬಹುಮಾನಗಳು ಹಾಗೂ ಸುವರ್ಣಪದಕಗಳು ಲಭಿಸಿದವು.  1939ರಲ್ಲಿ ಮೊದಲ ಬಾರಿಗೆ ಯುರೋಪಿಗೆ ಪ್ರವಾಸ ಮಾಡಿದರು; ಲಂಡನ್ನಿನಲ್ಲಿ ಹಲವಾರು ಸಂಸ್ಥೆಗಳಿಗೆ ಭೇಟಿ ನೀಡಿ ಬಹುತೇಕ ಕಲಾವಿದರು ಮತ್ತು ವಿದ್ವಾಂಸರುಗಳನ್ನು ಪರಿಚಯಿಸಿಕೊಂಡರು.

1940ನೇ ಸೆಪ್ಟೆಂಬರ್ 8ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉತ್ತರಾಧಿಕಾರಿಯಾಗಿ ಮೈಸೂರಿನ ಸಿಂಹಾಸನವನ್ನು ಏರಿದರು. ಸ್ವಾತಂತ್ರ್ಯದ ನಂತರ ಭಾರತ ಒಕ್ಕೂಟದೊಂದಿಗೆ ತಮ್ಮ ಸಂಸ್ಥಾನವನ್ನು ವಿಲೀನಗೊಳಿಸಲು ಮುಂದಾದವರಲ್ಲಿ ಇವರೇ ಮೊದಲಿಗರು. ಆದರೆ ಭಾರತವು ಸಾವರ್ಭೌಮ ಗಣರಾಜ್ಯವಾಗುವವರೆಗೆ ಅಂದರೆ 1950ನೇ ಜನವರಿ 26ರವರೆಗೂ ಅವರು ಮುಂದುವರೆದರು. 1950-56ರ ಅವಧಿಯವರೆಗೆ ಇವರು ರಾಜಪ್ರಮುಖರಾಗಿದ್ದರು ಹಾಗೂ 1956-65ರವರೆಗೆ ಆಗಿನ ಮೈಸೂರು ರಾಜ್ಯದ (ಈಗ ಕರ್ನಾಟಕ) ಮೊದಲ ರಾಜ್ಯಪಾಲರಾಗಿದ್ದರು ಮತ್ತು 1964-67ರ ಅವಧಿಯಲ್ಲಿ ಅಂದಿನ ಮದ್ರಾಸ್ ರಾಜ್ಯ (ಈಗಿನ ತಮಿಳುನಾಡು) ದ ರಾಜ್ಯಪಾಲರಾಗಿದ್ದರು.

 ಇವರು ಒಳ್ಳೆಯ ಕುದುರೆ ಸವಾರರು ಹಾಗೂ ಟೆನಿಸ್ ಆಟಗಾರರು. ಓದಿನಂತೆ ಸಂಗೀತದಲ್ಲೂ ಇವರಿಗೆ ಅಮಿತ ಆಸಕ್ತಿ. ಇವರಿಗೆ ಪಾಶ್ಚಾತ್ಯ ಸಂಗೀತದಲ್ಲೂ ಸಹ ವಿಶೇಷ ಆಸಕ್ತಿ ಇತ್ತು. ಇವರು ಹಲವಾರು ಮೌಲ್ಯಯುತವಾದ ಪುಸ್ತಕಗಳನ್ನು ಬರೆದಿದ್ದಾರೆ: ಅವುಗಳಲ್ಲಿ ಪ್ರಮುಖವಾದವುಗಳೆಂದರೆ “ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್ (1956), ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್. 

ಆಸ್ಟ್ರೇಲಿಯದ ಕ್ವೀನ್ಸ್ ಲೆಂಡ್ ವಿಶ್ವವಿದ್ಯಾಲಯ ಇವರಿಗೆ ಡಿ.ಲಿಟ್. ಪದವಿ, ಬನಾರಸ್ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರ್ ಆಫ್ ಲಾ ಪದವಿಯನ್ನೂ (1942), ಅಣ್ಣಾಮಲೈ ವಿಶ್ವವಿದ್ಯಾಲಯ ಡಿ.ಲಿಟ್. ಪದವಿಯನ್ನೂ (1955) ನೀಡಿ ಗೌರವಿಸಿದುವು. 1945ರಲ್ಲಿ ಇವರು ಲಂಡನಿನ ಟ್ರಿನಿಟಿ ಸಂಗೀತ ಕಾಲೇಜಿನ ಗೌರವ ಫೆಲೊ ಆಗಿದ್ದರು. ಇವರ ಪಾಂಡಿತ್ಯ ಮತ್ತು ಪ್ರತಿಭೆಗಳನ್ನು ಮನಗಂಡು ಬ್ರಿಟಿಷ್ ಸರ್ಕಾರ ಇವರಿಗೆ 1945ರಲ್ಲಿ ಜಿ.ಸಿ.ಎಸ್.ಐ. ಬಿರುದನ್ನೂ 1946ರಲ್ಲಿ ಜಿ.ಸಿ.ಬಿ. ಬಿರುದನ್ನೂ ನೀಡಿ ಸನ್ಮಾನಿಸಿತು.

‌                                                                                                       ***********

 

×
ABOUT DULT ORGANISATIONAL STRUCTURE PROJECTS